ಸಿಡಿ ವಿಚಾರ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು, 5 ಕೋಟಿ ರೂಪಾಯಿಗೆ ಬೇಡಿಕೆ ಇತ್ತು: ರಮೇಶ್​ ಜಾರಕಿಹೊಳಿ

ಈ ವಿಚಾರ ನನಗೆ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು. ಮಾಜಿ ಶಾಸಕ ನಾಗರಾಜ್ ಮೂಲಕ ಈ ವಿಚಾರ ನನಗೆ ತಿಳಿದಿತ್ತು. ವಿಡಿಯೋ ಮುಂದಿಟ್ಟು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಇದ್ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ: ರಮೇಶ್​ ಜಾರಕಿಹೊಳಿ

ಸಿಡಿ ವಿಚಾರ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು, 5 ಕೋಟಿ ರೂಪಾಯಿಗೆ ಬೇಡಿಕೆ ಇತ್ತು: ರಮೇಶ್​ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
Follow us
Skanda
|

Updated on:Mar 16, 2021 | 1:21 PM

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಮುಂದೆ ಹೇಳಿಕೆ ನೀಡಿರುವ ರಮೇಶ್​ ಜಾರಕಿಹೊಳಿ, ಈ ವಿಚಾರ ನನಗೆ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು. ಮಾಜಿ ಶಾಸಕ ನಾಗರಾಜ್ ಮೂಲಕ ಈ ವಿಚಾರ ನನಗೆ ತಿಳಿದಿತ್ತು. ವಿಡಿಯೋ ಮುಂದಿಟ್ಟು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಇದ್ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ. ರಮೇಶ್​ ಜಾರಕಿಹೊಳಿ ಅವರ ಈ ಹೇಳಿಕೆಯನ್ನು ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ದಾಖಲಿಸಿಕೊಂಡಿದ್ದು, ಇದೇ ವೇಳೆ ಮಾಜಿ ಸಚಿವರು ಹಲವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.

ಆ ವಿಡಿಯೋದಲ್ಲಿರುವುದು ನಾನಲ್ಲವೇ ಅಲ್ಲ, ನನಗೂ ಅದಕ್ಕೂ ಸಂಬಂಧ ಇಲ್ಲ ಈ ಬಗ್ಗೆ ಎಸ್​ಐಟಿ ಮುಂದೆ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ಆ ವಿಡಿಯೋದಲ್ಲಿರುವುದು ನಾನಲ್ಲ, ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ನನ್ನ ತೇಜೋವಧೆ ಮಾಡಲಿಕ್ಕಾಗಿ ಈ ಕೃತ್ಯ ಎಸಗಿದ್ದಾರೆ. ಅದೊಂದು ನಕಲಿ ವಿಡಿಯೋ. ಅದನ್ನು ಸೃಷ್ಠಿ ಮಾಡಲು ಹಲವರು ಭಾಗಿಯಾಗಿದ್ದಾರೆ. ಮೊದಲು ಈ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಎಂದು ಹೇಳಿರುವ ರಮೇಶ್​ ಜಾರಕಿಹೊಳಿ, ಹಲವು ವ್ಯಕ್ತಿಗಳ ಹೆಸರು ಮತ್ತು ಮಾಹಿತಿಯನ್ನು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ ಹೇಳಿಕೆಯ ಪ್ರಮುಖ ಅಂಶಗಳು

  1. ವಿಡಿಯೋ ವಿಚಾರ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು
  2. ಮಾಜಿ ಶಾಸಕ ನಾಗರಾಜ್ ಮೂಲಕ ವಿಚಾರ ತಿಳಿದಿತ್ತು
  3. ವಿಡಿಯೋ ಮುಂದಿಟ್ಟು ಐದು ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಅನ್ನೊ ಮಾಹಿತಿ ಇತ್ತು
  4. ಇದರ ಬಗ್ಗೆ ತಾನು ತಲೆ ಕೆಡಿಸಿಕೊಂಡಿರಲಿಲ್ಲ
  5. ನಂತ್ರ ತನ್ನ ರಾಜಕೀಯ ತೇಜೋವಧೆ ಮಾಡಲು ಹೀಗೆ ಮಾಡಿದ್ದಾರೆ
  6. ವಿಡಿಯೋದಲ್ಲಿ ಇರುವುದು ನಾನಲ್ಲ, ಅದಕ್ಕೂ ನನಗೂ ಸಂಬಂಧ ಇಲ್ಲ
  7. ವಿಡಿಯೋ ನಕಲಿಯಾಗಿ ಸೃಷ್ಠಿ ಮಾಡಿದ್ದಾರೆ
  8. ಹಲವಾರು ಜನರು ಇದರಲ್ಲಿ ಭಾಗಿಯಾಗಿದ್ದಾರೆ, ಅವರನ್ನು ಪತ್ತೆ ಮಾಡಿ
  9. ಹಲವು ವ್ಯಕ್ತಿಗಳ ಹೆಸರು ಮತ್ತು ಮಾಹಿತಿಯನ್ನು ಉಲ್ಲೇಖ ಮಾಡಿರುವ ರಮೇಶ್​ ಜಾರಕಿಹೊಳಿ

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಗೋವಾದಿಂದ ಬರಿಗೈಲಿ ಹಿಂದಿರುಗಿದ ಎಸ್​ಐಟಿ ತಂಡ? 

ಸಿಡಿ ಯುವತಿಯಿಂದ ಲೇಟೆಸ್ಟ್​ ವಿಡಿಯೋ ಬಿಡುಗಡೆ: ರಮೇಶ್​ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿದೆ

Published On - 12:12 pm, Tue, 16 March 21