Dharwad Road Accident ಟೆಂಪೋಗೆ ಟಿಪ್ಪರ್​ ಡಿಕ್ಕಿ: ಗೋವಾ ಪ್ರವಾಸಕ್ಕೆ ತೆರಳ್ತಿದ್ದ 11 ಮಂದಿ ಹಳೆ ವಿದ್ಯಾರ್ಥಿಗಳ ದುರ್ಮರಣ

| Updated By: ಸಾಧು ಶ್ರೀನಾಥ್​

Updated on: Feb 06, 2021 | 10:44 AM

Dharwad Road Accident ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಗೋವಾಗೆ ತೆರಳ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವುವಿಸಿದೆ. ಘಟನೆಯಲ್ಲಿ 11 ಜನ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Dharwad Road Accident ಟೆಂಪೋಗೆ ಟಿಪ್ಪರ್​ ಡಿಕ್ಕಿ: ಗೋವಾ ಪ್ರವಾಸಕ್ಕೆ ತೆರಳ್ತಿದ್ದ 11 ಮಂದಿ ಹಳೆ ವಿದ್ಯಾರ್ಥಿಗಳ ದುರ್ಮರಣ
ಟೆಂಪೋ ಟ್ರಾವೆಲರ್​ಗೆ ಟಿಪ್ಪರ್​ ಡಿಕ್ಕಿ (ಸಂಗ್ರಹ ಚಿತ್ರ)
Follow us on

ಧಾರವಾಡ: ಟೆಂಪೋ ಟ್ರಾವೆಲರ್​ಗೆ ಟಿಪ್ಪರ್​ ಡಿಕ್ಕಿ ಹೊಡೆದು 11 ಜನ ಮೃತಪಟ್ಟಿರುವ ಭೀಕರ ಅಪಘಾತವೊಂದು ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಗೋವಾಗೆ ತೆರಳ್ತಿದ್ದ ವೇಳೆ ಇಂದು ಬೆಳಗ್ಗೆ 7:30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವುವಿಸಿದೆ. ಘಟನೆಯಲ್ಲಿ ವೀಣಾ, ಮಂಜುಳಾ, ರಾಜೇಶ್ವರಿ, ಡ್ರೈವರ್, ಕ್ಲೀನರ್​, 9 ಮಹಿಳೆಯರು ಸೇರಿ 11 ಜನ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸ್ಥಳಕ್ಕೆ ಎಸ್‌ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟ್ರಿಪ್​ಗೆ ಹೋಗುತ್ತಿದ್ದವರು ಮರಳಿ ಬಾರದ ಕಡೆ ಪ್ರಯಾಣ ಬೆಳೆಸಿದ್ರು
ಟಿಟಿಯಲ್ಲಿ ಗೋವಾ ಟ್ರಿಪ್​ಗೆ ಹೋಗುತ್ತಿದ್ದ ಒಟ್ಟು 16 ಜನರಲ್ಲಿ 14 ಮಹಿಳೆಯರು, ಇಬ್ಬರು ಪುರುಷರಿದ್ರು. ಅಪಘಾತದಲ್ಲಿ 9 ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಗಾಯಗೊಂಡ ಐವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ರಸ್ತೆ ದುರಂತದಲ್ಲಿ ಸಾವನ್ನಪ್ಪಿದ ಬಹುತೇಕರು ದಾವಣಗೆರೆ ನಗರದ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಗಳು. 14 ಮಹಿಳೆಯರೂ ದಾವಣಗೆರೆ ನಗರದ ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯ ಒಂದೇ ಬ್ಯಾಚ್​ನ ಹಳೆ ವಿದ್ಯಾರ್ಥಿಗಳು. ಇಂದು ಎಲ್ಲರೂ ಸೇರಿ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.

ಅಂಕೋಲ ಸಮೀಪ ರಸ್ತೆ ಅಪಘಾತ: ಕೇಂದ್ರ ಸಚಿವ ಶ್ರೀಪಾದ್​ ನಾಯಕ್​ಗೆ ಗಂಭೀರ ಗಾಯ, ಪತ್ನಿ ಸಾವು

Published On - 8:26 am, Fri, 15 January 21