ಗಾಯಗೊಂಡಿರುವ 3 ದಿನದ ಆನೆಮರಿಯನ್ನ ಅಮ್ಮನ ಮಡಿಲಿಗೆ ಸೇರಿಸಲು ಹರಸಾಹಸ

ಹಾಸನ: ತಾಯಿಯಿಂದ ಬೇರ್ಪಟ್ಟು ಆನೆಮರಿಯೊಂದು ನರಳಾಡುತ್ತಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದ ನಡುವೆ ಎಡಗಾಲಿಗೆ ಏಟು ಆಗಿ ನಡೆಯಲಾರದೆ ಮೂರು ದಿನದ ಹೆಣ್ಣು ಮರಿಯಾನೆಯೊಂದು ಪರದಾಡುತ್ತಿದ್ದ ಮನಕಲುಕುವ ದೃಶ್ಯ ಕಂಡುಬಂತು. ಕೂತಲ್ಲೇ ಕೂತಿರೋ ಹೆಣ್ಣು ಮರಿಯಾನೆ ತನ್ನ ಅಮ್ಮನನ್ನು ಸೇರಲು ಹಂಬಲಿಸುತ್ತಿದೆ. ಇತ್ತ ನಡೆಯಲಾಗದೆ ಪರಡಾಡುತ್ತಿರುವ ತನ್ನ ಕಂದಮ್ಮನನ್ನು ಅಲ್ಲೇ ಬಿಟ್ಟಿರುವ ತಾಯಿ ಆನೆ ತನ್ನ ಮರಿಯಿಂದ ತುಸು ದೂರದಲ್ಲೇ ಓಡಾಡುತ್ತಾಯಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ […]

ಗಾಯಗೊಂಡಿರುವ 3 ದಿನದ ಆನೆಮರಿಯನ್ನ ಅಮ್ಮನ ಮಡಿಲಿಗೆ ಸೇರಿಸಲು ಹರಸಾಹಸ

Updated on: Oct 02, 2020 | 5:54 PM

ಹಾಸನ: ತಾಯಿಯಿಂದ ಬೇರ್ಪಟ್ಟು ಆನೆಮರಿಯೊಂದು ನರಳಾಡುತ್ತಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದ ನಡುವೆ ಎಡಗಾಲಿಗೆ ಏಟು ಆಗಿ ನಡೆಯಲಾರದೆ ಮೂರು ದಿನದ ಹೆಣ್ಣು ಮರಿಯಾನೆಯೊಂದು ಪರದಾಡುತ್ತಿದ್ದ ಮನಕಲುಕುವ ದೃಶ್ಯ ಕಂಡುಬಂತು.

ಕೂತಲ್ಲೇ ಕೂತಿರೋ ಹೆಣ್ಣು ಮರಿಯಾನೆ ತನ್ನ ಅಮ್ಮನನ್ನು ಸೇರಲು ಹಂಬಲಿಸುತ್ತಿದೆ. ಇತ್ತ ನಡೆಯಲಾಗದೆ ಪರಡಾಡುತ್ತಿರುವ ತನ್ನ ಕಂದಮ್ಮನನ್ನು ಅಲ್ಲೇ ಬಿಟ್ಟಿರುವ ತಾಯಿ ಆನೆ ತನ್ನ ಮರಿಯಿಂದ ತುಸು ದೂರದಲ್ಲೇ ಓಡಾಡುತ್ತಾಯಿದೆ.

ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಮಿಸಿದ್ದಾರೆ. ಆನೆಮರಿಗೆ ಚಿಕಿತ್ಸೆ ನೀಡಿ ಅದರ ತಾಯಿ ಜೊತೆ ಸೇರಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಅಕಸ್ಮಾತ್, ತಾಯಿ ಆನೆ ತನ್ನ ಮರಿಯನ್ನು ಕರೆದೊಯ್ಯದಿದ್ದರೆ ಅದನ್ನ ಆನೆ ಕ್ಯಾಂಪ್​ಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ತಯಾರಿ ನಡೆಸುತ್ತಿದೆ.

Published On - 5:52 pm, Fri, 2 October 20