ಬೆಂಗಳೂರು: ಶುಲ್ಕ ಪಾವತಿ ಮಾಡದ ಕಾರಣಕ್ಕೆ 500 ಮಕ್ಕಳ ಆನ್ ಲೈನ್ ತರಗತಿ ಐಡಿ ಬ್ಲಾಕ್ ಮಾಡಿರುವ ಪ್ರಕರಣ ಬೆಂಗಳೂರಿನ ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆದಿದೆ.
ಈಗಾಗಲೇ ಶಾಲೆ ತಿಳಿಸಿದಂತೆ ಪೊಷಕರು ಮೊದಲ ಹಂತದ ಶುಲ್ಕ ಪಾವತಿಸಿದ್ದು, ಎರಡನೇ ಹಂತದ ಶುಲ್ಕ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಒತ್ತಡ ಹೇರಿದೆ. ಈ ಹಿನ್ನೆಲೆಯಲ್ಲಿ ಶೇ. 50ರಷ್ಟು ಫೀಸ್ ತೆಗೆದುಕೊಳ್ಳುವಂತೆ ಪೋಷಕರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಒಪ್ಪದ ಶಾಲಾ ಆಡಳಿತ ಮಂಡಳಿ, ಆನ್ಲೈನ್ ಕ್ಲಾಸ್ ಸ್ಥಗಿತಗೊಳಿಸಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮುಂದೆ ಇಂದು ಬೆಳಗ್ಗೆಯಿಂದ ನೂರಾರು ಪೋಷಕರು ಕಾಯುತ್ತಿದ್ದಾರೆ. ಸದ್ಯ ಎಲ್ಕೆಜಿಯಿಂದ 12 ನೇ ತರಗತಿವರೆಗೆ ಈ ಶಾಲೆಯಲ್ಲಿ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ.
ವಾರ್ಷಿಕ ಶಾಲಾ ಶುಲ್ಕ ಸಂಗ್ರಹಕ್ಕೆ ಸುರೇಶ್ ಕಡಿವಾಣ: ದಿಡ್ಡಿ ಬಾಗಿಲು ತಡವಾಗಿ ಹಾಕುವ ಯತ್ನ!