ಸಿಡಿ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು ಖಂಡನೀಯ.. ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ ಎಂದ ಈಶ್ವರ ಖಂಡ್ರೆ
ಬಿಜೆಪಿಯವರಿಗೆ ಸಿಡಿ ಹಿಂದೆ ಯಾರ ಕೈವಾಡ ಇದೆ ಎಂದು ಹೆಸರು ಗೊತ್ತಿದ್ದರೆ ನೇರವಾಗಿ ಆರೋಪ ಮಾಡಲಿ. ಅದು ಬಿಟ್ಟು ಹೀಗೆ ಶಂಕಾಸ್ಪದ ರೀತಿಯಲ್ಲಿ ಸಿಕ್ಕಸಿಕ್ಕವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಅವರು ಕೇಂದ್ರೀಯ ತನಿಖಾ ದಳವನ್ನು ದುರುಪಯೋಗ ಮಾಡಿಕೊಂಡಿದ್ದರು. ಈಗ ಎಸ್ಐಟಿಯನ್ನು ಅದೇ ರೀತಿ ದುರುಪಯೋಗಪಡಿಸಿಕೊಳ್ಳುತ್ತಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ಮಾಡಿರುವುದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಬಿಜೆಪಿ ಒಂದು ಸುಳ್ಳಿನ ಕಾರ್ಖಾನೆ. ಅಪರಾಧ ಮಾಡುವವರು ಅವರೇ ಆದರೂ ನಮ್ಮ ನಾಯಕರ ಮೇಲೆ ಸುಮ್ಮನೆ ಆರೋಪ ಮಾಡ್ತಾರೆ. ಅವರ ನಡೆ ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ ಎಂಬಂತೆ ಇದೆ. ಸಿಡಿ ವಿಚಾರದಲ್ಲಿ ಎಸ್ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್ ನಿಗಾದಲ್ಲಿ ಈ ಪ್ರಕರಣದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯವರಿಗೆ ಸಿಡಿ ಹಿಂದೆ ಯಾರ ಕೈವಾಡ ಇದೆ ಎಂದು ಹೆಸರು ಗೊತ್ತಿದ್ದರೆ ನೇರವಾಗಿ ಆರೋಪ ಮಾಡಲಿ. ಅದು ಬಿಟ್ಟು ಹೀಗೆ ಶಂಕಾಸ್ಪದ ರೀತಿಯಲ್ಲಿ ಸಿಕ್ಕಸಿಕ್ಕವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಅವರು ಕೇಂದ್ರೀಯ ತನಿಖಾ ದಳವನ್ನು ದುರುಪಯೋಗ ಮಾಡಿಕೊಂಡಿದ್ದರು. ಈಗ ಎಸ್ಐಟಿಯನ್ನು ಅದೇ ರೀತಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಹೀಗಾಗಿ ಇದರ ಬಗ್ಗೆ ಸಮಗ್ರವಾಗಿ ನಿಷ್ಪಕ್ಷಪಾತ ತನಿಖೆ ಆಗಬೇಕು. ಈ ತನಿಖೆ ಉಚ್ಛ ನ್ಯಾಯಾಲಯದ ನಿಗಾದಲ್ಲಿ ಆಗಬೇಕು ಆಗ ಸತ್ಯಾಂಶ ಹೊರಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಿಡಿ ವಿಚಾರ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು, 5 ಕೋಟಿ ರೂಪಾಯಿಗೆ ಬೇಡಿಕೆ ಇತ್ತು: ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಗೋವಾದಿಂದ ಬರಿಗೈಲಿ ಹಿಂದಿರುಗಿದ ಎಸ್ಐಟಿ ತಂಡ?
Published On - 2:55 pm, Tue, 16 March 21