‘ಗಾಂಜಾ’ಲಿ.. ಹಣ ಕೊಡಲಿಲ್ಲ ಅಂತಾ ಹೊಟ್ಟೆಗೆ ಚಾಕು ಇರಿದು ಪರಾರಿ.. ಎಲ್ಲಿ?
ಮೈಸೂರು: ಗಾಂಜಾ ಮತ್ತಿನಲ್ಲಿದ್ದ ಗುಂಪೊಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾರಗೌಡನಹಳ್ಳಿ ಗೇಟ್ ಬಳಿ ನಡೆದಿದೆ. ಪ್ರಸನ್ನ (30) ಹಲ್ಲೆಗೊಳಗಾದವರು. ಬೈಕ್ನಲ್ಲಿ ಹೋಗುತ್ತಿದ್ದ ಪ್ರಸನ್ನನನ್ನು ತಡೆದ ಮೂರು ಜನರ ಗುಂಪೊಂದು ತನ್ನ ಬಳಿ ಇರುವ ಹಣವನ್ನು ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಪ್ರಸನ್ನ ನನ್ನ ಬಳಿ ಹಣವಿಲ್ಲ ಎಂದು ಉತ್ತರಿಸಿದ್ದ. ಇದಕ್ಕೆ ಆಕ್ರೋಶಗೊಂಡ ದುಷ್ಕರ್ಮಿಗಳು ಪ್ರಸನ್ನ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಗಾಯಾಳು ಪ್ರಸನ್ನಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಯಪುರ ಪೊಲೀಸ್ […]

ಮೈಸೂರು: ಗಾಂಜಾ ಮತ್ತಿನಲ್ಲಿದ್ದ ಗುಂಪೊಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾರಗೌಡನಹಳ್ಳಿ ಗೇಟ್ ಬಳಿ ನಡೆದಿದೆ. ಪ್ರಸನ್ನ (30) ಹಲ್ಲೆಗೊಳಗಾದವರು.
ಬೈಕ್ನಲ್ಲಿ ಹೋಗುತ್ತಿದ್ದ ಪ್ರಸನ್ನನನ್ನು ತಡೆದ ಮೂರು ಜನರ ಗುಂಪೊಂದು ತನ್ನ ಬಳಿ ಇರುವ ಹಣವನ್ನು ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಪ್ರಸನ್ನ ನನ್ನ ಬಳಿ ಹಣವಿಲ್ಲ ಎಂದು ಉತ್ತರಿಸಿದ್ದ. ಇದಕ್ಕೆ ಆಕ್ರೋಶಗೊಂಡ ದುಷ್ಕರ್ಮಿಗಳು ಪ್ರಸನ್ನ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ಗಾಯಾಳು ಪ್ರಸನ್ನಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.




