ಅಕ್ರಮ ಮರಳು ಸಾಗಾಣಿಕೆಗೆ ಸಹಕಾರ: DySP, ಸಿಬ್ಬಂದಿ ಅಮಾನತು

  • Publish Date - 5:16 pm, Thu, 3 September 20
ಅಕ್ರಮ ಮರಳು ಸಾಗಾಣಿಕೆಗೆ ಸಹಕಾರ: DySP, ಸಿಬ್ಬಂದಿ ಅಮಾನತು

ಚಾಮರಾಜನಗರ: ಅಕ್ರಮ ಮರಳು ಸಾಗಾಣಿಕೆಗೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ Dy SP ಜೆ. ಮೋಹನ್​ರನ್ನ ಅಮಾನತು ಮಾಡಲಾಗಿದೆ.

ಮೋಹನ್​ರನ್ನ ಅಮಾನತು ಮಾಡಿ ಸರ್ಕಾರದ ಒಳಾಡಳಿತ (ಪೊಲೀಸ್ ಸೇವೆಗಳು) ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಚಾಮರಾಜನಗರ ಗ್ರಾಮಾಂತರ CI ಮಂಜು, SI ಸುನಿಲ್, ಹಾಗೂ ಮುಖ್ಯಪೇದೆ ನಾಗನಾಯಕ ಅಮಾನತುಗೊಂಡಿದ್ದಾರೆ.

ಏನಿದು ಪ್ರಕರಣ? ಮೇ. 15 ರಂದು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದು ಅಪಘಾತವಾಗಿತ್ತು. ಈ ವೇಳೆ ಅದರಲ್ಲಿ ಮರಳು ಬದಲಾಗಿ M-ಸ್ಯಾಂಡ್ ಸಾಗಿಸಲಾಗುತ್ತಿತ್ತು ಎಂದು ಬಿಂಬಿಸಲಾಗಿತ್ತು. ಹೀಗಾಗಿ, ಅಕ್ರಮ ಮರಳು ಸಾಗಾಣಿಕೆಗೆ ಸಹಕರಿಸಲು ಪ್ರಕರಣ ತಿರುಚಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಕೆಲ ಪೊಲೀಸ್​ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ಇದೀಗ ಅಮಾನತು ಆದೇಶ ಹೊರಡಿಸಲಾಗಿದೆ.

Click on your DTH Provider to Add TV9 Kannada