Mangaluru: ಪ್ರತಿ ತಿಂಗಳು ಬರುತ್ತಿದ್ದ ವಿದ್ಯುತ್ ಬಿಲ್ ರೂ, 3,000 ಆದರೆ ಈ ತಿಂಗಳು ಬಂದಿದ್ದು ರೂ. 7,71,072!
ಮೀಟರ್ ರೀಡರ್ ನಿಂದ ಆಗಿರಬಹುದಾದ ಪ್ರಮಾದವನ್ನು ಮೆಸ್ಕಾಂ ಕಚೇರಿ ಅಧಿಕಾರಿಗಳು ಅಂಗೀಕರಿಸಿದ್ದಾರಂತೆ.
ಮಂಗಳೂರು: ಈ ತಿಂಗಳಿನಿಂದ ವಿದ್ಯುತ್ ದರ (power tariff) ಪ್ರತಿ ಯೂನಿಟ್ ಗೆ ರೂ. 0.70 ಹೆಚ್ಚಿಸಿರುವದರಿಂದ ಎಲ್ಲ ಮನೆಗಳ ಎಲೆಕ್ಟ್ರಿಸಿಟಿ ಬಿಲ್ ಹೆಚ್ಚು ಬರೋದು ಸಹಜವೇ. ಆದರೆ ರೂ. 3,000 ಗಳಷ್ಟು ಬರುತ್ತಿದ್ದ ಬಿಲ್ ರೂ. 7,71,072 ಬಂದರೆ ಹೇಗೆ ಮಾರಾಯ್ರೇ!? ಆಶ್ಚರ್ಯವಾಗುತ್ತಿದೆಯಾ? ಅಷ್ಟು ಭಾರಿ ಮೊತ್ತದ ಬಿಲ್ ಪಡೆದ ಕುಟುಂಬದವವರಿಗೆ ವಿದ್ಯುತ್ ಶಾಕ್ ಆಗದಿರುತ್ತಾ? ಮಂಗಳೂರಿನ ಆಚಾರ್ಯ ಕುಟುಂಬದ ಹಿರಿಯರಾದ ಸದಾಶಿವ ಆಚಾರ್ಯ (Sadashiva Acharya) ತಮಗಾದ ಅನುಭವವನ್ನು ಮಂಗಳೂರಿನ ಟಿವಿ9 ವರದಿಗಾರನೊಂದಿಗೆ ಹಂಚಿಕೊಂಡಿದ್ದಾರೆ. ಕುಟುಂಬದ ಸದಸ್ಯರು ಮೆಸ್ಕಾಂ (MESCOM) ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಮೀಟರ್ ರೀಡರ್ ನಿಂದ ಆಗಿರಬಹುದಾದ ಪ್ರಮಾದವನ್ನು ಕಚೇರಿ ಅಂಗೀಕರಿಸಿದೆಯಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ