ನಶೆಯೇರಿ.. ಸೂರ್ಯಸಿಟಿಯಲ್ಲಿ ರಸ್ತೆ ಮಧ್ಯೆ ವಾಹನಕ್ಕೆ ಬೆಂಕಿ ಕಡ್ಡಿಗೀರಿದ!
ಆನೇಕಲ್: ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಸೂರ್ಯಸಿಟಿಯಲ್ಲಿ ನಡೆದಿದೆ. ರಾಜ್ಯ ಸರ್ಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದಾಗಿನಿಂದ ಕುಡುಕರ ಅನೇಕ ಅವಾಂತರಗಳು ರಾಜ್ಯದಲ್ಲಿ ನಡೆಯುತ್ತಿವೆ. ಅದೇ ರೀತಿ ಇಲ್ಲೊಬ್ಬ ಕುಡುಕ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಬೈಕ್ಗೆ ಬೆಂಕಿಯಿಟ್ಟಿದ್ದಾನೆ. ನೂರಾರು ವಾಹನಗಳು ಸಂಚರಿಸುತ್ತಿದ್ದರು ಗಮನಿಸದೆ ಸೂರ್ಯನಗರದ ಮುಖ್ಯ ರಸ್ತೆಯ ಮಧ್ಯೆ ಬೈಕ್ ಬೀಳಿಸಿ ಬೆಂಕಿಯಿಟ್ಟು ಪುಂಡಾಟ ಮೆರೆದಿದ್ದಾನೆ. ಬೆಂಕಿಯಿಂದ ಬೈಕ್ ಹೊತ್ತಿ ಉರಿದಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]
Follow us on
ಆನೇಕಲ್: ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಸೂರ್ಯಸಿಟಿಯಲ್ಲಿ ನಡೆದಿದೆ. ರಾಜ್ಯ ಸರ್ಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದಾಗಿನಿಂದ ಕುಡುಕರ ಅನೇಕ ಅವಾಂತರಗಳು ರಾಜ್ಯದಲ್ಲಿ ನಡೆಯುತ್ತಿವೆ. ಅದೇ ರೀತಿ ಇಲ್ಲೊಬ್ಬ ಕುಡುಕ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಬೈಕ್ಗೆ ಬೆಂಕಿಯಿಟ್ಟಿದ್ದಾನೆ.
ನೂರಾರು ವಾಹನಗಳು ಸಂಚರಿಸುತ್ತಿದ್ದರು ಗಮನಿಸದೆ ಸೂರ್ಯನಗರದ ಮುಖ್ಯ ರಸ್ತೆಯ ಮಧ್ಯೆ ಬೈಕ್ ಬೀಳಿಸಿ ಬೆಂಕಿಯಿಟ್ಟು ಪುಂಡಾಟ ಮೆರೆದಿದ್ದಾನೆ. ಬೆಂಕಿಯಿಂದ ಬೈಕ್ ಹೊತ್ತಿ ಉರಿದಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.