ಮೃತ ಮಹಿಳೆಯ ಖಾತೆಯಿಂದ 19 ಸಾವಿರ ಹಣ ಡ್ರಾ! ಪೋಸ್ಟ್ ಮಾಸ್ಟರ್ ಜನರಲ್ ಜಾಣಮೌನ..
ಕೆರಗೋಡು ಗ್ರಾಮದ ನಿವಾಸಿಯಾಗಿದ್ದ ವಿಜಯಾಂಬ ಎಂಬುವವರು 2011ರ ಜೂನ್ 18ರಂದು ಮೃತಪಟ್ಟಿದ್ದಾರೆ. 2016ರ ಜೂನ್ 28ರಂದು ಮೃತರ ಖಾತೆಯಲ್ಲಿ 19 ಸಾವಿರ ಹಣ ಡ್ರಾ ಆಗಿದೆ.
ಮಂಡ್ಯ: ಮಹಿಳೆ ಮೃತಪಟ್ಟು 5 ವರ್ಷದ ಬಳಿಕ ಖಾತೆಯಿಂದ ತಾಲೂಕಿನ ಕೆರಗೋಡು ಉಪ ಅಂಚೆ ಕಚೇರಿಯಲ್ಲಿ ಹಣ ಡ್ರಾ ಆಗಿರುವ ಘಟನೆ ಬೆಳಕಿಗೆ ಬಂದಿದ್ದು, ತಪ್ಪಿತಸ್ಥರ ಶಿಕ್ಷೆಗೆ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.
ಕೆರಗೋಡು ಗ್ರಾಮದ ನಿವಾಸಿಯಾಗಿದ್ದ ವಿಜಯಾಂಬ ಎಂಬುವವರು 2011ರ ಜೂನ್ 18ರಂದು ಮೃತಪಟ್ಟರು. ಆದರೆ 2016ರ ಜೂನ್ 28ರಂದು ಮೃತರ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿದೆ! 2018ರಲ್ಲಿ ಡೆತ್ ಸರ್ಟಿಫಿಕೇಟ್ನೊಂದಿಗೆ ಕುಟುಂಬಸ್ಥರು ಹಣ ತೆಗೆದುಕೊಳ್ಳಲು ಹೋದಾಗ ಹಣ ಡ್ರಾ ಆಗಿರುವ ಮಾಹಿತಿ ತಿಳಿದಿದೆ.
ಸತತ ಮೂರು ವರ್ಷಗಳಿಂದ ನ್ಯಾಯಕ್ಕಾಗಿ ಅಳಿಯ ಶಿವಪ್ರಕಾಶ್ ಅಲೆದಾಡುತ್ತಿದ್ದಾರೆ. ಜೊತೆಗೆ ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಇದೀಗ ತಪ್ಪಿತಸ್ಥರ ಶಿಕ್ಷೆಗೆ ದೂರುದಾರ ಶಿವಪ್ರಕಾಶ್ ಒತ್ತಾಯಿಸಿದ್ದಾರೆ.
ಪ್ರಯಾಣಿಕರಿಗೆ ಹೆಚ್ಚಿನ ದರಕ್ಕೆ ರೈಲ್ವೆ ಟಿಕೆಟ್ ಮಾರುತ್ತಿದ್ದ ಆರೋಪಿಗಳು ಖಾಕಿ ವಶಕ್ಕೆ