ಅಪ್ಪಂದಿರ ದಿನಾಚರಣೆಯ ಅಂಗವಾಗಿ ಗೂಗಲ್ ವಿಶೇಷವಾಗಿ ಸಂಭ್ರಮಿಸುತ್ತಿದೆ. ಬಣ್ಣ ಬಣ್ಣದ ಅಲಂಕಾರದ ಜತೆ ಡೂಡಲ್ ಮೂಲಕ ಅಪ್ಪಂದಿರ ದಿನದ ಶುಭಾಶಯ ತಿಳಿಸಿದೆ. ವಿವಿಧ ಬಣ್ಣಗಳ ಗ್ರೀಟಿಂಗ್ ಕಾರ್ಡ್ ರಚನೆಯಿಂದ ಹಾರೈಸಿದೆ. ಭಾರತದಲ್ಲಿ ಪ್ರತೀ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಜೂನ್ 20ನೇ ತಾರೀಕು ಅಂದರೆ ಇಂದು ಆಚರಿಸಲಾಗುತ್ತಿದೆ.
ಡೂಡಲ್ನೊಂದಿಗೆ ವಿಶೇಷವಾಗಿ ‘ಅಪ್ಪಂದಿರ ದಿನದ ಶುಭಾಶಯಗಳು’! ಎಂದು ಸಂದೇಶ ಸಾರುವ ಮೂಲಕ ಗೂಗಲ್ ಶುಭಕೋರಿದೆ. ಅನಿಮೇಟೆಡ್ ಡೂಡಲ್ ರಚಿಸುವ ಮೂಲಕ ಗೂಗಲ್ ಶುಭಾಶಯ ತಿಳಿಸಿದೆ.
ಕೊರೊನಾ ವೈರಸ್ ಹಾವಳಿಯಿಂದಾಗಿ ಕಳೆದ ವರ್ಷದಂತೆಯೇ ಈ ವರ್ಷವೂ ಕೂಡಾ ಹೆಚ್ಚು ವಿಜೃಂಭಣೆಯಿಂದ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿಲ್ಲ. ಹೆಚ್ಚಿನ ಜನರು ಗ್ರೀಟಿಂಗ್ ಕೊಡುವ ಮೂಲಕ ತನ್ನ ಪ್ರೀತಿಯನ್ನು ಅಪ್ಪಂದಿರ ಬಳಿ ಹಂಚಿಕೊಂಡಿದ್ದಾರೆ. ಕೇಕ್ ತಯಾರಿಸಿ ಅಪ್ಪನಿಗೆ ಸಿಹಿ ತಿನ್ನಿಸುವ ಮೂಲಕ ಈ ದಿನವನ್ನು ಆಚರಿಸುತ್ತಿದ್ದಾರೆ. ಅಪ್ಪನೊಂದಿಗೆ ಈ ದಿನವನ್ನು ಸಂತೋಷದಿಂದ ಕಳೆಯಲು ನಿರ್ಧರಿಸಿದ್ದಾರೆ.
ಇಷ್ಟು ವರ್ಷ ನಮ್ಮನ್ನು ಸಾಕಿ-ಸಲುಹಿ, ಜೀವನದ ಕಷ್ಟ ನೋವುಗಳನ್ನು ಎದುರಿಸುವ ಶಕ್ತಿ ಕೊಟ್ಟು, ಬಿದ್ದಾಗ ಕಣ್ಣೊರಿಸಿ ಧೈರ್ಯ ತುಂಬಿ, ಗೆದ್ದಾಗ ಬೆನ್ನಿನ ಮೇಲೆ ಹೊತ್ತು ಮಗನ ಸಾಧನೆಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಅಪ್ಪನಿಗೆ ಇಂದು ಧನ್ಯವಾದ ಹೇಳಲೇ ಬೇಕು. ಈ ದಿನವನ್ನು ಅಪ್ಪನಿಗಾಗಿ ಮೀಸಲಿಡಲೇಬೇಕು.
ಇದನ್ನೂ ಓದಿ:
Frank Kameny: ಅಮೆರಿಕ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್ ಕಾಮೆನಿ ಅವರಿಗೆ ವಿಶೇಷ ಗೂಗಲ್ ಡೂಡಲ್ ಗೌರವ
Covid Vaccine: ‘ಕೊವಿಡ್ 19 ಲಸಿಕೆ ಪಡೆದು ಜೀವ ರಕ್ಷಿಸಿಕೊಳ್ಳಿ’-ಗೂಗಲ್ ಡೂಡಲ್ನಿಂದ ವಿಶ್ವಕ್ಕೆ ಸಂದೇಶ