ಎನ್.ಮಹೇಶ್ ನಿಂದಿಸಿ ಅವಹೇಳನಕಾರಿ ಪೋಸ್ಟ್, 7 ಜನರ ವಿರುದ್ಧ FIR
ಚಾಮರಾಜನಗರ: ಸಾಮಾಜಿಕ ಜಾಲ ತಾಣದಲ್ಲಿ ಶಾಸಕ ಎನ್.ಮಹೇಶ್ ನಿಂದಿಸಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ 7 ಜನರ ವಿರುದ್ಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಶ್ರೀಕಾಂತ್ ಅಪ್ಪಗೆರೆ, ಪ್ರಜ್ವಲ್, ಮುರುಳೀಧರ ಮೌರ್ಯ, ರವಿಕುಮಾರ್, ಮೋಹನ್ ಮೂಕನಾಯಕ, ಸದಾಶಿವ ರಾವಣ್ ಸೇರಿದಂತೆ 7 ಜನರ ವಿರುದ್ಧ ಕೋರ್ಟ್ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಲಾಗಿದೆ. ಕಳೆದ ಒಂದು ವರ್ಷದಿಂದ ವಾಟ್ಸ್ ಆ್ಯಪ್, ಫೇಸ್ಬುಕ್ಗಳಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ಗೆ ಕೆಟ್ಟ ಪದಗಳಿಂದ ನಿಂದನೆ ಮಾಡಲಾಗುತ್ತಿತ್ತು. ಹೀಗಾಗಿ ಜೆ.ಎಂ.ಎಫ್.ಸಿ ನ್ಯಾಯಾಲಯದ ಅನುಮತಿ […]
ಚಾಮರಾಜನಗರ: ಸಾಮಾಜಿಕ ಜಾಲ ತಾಣದಲ್ಲಿ ಶಾಸಕ ಎನ್.ಮಹೇಶ್ ನಿಂದಿಸಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ 7 ಜನರ ವಿರುದ್ಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಶ್ರೀಕಾಂತ್ ಅಪ್ಪಗೆರೆ, ಪ್ರಜ್ವಲ್, ಮುರುಳೀಧರ ಮೌರ್ಯ, ರವಿಕುಮಾರ್, ಮೋಹನ್ ಮೂಕನಾಯಕ, ಸದಾಶಿವ ರಾವಣ್ ಸೇರಿದಂತೆ 7 ಜನರ ವಿರುದ್ಧ ಕೋರ್ಟ್ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಲಾಗಿದೆ.
ಕಳೆದ ಒಂದು ವರ್ಷದಿಂದ ವಾಟ್ಸ್ ಆ್ಯಪ್, ಫೇಸ್ಬುಕ್ಗಳಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ಗೆ ಕೆಟ್ಟ ಪದಗಳಿಂದ ನಿಂದನೆ ಮಾಡಲಾಗುತ್ತಿತ್ತು. ಹೀಗಾಗಿ ಜೆ.ಎಂ.ಎಫ್.ಸಿ ನ್ಯಾಯಾಲಯದ ಅನುಮತಿ ಪಡೆದು ಎನ್.ಮಹೇಶ್ ಅಭಿಮಾನಿ ಬಳಗದ ಮುಖಂಡ ಸಿದ್ದರಾಜು ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.