ಈಶ್ವರಪ್ಪನನ್ನು ಹದ್ದುಬಸ್ತಿನಲ್ಲಿಟ್ಟರೆ ಶಿವಮೊಗ್ಗ ಶಾಂತವಾಗಿರುತ್ತದೆ: ಸಿ ಎಮ್ ಇಬ್ರಾಹಿಂ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ಶಾಂತವಾಗಿರುತಿತ್ತು, ಆದರೆ ಈಗ್ಯಾಕೆ ಅಲ್ಲಿ ಗಲಾಟೆಗಳು ನಡೆಯುತ್ತಿವೆ? ಈಶ್ವರಪ್ಪರನ್ನು ಹದ್ದುಬಸ್ತಿನಲ್ಲಿಟ್ಟರೆ ಎಲ್ಲವೂ ನೆಟ್ಟಗಿರುತ್ತದೆ ಎಂದರು.
ಶಿವಮೊಗ್ಗದಲ್ಲಿ ಪದೇಪದೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಗೆ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪನವರೇ (KS Eshwarappa) ಕಾರಣ ಎಂದು ಜೆಡಿ(ಎಸ್) ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಬುಧವಾರ ಹುಬ್ಬಳ್ಳಿಯಲ್ಲಿ ಹೇಳಿದರು. ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತಾಡಿದ ಅವರು ಯಡಿಯೂರಪ್ಪ (Yediyurappa) ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ಶಾಂತವಾಗಿರುತಿತ್ತು, ಆದರೆ ಈಗ್ಯಾಕೆ ಅಲ್ಲಿ ಗಲಾಟೆಗಳು ನಡೆಯುತ್ತಿವೆ? ಈಶ್ವರಪ್ಪರನ್ನು ಹದ್ದುಬಸ್ತಿನಲ್ಲಿಟ್ಟರೆ ಎಲ್ಲವೂ ನೆಟ್ಟಗಿರುತ್ತದೆ ಎಂದರು. ಈಶ್ವರಪ್ಪನಂಥವರು ಸಾಬಿಗಳ ಮನೆಯಲ್ಲಿ ಬಿರಿಯಾನಿ ತಿಂದು ಹೊರಗಡೆ ಬಂದಮೇಲೆ ಹಲಾಲ್ ಕಟ್ ನಿಷೇಧಿಸಬೇಕೆಂದು ಮುಷ್ಕರ ನಡೆಸುತ್ತಾರೆ ಎಂದು ಇಬ್ರಾಹಿಂ ಹೇಳಿದರು.