Don Bosco ಹೆಸರಲ್ಲಿ ದೋಖಾ.. ವಿದ್ಯಾರ್ಥಿಗಳೇ ವೆಬ್‌ಸೈಟ್ ನೋಡಿ ಮೋಸ ಹೋಗಬೇಡಿ

| Updated By: ಸಾಧು ಶ್ರೀನಾಥ್​

Updated on: Aug 31, 2020 | 9:15 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ದೋಖಾ ಮಾಡಲಾಗುತ್ತಿದೆ. ಡಾನ್ ಬಾಸ್ಕೋ ಇಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ವ್ಯವಹಾರ ನಡೆಸಿ ನಕಲಿ ಮ್ಯಾನೇಜ್​​ಮೆಂಟ್ ಕಾಲೇಜಲ್ಲಿ ವಿದ್ಯಾರ್ಥಿಗಳು ಓದ್ತಿದ್ದಾರಂತೆ. ಕಾನೂನುಬಾಹಿರವಾಗಿ ಬೆಂಗಳೂರಿನ ಜಯನಗರದ ಡಾನ್‌ ಬಾಸ್ಕೋ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಮಾನ್ಯತಾ ಎಜುಕೇಷನ್ ಟ್ರಸ್ಟ್‌ನಿಂದ ತರಗತಿ ಮಾಡಲಾಗುತ್ತಿದೆ. ಎರಡು ವರ್ಷದಲ್ಲಿ 2 ಪದವಿಯ ಆಸೆ ತೋರಿಸಿ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲಾಗುತ್ತಿದೆ. ಬಿಗ್ ಡಾಟಾ & ಬ್ಯುಸಿನೆಸ್ ಅನಾಲಿಟಿಕ್ಸ್‌ನಲ್ಲಿ ಎಂಎಸ್​ಸಿ, ಪಿಜಿಡಿಎಂ ಕೋರ್ಸ್‌ […]

Don Bosco ಹೆಸರಲ್ಲಿ ದೋಖಾ.. ವಿದ್ಯಾರ್ಥಿಗಳೇ ವೆಬ್‌ಸೈಟ್ ನೋಡಿ ಮೋಸ ಹೋಗಬೇಡಿ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ದೋಖಾ ಮಾಡಲಾಗುತ್ತಿದೆ. ಡಾನ್ ಬಾಸ್ಕೋ ಇಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ವ್ಯವಹಾರ ನಡೆಸಿ ನಕಲಿ ಮ್ಯಾನೇಜ್​​ಮೆಂಟ್ ಕಾಲೇಜಲ್ಲಿ ವಿದ್ಯಾರ್ಥಿಗಳು ಓದ್ತಿದ್ದಾರಂತೆ.

ಕಾನೂನುಬಾಹಿರವಾಗಿ ಬೆಂಗಳೂರಿನ ಜಯನಗರದ ಡಾನ್‌ ಬಾಸ್ಕೋ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಮಾನ್ಯತಾ ಎಜುಕೇಷನ್ ಟ್ರಸ್ಟ್‌ನಿಂದ ತರಗತಿ ಮಾಡಲಾಗುತ್ತಿದೆ. ಎರಡು ವರ್ಷದಲ್ಲಿ 2 ಪದವಿಯ ಆಸೆ ತೋರಿಸಿ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲಾಗುತ್ತಿದೆ. ಬಿಗ್ ಡಾಟಾ & ಬ್ಯುಸಿನೆಸ್ ಅನಾಲಿಟಿಕ್ಸ್‌ನಲ್ಲಿ ಎಂಎಸ್​ಸಿ, ಪಿಜಿಡಿಎಂ ಕೋರ್ಸ್‌ ಹೆಸರಲ್ಲಿ ವಿದ್ಯಾರ್ಥಿಗಳಿಗೆ ನಾಮ ಹಾಕಲಾಗುತ್ತಿದೆ.

ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ದೋಖಾ:
ಹೆಸರು, ವೆಬ್‌ಸೈಟ್, ಜಾಹೀರಾತು, ವ್ಯವಹಾರ ಎಲ್ಲವೂ ಡಾನ್ ಬಾಸ್ಕೋ ಇಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿದೆ. ಆದ್ರೆ ಮ್ಯಾನೇಜ್‌ಮೆಂಟ್ ಕಾಲೇಜು ಎಂದು ಹೇಳಿ ಸುಲಿಗೆ ಮಾಡಲಾಗುತ್ತಿದೆ. ಈ ಅನಧಿಕೃತ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ
ಸುಮಾರು 300-400 ವಿದ್ಯಾರ್ಥಿಗಳು ಓದುತ್ತಿದ್ದಾರೆ. 2 ವರ್ಷದ ಕೋರ್ಸ್‌ಗೆ ವಿದ್ಯಾರ್ಥಿಗಳಿಂದ ತಲಾ 20-30 ಲಕ್ಷ ರೂ. ವಸೂಲಿ ಮಾಡಲಾಗುತ್ತಿದೆ.

ಬೆಂಗಳೂರು ಕೇಂದ್ರ ವಿವಿಯಿಂದ ಮಾನ್ಯತೆ ಪಡೆಯದೆ ಡಾನ್‌ ಬಾಸ್ಕೋ ಸ್ಕೂಲ್ 2 ಅಕ್ಯಾಡೆಮಿಕ್ ಕ್ಲಾಸ್ ನಡೆಸುತ್ತಿದೆ. ಬೆಂಗಳೂರು ವ್ಯಾಪ್ತಿಯಲ್ಲಿದ್ರೂ ಜರ್ಮನಿಯ FOM ವಿವಿ ಕ್ಲಾಸ್. ಇದು ಮಾನ್ಯತಾ ಎಜುಕೇಷನ್ ಟ್ರಸ್ಟ್‌ ಅಡಿ ನೋಂದಾಯಿತ ಸಂಸ್ಥೆ. ಸಿಇಒ ಮಂಜುನಾಥ್ 2 ಟ್ರಸ್ಟ್‌ಗಳಲ್ಲಿ ಟ್ರಸ್ಟಿಯಾಗಿದ್ದಾರೆ. ಕಾಲೇಜ್​ನಲ್ಲಿ ಸೌಲಭ್ಯಗಳಿಲ್ಲ, ಲೈಬ್ರರಿ ಇಲ್ಲ, ಕ್ಯಾಂಪಸ್ ಇಲ್ಲ. ವಿವಿಧ ಕೋರ್ಸ್ ಗಳಿಗೆ ಒಂದೇ ಹಾಲ್ ಇದೆ. ಅಡ್ಮಿಷನ್ ಆಗಿರುವುದು ಬೆಂಗಳೂರಿನಲ್ಲಿ ಆದ್ರೆ ಓದೋದು ಜರ್ಮನಿಯ FOM ಯುನಿವರ್ಸಿಟಿಯಲ್ಲಿಂತೆ. ಒಂದು ವರ್ಷ ಜರ್ಮನಿಯಲ್ಲಿ ಓದಲು ಮತ್ತೆ 10 ಲಕ್ಷ ಕಟ್ಟಬೇಕಂತೆ 30 ಲಕ್ಷದ ಜೊತೆ ಜರ್ಮನಿ ಭಾಷೆ ಕಲಿಯಬೇಕಂತೆ.

ಅನಧಿಕೃತ ಮ್ಯಾನೇಜ್ ಮೆಂಟ್ ಕಾಲೇಜ್ ಅವ್ಯವಹಾರಗಳ ವಿರುದ್ಧ ಕೇಸ್ ದಾಖಲಾಗಿದೆ. ಡಾನ್ ಬಾಸ್ಕೋ ಮ್ಯಾನೇಜ್ ಮೆಂಟ್ ಕಾಲೇಜ್ ವಿರುದ್ಧ ಬೆಂಗಳೂರು ಕೇಂದ್ರ ವಿವಿಯಿಂದ ದೂರು ದಾಖಲಿಸಿಕೊಳ್ಳಲು ಹಲಸೂರು ಗೇಟ್ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಕಾನೂನು ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ನೊಂದ ವಿದ್ಯಾರ್ಥಿಗಳು UGC ಗೂ, ಪ್ರಧಾನಮಂತ್ರಿಗಳ ಕಚೇರಿಗೂ ಅವ್ಯವಹಾರಗಳ ಬಗ್ಗೆ ದೂರು ನೀಡಿದ್ದಾರೆ.

Published On - 9:15 am, Mon, 31 August 20