ಲಾಕ್ಡೌನ್ ವೇಳೆ ಚಿತ್ರರಂಗದಲ್ಲಿ 4 ಕೋಟಿ ಡ್ರಗ್ಸ್ ದಂಧೆ ನಡೆದಿದೆ -ನಿರ್ದೇಶಕ ಇಂದ್ರಜಿತ್
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಬಂದಿರುವ 3ನೇ ಪೀಳಿಗೆಯವರಿಂದ ಹೀಗಾಗಿದೆ. ಮೂರನೇ ಪೀಳಿಗೆಯವರು ಸ್ಯಾಂಡಲ್ವುಡ್ನ ಕೆಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆಲವು ನಟ, ನಟಿಯರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ವೇಳೆ ರೇವ್ ಪಾರ್ಟಿ ಸೇರಿ ಹಲವು ನಡೆಯುತ್ತೆ. ಈ ಹಿಂದೆ ಈ ರೀತಿ ಇರಲಿಲ್ಲ. ಈ ಹಿಂದೆ ನಮ್ಮ ಕನ್ನಡ ಚಿತ್ರರಂಗ ಸಾಂಪ್ರದಾಯಿಕವಾಗಿತ್ತು ಎಂದು ತಮ್ಮ ನೋವು […]
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಬಂದಿರುವ 3ನೇ ಪೀಳಿಗೆಯವರಿಂದ ಹೀಗಾಗಿದೆ. ಮೂರನೇ ಪೀಳಿಗೆಯವರು ಸ್ಯಾಂಡಲ್ವುಡ್ನ ಕೆಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೆಲವು ನಟ, ನಟಿಯರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ವೇಳೆ ರೇವ್ ಪಾರ್ಟಿ ಸೇರಿ ಹಲವು ನಡೆಯುತ್ತೆ. ಈ ಹಿಂದೆ ಈ ರೀತಿ ಇರಲಿಲ್ಲ. ಈ ಹಿಂದೆ ನಮ್ಮ ಕನ್ನಡ ಚಿತ್ರರಂಗ ಸಾಂಪ್ರದಾಯಿಕವಾಗಿತ್ತು ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
‘ಮಾಹಿತಿ ಇಟ್ಟುಕೊಂಡೇ ಆರೋಪ ಮಾಡುತ್ತಿರುವೆ’ ಆದರೆ ಈಗ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ. ಚಿತ್ರರಂಗದವರು ಸಿಕ್ಕಿ ಹಾಕಿಕೊಂಡರೂ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಲಾಕ್ಡೌನ್ ವೇಳೆ ₹3.5ಯಿಂದ 4 ಕೋಟಿ ಡ್ರಗ್ಸ್ ದಂಧೆ ನಡೆದಿದೆ ಎಂದು ನಾನು ಮಾಹಿತಿ ಇಟ್ಟುಕೊಂಡೇ ಆರೋಪ ಮಾಡುತ್ತಿರುವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಕೆಲವು ನಟರ ಎಸ್ಟೇಟ್ಗಳಿಗೆ ಡ್ರಗ್ಸ್ ಸರಬರಾಜಾಗುತ್ತಿವೆ. ಇದು ಅವರು ಬೆವರು ಸುರಿಸಿ ಕೊಟ್ಟಿರುವ ಹಣ ಅಲ್ಲ. ಜೊತೆಗೆ, ಕಾರು ಅಪಘಾತವಾದ ವೇಳೆ ಆ ನಟಿಯ ಹೆಸರು ಬಹಿರಂಗಪಡಿಸಲಿಲ್ಲ.
ಅವರ ವಿರುದ್ಧ ಯಾವುದೇ ಕ್ರಮ ಸಹ ಕೈಗೊಂಡಿಲ್ಲ. ಅಪಘಾತವಾದ ಕಾರ್ನಲ್ಲಿ ಡ್ರಗ್ಸ್ ಸಿಕ್ಕಿದ್ದರೂ ಕ್ರಮ ಕೈಗೊಂಡಿಲ್ಲ. ಇವೆಲ್ಲದಕ್ಕೂ 4 ಪುಟಗಳ ದಾಖಲೆ ಇದೆ ನನ್ನ ಬಳಿ. ಹಣ ಪಾವತಿ ಮಾಡಿರುವ ಬಗ್ಗೆಯೂ ದಾಖಲೆ ಇದೆ. ಇಷ್ಟೆಲ್ಲಾ ಇದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.
ಜಾಲದಲ್ಲಿರುವ ನಟ, ನಟಿಯರ ಹೆಸರು ಬಹಿರಂಗವಾಗಿಲ್ಲ. ಇದರಲ್ಲಿ ರಾಜಕಾರಣಿಗಳು, ಅವರ ಪುತ್ರರ ಪ್ರಭಾವವಿದೆ. ನಟಿಯರ ಮೇಲಿನ ಮೋಹದಿಂದ ರಾಜಕಾರಣಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ.