ಹಳೇ ದ್ವೇಷ: ರಾಡ್ನಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ
ನಿನ್ನೆ ತಡ ರಾತ್ರಿ ಅಶೋಕ್, ಬೈಕ್ ಮೇಲೆ ತೆರಳುತ್ತಿದ್ದ ವೆಂಕಟರಾಮನನ್ನು ರಾಡ್ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್ ಸಮೇತ ನೆಲಕ್ಕೆ ಬಿದ್ದಿರುವ ಕೊಲೆಯಾದ ವ್ಯಕ್ತಿ
ಕೋಲಾರ: ಹಳೇ ದ್ವೇಷ ಹಿನ್ನೆಲೆಯಲ್ಲಿ ರಾಡ್ನಿಂದ ಹೊಡೆದು ವ್ಯಕ್ತಿಯ ಭೀಕರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಾಯಕರಹಳ್ಳಿಯಲ್ಲಿ ನಡೆದಿದೆ. ವೆಂಕಟರಾಮ(30) ಬರ್ಬರವಾಗಿ ಕೊಲೆಯಾದ ವ್ಯಕ್ತಿ.
ಬಂಗಾರಪೇಟೆ ತಾಲೂಕಿನ ವೇಣುಗೋಪಾಲಪುರ ಗ್ರಾಮದ ನಿವಾಸಿ ವೆಂಕಟರಾಮನನ್ನು ನಾಯಕರಳ್ಳಿಯ ಅಶೋಕ್ ಎಂಬಾತ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ವೆಂಕಟರಾಮ ಮತ್ತು ಅಶೋಕ್ ನಡುವೆ ಪೆಂಡಾಲ್ ತೆಗೆಯುವ ವಿಷಯಕ್ಕೆ ಜಗಳವಾಗಿತ್ತು.
ಇದೇ ವಿಷಯಕ್ಕೆ ನಿನ್ನೆ ತಡ ರಾತ್ರಿ ಅಶೋಕ್, ಬೈಕ್ ಮೇಲೆ ತೆರಳುತ್ತಿದ್ದ ವೆಂಕಟರಾಮನನ್ನು ರಾಡ್ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.