ಬಿಎಂಟಿಸಿ ಬಸ್ ಪ್ರಯಾಣ ದರ ಸದ್ಯಕ್ಕೆ ಹೆಚ್ಚಳ ಮಾಡಬೇಡಿ: ಸಿಎಂ ಯಡಿಯೂರಪ್ಪ ಸೂಚನೆ
BMTC Bus Fare: ಕಳೆದ ವರ್ಷ ಕೆಎಸ್ಆರ್ಟಿಸಿ, NWKSRT, NEKSRT ದರ ಪರಿಷ್ಕರಣೆ ಮಾಡಲಾಗಿತ್ತು. ಹೀಗಾಗಿ ಈಗ ತನ್ನ ಸರದಿ ಎಂದು ಬಿಎಂಟಿಸಿ ಪ್ರಯಾಣ ದರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಬಜೆಟ್ ನಲ್ಲಿ ದರ ಪರಿಷ್ಕರಣೆ ಮಾಡುವ ನಿರೀಕ್ಷೆ ಬಿಎಂಟಿಸಿ ಸಂಸ್ಥೆಯದ್ದಾಗಿತ್ತು ಎಂಬುದು ಗಮನಾರ್ಹ.
ಬೆಂಗಳೂರು: ದರ ಏರಿಕೆ ಬರೆಗಳಿಂದ ಜನಸಾಮಾನ್ಯರು ಹೈರಾಗೊಳ್ಳುತ್ತಿದ್ದಾರೆ. ಈ ಮಧ್ಯೆ ದಿನನಿತ್ಯದ ಹಾಲಿನ ದರ ಮತ್ತು ಬಸ್ ಪ್ರಯಾಣ ದರಗಳನ್ನೂ ಹೆಚ್ಚಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಸದ್ಯಕ್ಕೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂಬುದು ಖಚಿತವಾಗಿ ತಿಳಿದುಬಂದಿದೆ. ಇನ್ನು ಹಾಲಿನ ದರ ಹೆಚ್ಚಾಗುತ್ತದಾ ಅಥವಾ ಇಲ್ವಾ ಎಂಬುದು ತಿಳಿದುಬಂದಿಲ್ಲ.
ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ತಡೆಯೊಡ್ಡಿದೆ. ತೈಲ ಬೆಲೆ ಹೆಚ್ಚಳದಿಂದ ದರ ಪರಿಷ್ಕರಣೆ ಮಾಡುವಂತೆ ಬಿಎಂಟಿಸಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಶೇ.18ರಿಂದ 20ರಷ್ಟು ಹೆಚ್ಚಳ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈಗ ಬಸ್ ಪ್ರಯಾಣ ದರ ಹೆಚ್ಚಿಸಿದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತೆ ಎಂದು ತಡೆ ನೀಡಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಈಗ ಬಸ್ ಪ್ರಯಾಣ ದರ ಹೆಚ್ಚಿಸಿದರೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಹಾಗಾಗಿ ಸದ್ಯಕ್ಕೆ ದರ ಹೆಚ್ಚಳ ಬೇಡವೆಂದು ಸಾರಿಗೆ ಸಚಿವರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಕೆಎಸ್ಆರ್ಟಿಸಿ, NWKSRT, NEKSRT ದರ ಪರಿಷ್ಕರಣೆ ಮಾಡಲಾಗಿತ್ತು. ಹೀಗಾಗಿ ಈಗ ತನ್ನ ಸರದಿ ಎಂದು ಬಿಎಂಟಿಸಿ ಪ್ರಯಾಣ ದರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಬಜೆಟ್ ನಲ್ಲಿ ದರ ಪರಿಷ್ಕರಣೆ ಮಾಡುವ ನಿರೀಕ್ಷೆ ಬಿಎಂಟಿಸಿ ಸಂಸ್ಥೆಯದ್ದಾಗಿತ್ತು ಎಂಬುದು ಗಮನಾರ್ಹ.
ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.. ನಾಳಿನ ಬಜೆಟ್ನಲ್ಲಿ ಬಿಎಂಟಿಸಿ ಪ್ರಯಾಣ ದರ ಏರಿಕೆ ಸಾಧ್ಯತೆ