Father’s day investment tips: ಜಿಮ್ ರೋಜರ್ಸ್ ಹೂಡಿಕೆ ಐಡಿಯಾಗಳೆಂದರೆ ಭಾರತೀಯ ತಂದೆಯರ ಪಾಲಿಗೆ ಫೇವರಿಟ್

ಜೂನ್ 20, 2021ರ ಭಾನುವಾರ ಅಪ್ಪನಿಗಾಗಿ ಮೀಸಲಿಟ್ಟ ದಿನ. ಈ ದಿನದ ವಿಶೇಷವಾಗಿ ಇಲ್ಲಿ ಹೂಡಿಕೆಗೆ ಸಂಬಂಧಿಸಿದ ವಿಶೇಷ ಲೇಖನ ಇಲ್ಲಿದೆ. ಜಿಮ್ ರೋಜರ್ಸ್ ಹೂಡಿಕೆ ಐಡಿಯಾಗಳ ಬಗ್ಗೆ ವಿವರಗಳು ಇಲ್ಲಿವೆ.

Father's day investment tips: ಜಿಮ್ ರೋಜರ್ಸ್ ಹೂಡಿಕೆ ಐಡಿಯಾಗಳೆಂದರೆ ಭಾರತೀಯ ತಂದೆಯರ ಪಾಲಿಗೆ ಫೇವರಿಟ್
ಜಿಮ್ ರೋಜರ್ಸ
Follow us
TV9 Web
| Updated By: Srinivas Mata

Updated on: Jun 19, 2021 | 5:45 PM

ಜೂನ್ 20, 2021 ಅಪ್ಪನಿಗಾಗಿ ಮೀಸಲಿರಿಸಿದ ದಿನ- Father’s day. ಅಂದರೆ ತಮ್ಮ ತಂದೆ ಬಗ್ಗೆ ಇರುವ ಗೌರವ, ಪ್ರೀತಿಯನ್ನು ಇನ್ನಷ್ಟು ಉತ್ಕಟವಾಗಿ ತೋರಿಸಿಕೊಳ್ಳುವುದಕ್ಕೆ ಮಕ್ಕಳಿಗೆ ಒಂದು ಸಣ್ಣ ಅವಕಾಶ. ಈಗಿನ ಕಷ್ಟದ ಸನ್ನಿವೇಶದಲ್ಲೂ ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂದು ತಂದೆ ಮೂಲಕ ಬಂದ ಆರ್ಥಿಕ ಬುದ್ಧಿವಂತಿಕೆಯನ್ನು ಬಳಸಿ, ತೀರ್ಮಾನ ಕೈಗೊಳ್ಳುವ ಮೂಲಕ ಈ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸುವುದು ಹೇಗೆ ಎಂಬುದನ್ನು ನಿರ್ಧರಿಸಿ. ಭಾರತದಲ್ಲಿ ತಂದೆ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರು ಹೇಗೆ ಆಲೋಚನೆ ಮಾಡುತ್ತಾರೋ ಅದೇ ವಿಧಾನದಲ್ಲಿ ದಂತಕಥೆ ಎನಿಸಿಕೊಂಡ ಹೂಡಿಕೆದಾರರೊಬ್ಬರು ನೀಡಿರುವ ಸಲಹೆ ಇಲ್ಲಿದೆ. “ಏನೂ ಇಲ್ಲದೆ ಹೋದರೂ ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿಗೆ ಚಿನ್ನ ಹಾಗೂ ಸ್ವಲ್ಪ ಬೆಳ್ಳಿಯನ್ನು ಇನ್ಷೂರೆನ್ಸ್​ ರೀತಿ ಇಟ್ಟುಕೊಂಡಿರಬೇಕು,” ಎಂದು ಅಮೆರಿಕನ್ ಹೂಡಿಕೆದಾರ ಜಿಮ್ ರೋಜರ್ಸ್ ಅಭಿಪ್ರಾಯ ಪಡುತ್ತಾರೆ.

ಕಮಾಡಿಟಿಗಳ ಗುರು ಎನಿಸಿಕೊಂಡಿರುವ ರೋಜರ್ಸ್ ಪ್ರಕಾರ, ಈ ಎರಡಕ್ಕಿಂತ ಅತ್ಯಂತ ಸುರಕ್ಷಿತವಾದ ಹೂಡಿಕೆ ವಿಶ್ವದಲ್ಲಿ ಯಾವುದೂ ಇಲ್ಲ. ಚಿನ್ನವನ್ನು ವೈಯಕ್ತಿಕ ಹೂಡಿಕೆ ಪೋರ್ಟ್​ಫೋಲಿಯೋದಲ್ಲಿ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡುತ್ತಾರೆ. ಭಾರತೀಯ ಕುಟುಂಬಗಳು ತಲೆಮಾರುಗಳಿಂದ ಚಿನ್ನದ ಮೇಲೆ ಅವಲಂಬಿತವಾಗಿವೆ. ಈ ಹೂಡಿಕೆಯು ಹಲವು ಬಗೆಯಲ್ಲಿ ಬರುತ್ತದೆ. ಹಲವರು ಚಿನ್ನದ ಬಾರ್​ಗಳು ಅಥವಾ ನಾಣ್ಯಗಳಲ್ಲಿ ಹೂಡಿಕೆ ಮಾಡುವುದನ್ನು ಬಯಸುತ್ತಾರೆ. ಇನ್ನೂ ಕೆಲವರು ಚಿನ್ನದ ಆಭರಣ ಖರೀದಿಸುವುದಕ್ಕೆ ಇಷ್ಟಪಡುತ್ತಾರೆ. ಸಮಯ ಕಳೆದಂತೆ ಹಲವು ಕುಟುಂಬಗಳು ಚಿನ್ನದ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳಲ್ಲಿ (ETFs) ಅಥವಾ ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ.

ಹಾಗಿದ್ದರೆ ಚಿನ್ನ ಮತ್ತು ಬೆಳ್ಳಿಯಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಜಿಮ್ ರೋಜರ್ಸ್ ಹೇಳುವಂತೆ, ಶೇ 10ರಿಂದ ಶೇ 15ರಷ್ಟು ಮೊತ್ತವನ್ನು ಚಿನ್ನ ಮತ್ತು ಬೆಳ್ಳಿಯಲ್ಲಿ ಹಾಕಬಹುದು. ವೈಯಕ್ತಿವಾದ ಸಂಶೋಧನೆ ಮತ್ತು ಅಧ್ಯಯನದ ಆಧಾರದಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು ಎನ್ನುತ್ತಾರೆ ರೋಜರ್ಸ್. ಹಾಟ್​ ಟಿಪ್ಸ್​ಗಳು ನಿಮ್ಮನ್ನು ಹಾಳು ಮಾಡುತ್ತವೆ. ನಿಮಗೆ ನಿರ್ದಿಷ್ಟವಾಗಿ ಬೆಲೆಬಾಳುವ ಲೋಹಗಳ ಬಗ್ಗೆ ಗೊತ್ತಿದ್ದಲ್ಲಿ ಅದರ ಪ್ರಕಾರ ಹೂಡಿಕೆ ಮಾಡಬೇಕು. ಒಂದು ವೇಳೆ ಆ ಬಗ್ಗೆ ಗೊತ್ತಿಲ್ಲ ಎಂದಾದಲ್ಲಿ ಅದನ್ನು ಅರ್ಥ ಮಾಡಿಕೊಂಡು, ಕಲಿಯಿರಿ ಎಂದು ರೋಜರ್ಸ್ ಸಲಹೆ ಮಾಡುತ್ತಾರೆ. ಇನ್ನೂ ಮುಂದುವರಿದು, ಇತರರ ಸಲಹೆ ಅಥವಾ ಟಿಪ್ಸ್ ಆಧಾರದಲ್ಲಿ ಹೂಡಿಕೆ ಮಾಡಬಾರದು. ಪ್ರತಿಯೊಬ್ಬರ ಪಯಣವು ವಿಭಿನ್ನವಾಗಿರುತ್ತದೆ. ಆದ್ದರಿಂದ ಅವರದೇ ಹಾದಿಯಲ್ಲಿ ಸಾಗಬೇಕು ಎನ್ನುತ್ತಾರೆ.

ಎಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು ಎಂಬುದರ ಬದಲಿಗೆ ಎಷ್ಟು ಆ ಬಗ್ಗೆ ಗೊತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಬೆಳ್ಳಿಯ ಬಗ್ಗೆ ಹೆಚ್ಚು ತಿಳಿದಿದ್ದರೆ ಅದರಲ್ಲೇ ಹಣ ಹೂಡಿಕೆ ಮಾಡಬಹುದು. ಕಡಿಮೆ ಗೊತ್ತಿದೆ ಎಂದಾದಲ್ಲಿ ಕಡಿಮೆ ಹೂಡಿಕೆ ಮಾಡಬಹುದು. ಎಲ್ಲವೂ ನಿಮಗೆ ಆ ಬಗ್ಗೆ ಎಷ್ಟು ಗೊತ್ತಿದೆ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಸೂಚ್ಯಂಕ ರೂಪದಲ್ಲಿ ಕಮಾಡಿಟಿಗಳನ್ನು ಖರೀದಿಸಲು ಕಾಯುತ್ತೇವೆ. ಇದು ಬಹಳ ಸುಲಭ. ಹಲವು ಅಧ್ಯಯನಗಳು ತಿಳಿಸಿರುವಂತೆ, ಸೂಚ್ಯಂಕಗಳಲ್ಲಿ ಹೂಡಿಕೆ ಮಾಡಿದರೆ ಇತರರಿಗಿಂತ ಉತ್ತಮ ರಿಟರ್ನ್ಸ್ ದೊರೆಯುತ್ತದೆ ಎನ್ನುತ್ತಾರೆ ರೋಜರ್ಸ್.

ರಿಯಲ್​ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುವುದರ ಪ್ರಾಮುಖ್ಯದ ಬಗ್ಗೆ ಕೂಡ ರೋಜರ್ಸ್​ ವಿವರಿಸುತ್ತಾರೆ. ಹಣದುಬ್ಬರ ಏರಿಕೆ ಕಾಲದ;್;ಒ ಬೆಳ್ಳಿ ಮತ್ತು ಕಮಾಡಿಟಿಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ. ಆಸ್ತಿಗಳ ವಿಚಾರದಲ್ಲಿ ಕಮಾಡಿಟಿ ಅತ್ಯಂತ ಅಗ್ಗವಾದದ್ದು. ಬೆಳ್ಳಿಯು ದಾಖಲೆ ಮಟ್ಟದಿಂದ ಶೇ 50ರಷ್ಟು ಕಡಿಮೆ ಆಗಿದೆ. ಸಕ್ಕರೆ ಶೇ 70ರಷ್ಟು, ತೈಲ ಶೇ 50ರಷ್ಟು ಕಡಿಮೆ ಆಗಿದೆ. ಇದು ನೀರ ಮೇಲಿನ ಗುಳ್ಳೆಯಂತಲ್ಲ. ನಿಜವಾದ ಆಸ್ತಿಯನ್ನು ಹೊಂದುವ ಮೂಲಕ ಹಣದುಬ್ಬರದಿಂದ ಯಾವಾಗಲೂ ರಕ್ಷಣೆ ಪಡೆಯಬೇಕು.

ಇದನ್ನೂ ಓದಿ: Tax free interest income: ಈ ಐದು ಹೂಡಿಕೆಗಳ ಮೇಲಿನ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂಬ ಸಂಗತಿ ಗೊತ್ತೆ?

(Commodity guru Jim Rogers investment tips on the backdrop of Father’s day)

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್