ಚಿಕ್ಕಮಗಳೂರಿನ ಹೊಲದಲ್ಲಿ ಹೆಣ್ಣು ನವಿಲನ್ನು ಅಕರ್ಷಿಸಲು ಕುಣಿಯುತ್ತಿದ್ದ ಗಂಡು ನವಿಲು ಕೆಮೆರಾ ಕಣ್ಣಲ್ಲಿ ಸೆರೆಯಾಯಿತು!

ಚಿಕ್ಕಮಗಳೂರಿನ ಹೊಲದಲ್ಲಿ ಹೆಣ್ಣು ನವಿಲನ್ನು ಅಕರ್ಷಿಸಲು ಕುಣಿಯುತ್ತಿದ್ದ ಗಂಡು ನವಿಲು ಕೆಮೆರಾ ಕಣ್ಣಲ್ಲಿ ಸೆರೆಯಾಯಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Apr 12, 2022 | 10:26 PM

ಅಂದಹಾಗೆ, ಕುಣಿಯೋದು ಗಂಡು ನವಿಲು ಮಾತ್ರ. ಅದು ಕುಣಿಯೋದು ಯಾಕೆ ಅಂತಲೂ ನಿಮಗೆ ಗೊತ್ತಿರಬಹುದು. ಹೆಣ್ಣು ನವಿಲನ್ನು ಆಕರ್ಷಿಸಲು! ಸಂತಾನೋತ್ಪತ್ತಿಯ ಸೀಸನಲ್ಲಿ ಗಂಡು ನೃತ್ಯ ಮಾಡಿ ಹೆಣ್ಣನ್ನು ಆಕರ್ಷಿಸುತ್ತದೆ.

ಚಿಕ್ಕಮಗಳೂರು: ಸೋಮವಾರವಷ್ಟೇ ನಾವು ನಿಮಗೊಂದು ನವಿಲಿನ ಕತೆಯನ್ನು ನಾವು ನಿಮಗೆ ಹೇಳಿದ್ದೆವು. ಹೊಸಕೋಟೆಯ ಬಳಿ ಕಾಡಿನಿಂದ ಆಹಾರ ಅರಸಿಕೊಂಡು ನಗರ ಪ್ರದೇಶಕ್ಕೆ ಬಂದು ಅನ್ನ ನೀರು ಕಾಣದೆ ಸಾವು ಬದುಕಿನೊಂದಿಗೆ ಹೋರಾಟ ನಡೆಸುತಿತ್ತು. ಕೆಲ ಕರುಣಾಮಯಿ ಜನ ಅದಕ್ಕೆ ನೀರು ಕುಡಿಸಿ, ಅಹಾರ ತಿನ್ನಿಸಿ ಚೇತರಿಸಿಕೊಳ್ಳುವಂತೆ ಮಾಡಿದರಲ್ಲದೆ, ನವಿಲನ್ನು ಒಯ್ದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದ್ದರು. ಮಂಗಳವಾರ ನಮಗೆ ಪುನಃ ನವಿಲು (peacock) ದರ್ಶನವಾಗಿದೆ ಮಾರಾಯ್ರೇ, ಅದೂ ಕೂಡ ಕುಣಿಯುತ್ತಿರುವ ನವಿಲು. ಈ ದೃಶ್ಯ ನಮಗೆ ಕಂಡುಬಂದಿದ್ದು ಕಾಫಿನಾಡು (coffee land) ಚಿಕ್ಕಮಗಳೂರಿನಲ್ಲಿ (Chikmagalur). ನಿಮಗೆ ಕಾಣುತ್ತಿರುವ ಜಮೀನು ಹಿರೇಗೌಜ ಎನ್ನುವವರಿಗೆ ಸೇರಿದ್ದು. ಜಮೀನು ರಸ್ತೆಯ ಪಕ್ಕದಲ್ಲೇ ಇದ್ದು ವಾಹನಗಳು ಓಡಾಡುತ್ತಿರೋದು ನಿಮಗೆ ಕಾಣಿಸುತ್ತದೆ. ಆದರೆ ನಮ್ಮ ಸುಂದರ ನವಲಿಗೆ ಅದ್ಯಾವುದರ ಪರಿವೆ ಇಲ್ಲ, ತನ್ನ ನೃತ್ಯವನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ ಅಂತಲೂ ಅದಕ್ಕೆ ಗೊತ್ತಿಲ ಮಾರಾಯ್ರೇ!

ಛಾಯಾಗ್ರಾಹಕ ಹೆಚ್ ಎಸ್ ಶಿವಕುಮಾರ್ ಅವರು ನವಿಲು ನೃತ್ಯದ ದೃಶ್ವವನ್ನು ಸೆರೆಹಿಡಿದಿದ್ದಾರೆ. ನವಿಲಿಗೆ ಮಯೂರ ಅಂತಲೂ ಕರೆಯುತ್ತಾರೆ. ನವಿಲಿನ ಕುಣಿತಕ್ಕೆ ಮಾರು ಹೋಗದವರೇ ಇಲ್ಲ. ಅದರ ನೃತ್ಯಕ್ಕಿರುವ ಖ್ಯಾತಿ ಎಂಥದ್ದೆಂದರೆ ಚೆನ್ನಾಗಿ ಡ್ಯಾನ್ಸ್ ಮಾಡುವವರನ್ನು ನವಿಲಿಗೆ ಹೋಲಿಸುತ್ತಾರೆ. ನಾಟ್ಯ ಮಯೂರಿ ಸುಧಾ ಚಂದ್ರನ್ ಅವರು ನಿಮಗೆ ಗೊತ್ತಿದೆ ತಾನೇ?

ಅಂದಹಾಗೆ, ಕುಣಿಯೋದು ಗಂಡು ನವಿಲು ಮಾತ್ರ. ಅದು ಕುಣಿಯೋದು ಯಾಕೆ ಅಂತಲೂ ನಿಮಗೆ ಗೊತ್ತಿರಬಹುದು. ಹೆಣ್ಣು ನವಿಲನ್ನು ಆಕರ್ಷಿಸಲು! ಸಂತಾನೋತ್ಪತ್ತಿಯ ಸೀಸನಲ್ಲಿ ಗಂಡು ನೃತ್ಯ ಮಾಡಿ ಹೆಣ್ಣನ್ನು ಆಕರ್ಷಿಸುತ್ತದೆ. ಒಲಿಯುವ ಹೆಣ್ಣಿನೊಂದಿಗೆ ಜೊತೆಗೂಡಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುತ್ತದೆ.

ಇದನ್ನೂ ಓದಿ:   ಬಾಯಾರಿ, ಹಸಿದು ಕಾಡಿಂದ ನಾಡಿಗೆ ಬಂದು ಕಂಗಾಲಾಗಿದ್ದ ನವಿಲನ್ನು ಜನ ಆರೈಕೆ ಮಾಡಿ ಚೇತರಿಕೊಳ್ಳುವಂತೆ ಮಾಡಿದರು!

Published on: Apr 12, 2022 10:25 PM