ವರ್ಷವಾದ್ರೂ ಸಿಕ್ಕಿಲ್ಲ ಪರಿಹಾರ, ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಮಾಡ್ತಿದಾರೆ

| Updated By: ಸಾಧು ಶ್ರೀನಾಥ್​

Updated on: Aug 31, 2020 | 10:23 AM

ಬೆಳಗಾವಿ: ಎಲೆಕ್ಷನ್ ಬಂತು ಅಂದಾಗ ಮಾತ್ರ ಮನೆ ಬಳಿ ಬರುವ ರಾಜಕಾರಣಿಗಳು ಪ್ರವಾಹ ಬಂದು ಮನೆ ಬಿದ್ದಿದೆ ಅಂದ್ರೂ ಕೂಡ ತಲೆ ಕೆಡಿಸಿಕೊಳ್ಳೋದಿಲ್ಲ. ಕಳೆದೊಂದು ವರ್ಷದಿಂದ ಮುರಿದು ಬಿದ್ದಿರುವ ಮನೆಯಲ್ಲೇ ಇದೆ ಈ ರೈತ ಕುಟುಂಬ. ಆದ್ರೆ ಇದುವರೆಗೂ ಸರ್ಕಾರ ಇವರ ಬಗ್ಗೆ ಕನಿಕರವನ್ನೂ ತೋರಿಸಿಲ್ಲ. ಮಲಪ್ರಭಾ ನದಿ ಪ್ರವಾಹಕ್ಕೆ ಮನೆ ಕಳೆದುಕೊಂಡ್ರೂ ಇನ್ನೂ ಸರ್ಕಾರದಿಂದ ಬರಬೇಕಿದ್ದ ಪರಿಹಾರ ಬಂದಿಲ್ಲ. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ನೆರೆ ಸಂತ್ರಸ್ತೆ ಬಸವ್ವಾ ಕುರಿ ಮನೆ ಕಟ್ಟಿಸಿಕೊಡಿ ಎಂದು ಕಣ್ಣೀರು‌ […]

ವರ್ಷವಾದ್ರೂ ಸಿಕ್ಕಿಲ್ಲ ಪರಿಹಾರ, ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಮಾಡ್ತಿದಾರೆ
Follow us on

ಬೆಳಗಾವಿ: ಎಲೆಕ್ಷನ್ ಬಂತು ಅಂದಾಗ ಮಾತ್ರ ಮನೆ ಬಳಿ ಬರುವ ರಾಜಕಾರಣಿಗಳು ಪ್ರವಾಹ ಬಂದು ಮನೆ ಬಿದ್ದಿದೆ ಅಂದ್ರೂ ಕೂಡ ತಲೆ ಕೆಡಿಸಿಕೊಳ್ಳೋದಿಲ್ಲ. ಕಳೆದೊಂದು ವರ್ಷದಿಂದ ಮುರಿದು ಬಿದ್ದಿರುವ ಮನೆಯಲ್ಲೇ ಇದೆ ಈ ರೈತ ಕುಟುಂಬ. ಆದ್ರೆ ಇದುವರೆಗೂ ಸರ್ಕಾರ ಇವರ ಬಗ್ಗೆ ಕನಿಕರವನ್ನೂ ತೋರಿಸಿಲ್ಲ.

ಮಲಪ್ರಭಾ ನದಿ ಪ್ರವಾಹಕ್ಕೆ ಮನೆ ಕಳೆದುಕೊಂಡ್ರೂ ಇನ್ನೂ ಸರ್ಕಾರದಿಂದ ಬರಬೇಕಿದ್ದ ಪರಿಹಾರ ಬಂದಿಲ್ಲ. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ನೆರೆ ಸಂತ್ರಸ್ತೆ ಬಸವ್ವಾ ಕುರಿ ಮನೆ ಕಟ್ಟಿಸಿಕೊಡಿ ಎಂದು ಕಣ್ಣೀರು‌ ಹಾಕಿದ್ದಾರೆ. ಕಳೆದ ವರ್ಷ ಬಂದ ನೆರೆ ಪ್ರವಾಹದಲ್ಲಿ ಭಾಗಶಃ ಮನೆ ಬಿದಿದೆ. ಆದ್ರೆ ಇಲ್ಲಿಯ ವರೆಗೂ ಪರಿಹಾರ ಮಾತ್ರ ಕೈಗೆ ಬಂದಿಲ್ಲ. ದಂಪತಿ ಮತ್ತು ಓರ್ವ ವೃದ್ಧೆ ಬಿದ್ದ ಮನೆಯಲ್ಲೇ ಜೀವನ ಮಾಡುತ್ತಿದ್ದಾರೆ.

ಸಾಲ ಮಾಡಿ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೂಡ ನೀರು ಪಾಲಾಗಿದೆ. ತುತ್ತು ಅನ್ನಕ್ಕೂ ಪರಿತಪ್ಪಿಸುವಂತಾಗಿದೆ. ಬಸವ್ವಾ ಕುರಿ ಒಂದು ಎತ್ತು ಮಾರಿ ಮನೆ ನಿಭಾಯಿಸುತ್ತಿದ್ದಾರೆ. ಪರಿಹಾರಕ್ಕಾಗಿ ಕಳೆದೊಂದು ವರ್ಷದಿಂದ ಕಚೇರಿ ಅಲೆದೂ ಅಲೆದೂ ಬಳಲಿ ಬೆಂಡಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಕುಟುಂಬ ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. ಬದುಕುವುದೇ ಭಾರವಾಗಿದೆ ಎಂಬಂತೆ ಪ್ರತಿ ದಿನ ಕಷ್ಟದಲ್ಲೇ ಜೀವ ಬಿಗಿದಿಡಿದು ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಸರ್ಕಾರ ಈಗಲಾದ್ರೂ ಪರಿಹಾರ ನೀಡಿ ಕೈಹಿಡಿಯಬೇಕಿದೆ.