
ಹಾವೇರಿ: ಮುಂಗಾರು ಮಳೆ ಶುರುವಾಗಿದೆ. ಆಗಾಗ ಮಳೆರಾಯ ಬರುತ್ತಲೆ ಇದ್ದಾನೆ. ಮಳೆ ಆಗಾಗ ಬರುತ್ತಿರುವುದರಿಂದ ಎಲ್ಲೆಲ್ಲೂ ತೇವಾಂಶವಿದೆ. ಆದರೆ ಜಮೀನಿನಲ್ಲಿದ್ದ ಬೋರ್ ವೆಲ್ ಆನ್ ಮಾಡಲು ಹೋಗಿದ್ದ ರೈತನೊಬ್ಬನಿಗೆ ಕರೆಂಟ್ ಶಾಕ್ ನೀಡಿದೆ. ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ.
ರೈತರೇ ಎಚ್ಚರಾ ಎಚ್ಚರ
ಈಗ ಮಳೆ ಆಗುತ್ತಿರುವುದರಿಂದ ಭೂಮಿ ತೇವಾಂಶ ಆಗಿರುತ್ತದೆ. ಜೊತೆಗೆ ಮಳೆ ಗಾಳಿಗೆ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುತ್ತವೆ. ಹೀಗಾಗಿ ಮಳೆ ಬರುವ ಸಮಯದಲ್ಲಿ ಬೋರ್ ವೆಲ್ ಸೇರಿದಂತೆ ಜಮೀನಿನಲ್ಲಿರುವ ವಿದ್ಯುತ್ ಉಪಕರಣಗಳನ್ನು ಎಚ್ಚರಿಕೆಯಿಂದ ಮುಟ್ಟಬೇಕಾಗಿದೆ. ಇಲ್ಲದಿದ್ದರೆ ವಿದ್ಯುತ್ ಸ್ಪರ್ಶಿಸಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ರೈತರು ಎಚ್ಚರಿಕೆಯಿಂದ ಜಮೀನಿನಲ್ಲಿ ಕೆಲಸ ಮಾಡಬೇಕಿದೆ.