ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ

ಶಿಯೋಮಿ Mi QLED  ಸೀರಿಸ್​ನ 55 ಇಂಚಿನ 4ಕೆ ಟಿವಿಯು ಭಾರತೀಯ ಮಾರುಕಟ್ಟೆಯಲ್ಲಿ ₹ 54,999ಕ್ಕೆ ಲಭ್ಯವಿದೆ. ಆ್ಯಂಡ್ರಾಯ್ಡ್​ ಟಿವಿ ಇದಾಗಿರುವುದರಿಂದ ವೈಫೈ ಕೂಡ ಇದಕ್ಕೆ ಕನೆಕ್ಟ್​ ಮಾಡಬಹುದು.

ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ
ಎಂಐ ಟಿವಿ
Edited By:

Updated on: Dec 16, 2020 | 7:33 PM

ಚೀನಾ ಮೂಲದ ಶಿಯೋಮಿ ಸಂಸ್ಥೆ ಭಾರತದಲ್ಲಿ ಕಡಿಮೆ ಬೆಲೆಗೆ 55 ಇಂಚಿನ 4ಕೆ ಟಿವಿಯನ್ನು ಪರಿಚಯಿಸಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಲಾಂಚ್​ ಆದ ಈ ಟಿವಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಶಿಯೋಮಿ Mi QLED  ಸೀರಿಸ್​ನ 55 ಇಂಚಿನ 4ಕೆ ಟಿವಿಯು ಭಾರತೀಯ ಮಾರುಕಟ್ಟೆಯಲ್ಲಿ ₹ 54,999ಕ್ಕೆ ಲಭ್ಯವಿದೆ. ಆ್ಯಂಡ್ರಾಯ್ಡ್​ ಟಿವಿ ಇದಾಗಿರುವುದರಿಂದ ವೈಫೈ ಕೂಡ ಇದಕ್ಕೆ ಕನೆಕ್ಟ್​ ಮಾಡಬಹುದು. ಅಲ್ಲದೆ, ಆ್ಯಪ್​ಗಳನ್ನು ಕೂಡ ಇನ್​ಸ್ಟಾಲ್​ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ 4ಕೆ ರೆಸಲ್ಯೂಷನ್​ನಲ್ಲಿ ವಿಡಿಯೋ ನೋಡಬಹುದಾಗಿದೆ. ಶೇ 96 ಸ್ಕ್ರೀನ್​ ಅನ್ನು ಟಿವಿ ಹೊಂದಿದೆ.

ಎಂಐ.ಕಾಮ್​, ಫ್ಲಿಪ್​ಕಾರ್ಟ್​, ಎಂಐ ಹೋಮ್​ ಹಾಗೂ ಇತರ ಕಡೆಗಳಲ್ಲಿ ಈ ಟಿವಿ ಸಿಗಲಿದೆ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಎಂಐ ಮೊಬೈಲ್​ಗಳು ಅಧಿಪತ್ಯ ಸಾಧಿಸಿವೆ. ಅದೇ ರೀತಿ ಟಿವಿ ಕ್ಷೇತ್ರದಲ್ಲೂ ಶಿಯೋಮಿ ಕಾಲಿಟ್ಟಿದ್ದು, ಕಡಿಮೆ ಬೆಲೆಗೆ ಟಿವಿಗಳನ್ನು ನೀಡುತ್ತಿದೆ.

ಯಾವಾಗಿನಿಂದ ಲಭ್ಯ?
ಈಗಾಗಲೇ Mi QLEDಗೆ ಪ್ರೀ ಬುಕ್ಕಿಂಗ್ ಆರಂಭವಾಗಿದೆ. ಡಿಸೆಂಬರ್ 21 ಮಧ್ಯಾಹ್ನ 12 ಗಂಟೆಗೆ ಟಿವಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಸದ್ಯ, ಕಪ್ಪು ಬಣ್ಣದಲ್ಲಿ ಮಾತ್ರ ಶಿಯೋಮಿ ಟಿವಿ ಗ್ರಾಹಕರಿಗೆ ಸಿಗಲಿದೆ.  ಫ್ಲಿಪ್​ಕಾರ್ಟ್​​ನಲ್ಲಿ  ಶಿಯೋಮಿ Mi QLED ಟಿವಿಗೆ ಆಫರ್​ ಸಿಗುವ ಸಾಧ್ಯತೆ ಇದೆ. ಎಸ್​ಬಿಐ ಕಾರ್ಡ್​ ಮೇಲೆ ಇದನ್ನು ಖರೀದಿಸಿದರೆ ನಿಮಗೆ ಶೇ 10 ಡಿಸ್ಕೌಂಟ್​ ಕೂಡ ಸಿಗಲಿದೆ.

ಭಾರೀ ಪೈಪೋಟಿ
ಎಂಐ ಸಂಸ್ಥೆ ಭಾರತದಲ್ಲಿ ಕಳೆದ 2 ವರ್ಷಗಳಿಂದ ಬರೋಬ್ಬರಿ 50 ಲಕ್ಷ ಟಿವಿಗಳನ್ನು ಮಾರಾಟ ಮಾಡಿದೆಯಂತೆ. ಶಿಯೋಮಿ ಟಿವಿ ಭಾರತದ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡುತ್ತಿದೆ. ಈಗ ಪರಿಚಯಗೊಂಡಿರುವ ಹೊಸ ಟಿವಿ, ಎಲ್​ಜಿ, ಸ್ಯಾಮ್​​ಸಂಗ್​, ಒನ್​ಪ್ಲಸ್​ ಕಂಪೆನಿಗೆ ಸ್ಪರ್ಧೆ ಒಡ್ಡಲಿದೆ.

ಶಿಯೋಮಿ ಮೇಲೆ ಪೇಟೆಂಟ್ ಉಲ್ಲಂಘನೆ ಕೇಸ್: ₹ 1000 ಕೋಟಿ ಜಮಾ ಮಾಡಲು ಕೋರ್ಟ್ ಆದೇಶ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us