ನಾನು ಇಲ್ಲೇ ಉರುಲು ಹಾಕ್ಕೊಂಡ್ ಸಾಯ್ತೇನೆ.. DCM ಕ್ಷೇತ್ರದಲ್ಲಿ ರೈತನ ಕಣ್ಣೀರು
ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹದಿಂದ ನೂರಾರು ಎಕರೆ ಜಮೀನು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶ ಎದುರಾಗಿದೆ. ಇದೀಗ, ಡಿಸಿಎಂ ಗೋವಿಂದ ಕಾರಜೋಳ ಸ್ವಕ್ಷೇತ್ರವಾದ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ರೈತನ ಕಣ್ಣೀರಿನ ಕಥೆ ಬೆಳಕಿಗೆ ಬಂದಿದೆ. 6 ಎಕರೆಯಲ್ಲಿ ಕಬ್ಬು, ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆದಿದ್ದ ರೈತ ಪರಸಪ್ಪನಿಗೆ ಈ ಬಾರಿಯೂ ಉಂಟಾದ ಪ್ರವಾಹದಿಂದ ಕಷ್ಟಪಟ್ಟು ಬೆಳೆಸಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಹೋದ ವರ್ಷವೂ ಹೀಗೆ ಆಗಿತ್ತು, ಈ ಸಲವೂ ಹೀಗೆ […]

ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹದಿಂದ ನೂರಾರು ಎಕರೆ ಜಮೀನು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶ ಎದುರಾಗಿದೆ. ಇದೀಗ, ಡಿಸಿಎಂ ಗೋವಿಂದ ಕಾರಜೋಳ ಸ್ವಕ್ಷೇತ್ರವಾದ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ರೈತನ ಕಣ್ಣೀರಿನ ಕಥೆ ಬೆಳಕಿಗೆ ಬಂದಿದೆ.

6 ಎಕರೆಯಲ್ಲಿ ಕಬ್ಬು, ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆದಿದ್ದ ರೈತ ಪರಸಪ್ಪನಿಗೆ ಈ ಬಾರಿಯೂ ಉಂಟಾದ ಪ್ರವಾಹದಿಂದ ಕಷ್ಟಪಟ್ಟು ಬೆಳೆಸಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಹೋದ ವರ್ಷವೂ ಹೀಗೆ ಆಗಿತ್ತು, ಈ ಸಲವೂ ಹೀಗೆ ಆಗಿದೆ. ಹಿಂಗಾದ್ರೆ ನಮ್ಮ ಪರಿಸ್ಥಿತಿ ಏನು? ಪ್ರತಿ ವರ್ಷ ಹೀಗೇ ಆದರೆ ರೈತ ಹೇಗೆ ಬದುಕಬೇಕು ಎಂದು ಪರಸಪ್ಪ ಸುಣಗಾರ ತಮ್ಮ ಅಳಲು ತೋಡಿಕೊಂಡರು. ನಾನು ಬದುಕೋದಿಲ್ಲ, ಸಾಯುತ್ತೇನೆ. ನಾನು ಇಲ್ಲೇ ಉರುಲು ಹಾಕಿಕೊಂಡು ಸಾಯುತ್ತೇನೆ ಎಂದು ಕಣ್ಣೀರಿಟ್ಟರು.
ನಾಲ್ಕು ತಿಂಗಳಾಯ್ತು, ರೈತರ ಕೈಗೆ ಒಂದು ರೂಪಾಯಿ ಸಹ ಬಂದಿಲ್ಲ. ನಮ್ಮ ಕಣ್ಣಲ್ಲಿ ನೀರು ಉಕ್ಕಿ ಬರುತ್ತಿದೆ. ಸರ್ಕಾರ ಏನಾದ್ರೂ ಮಾಡಬೇಕು ಎಂದು ಹೊಲದಲಿ ತಿರುಗಾಡಿ ಕಣ್ಣೀರು ಹಾಕಿದ ರೈತ ಸರ್ಕಾರಕ್ಕೆ ಅಂಗಲಾಚಿ ಬೇಡಿಕೊಂಡಿದ್ದಾನೆ.




