ಬಸವನಬಾಗೇವಾಡಿಯಲ್ಲಿ ಭೂಕಂಪನ; ಗೋಡೆಗಳಲ್ಲಿ ಬಿರುಕು, ಹೆದರಿ ಓಡಿದ ಜನರು
ಭೂಮಿ ಕಂಪಿಸುವ ಜತೆಗೆ ಕೆಲವು ಮನೆಗಳು ಬಿರುಕು ಬಿಟ್ಟಿವೆ. ಹಾಗೇ ಮೇಲ್ಛಾವಣಿಗಳಿಂದ ಮಣ್ಣು ಉದುರಿಬಿದ್ದಿದ್ದು, ಜನರೆಲ್ಲ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಭೂಮಿ ಕಂಪಿಸಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವುದು.
ವಿಜಯಪುರ: ಇಲ್ಲಿನ ಬಸವನಬಾಗೇವಾಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ನೆಲ ಅಲುಗಾಡಿದಂತೆ ಭಾಸವಾಗಿದೆ ಎಂದು ಮನಗೂಳಿ, ಉಕ್ಕಲಿ ಗ್ರಾಮಗಳ ಜನರು ಹೇಳಿದ್ದಾರೆ.
ಭೂಮಿ ಕಂಪಿಸುವುದರ ಜತೆಗೆ ಕೆಲವು ಮನೆಗಳು ಬಿರುಕು ಬಿಟ್ಟಿವೆ. ಹಾಗೇ ಮೇಲ್ಛಾವಣಿಗಳಿಂದ ಮಣ್ಣು ಉದುರಿಬಿದ್ದಿದ್ದು, ಜನರೆಲ್ಲ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಹಿಂದೊಮ್ಮೆ ಕೋಲ್ಜಾರ ತಾಲೂಕಿನ ಗ್ರಾಮಗಳಲ್ಲಿ ಇದೇ ರೀತಿ ಆಗಿತ್ತು.
ಅಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಭೂವಿಜ್ಞಾನಿಗಳು, ಇದು ಭೂಕಂಪವಲ್ಲ, ಭೂಮಿಯ ಪದರುಗಳ ಚಲನೆಯಿಂದ ಶಬ್ದ ಆಗಿದ್ದು ಎಂದು ತಿಳಿಸಿದ್ದರು. ಇದೀಗ ಬಸವನಬಾಗೇವಾಡಿ ತಾಲೂಕಿನ ಕೆಲ ಗ್ರಾಮಗಳು ಭೂಕಂಪನವಾಗಿದೆ ಎನ್ನುತ್ತಿದ್ದು, ಆತಂಕ ವ್ಯಕ್ತವಾಗಿದೆ.



