ಕೊಡಗು: ಜಿಲ್ಲೆಯ ಮಡಿಕೇರಿಗೂ ಡ್ರಗ್ಸ್ ಮಾಫಿಯಾ ಜಾಲ ವ್ಯಾಪಿಸಿದೆ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಡಿಕೇರಿಯಲ್ಲಿ ಮಾದಕ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನೊಬ್ಬ ಬೆಂಗಳೂರಿನ ಶಿವಾಜಿನಗರದವ ಬೆಂಗಳೂರಿನ ಓರ್ವ ಹಾಗೂ ಜಿಲ್ಲೆಯ ಇಬ್ಬರನ್ನ ಬಂಧಿಸಿರುವ ಖಾಕಿ ಬಂಧಿತರನ್ನು ಬೆಂಗಳೂರಿನ ಶಿವಾಜಿನಗರದ ಮುಜಾಮಿಲ್ (31) ಹಾಗೂ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಮಜೀದ್ (35) ಮತ್ತು ಶಿಯಾಬುದ್ದೀನ್ (32) ಎಂದು ಗುರುತಿಸಲಾಗಿದೆ.
ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನ ವಶಕ್ಕೆ ಪಡೆದಿರೋ ಜಿಲ್ಲಾ ಪೊಲೀಸರು ಮಡಿಕೇರಿಯಿಂದ ಬೆನ್ನಟ್ಟಿ ಕುಶಾಲನಗರದ ಗುಡ್ಡೆಹೊಸೂರು ಬಳಿ ಕಾರು ಅಡ್ಡಗಟ್ಟಿ ಆರೋಪಿಗಳನ್ನ ಸೆರೆಹಿಡಿಯಲಾಗಿದ್ದು ಬಂಧಿತರಿಂದ 300 ಗ್ರಾಂ ತೂಕದ 7.50 ಲಕ್ಷ ಮೌಲ್ಯದ ಡ್ರಗ್ಸ್ ಸಹ ಜಪ್ತಿ ಮಾಡಲಾಗಿದೆ.
ಬೆಂಗಳೂರಿನಿಂದ ಡ್ರಗ್ಸ್ ತಂದು ಸಪ್ಲೆ ಮಾಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಇದರಲ್ಲಿ ವಿದೇಶಿ ಪ್ರಜೆಗಳು ಕೈವಾಡವಿರುವ ಗುಮಾನಿ ಇದೆ.