ದ್ವೇಷ ಭಾಷಣ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್ಐಆರ್
ಕಲಬುರಗಿ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ವಕೀಲೆ ಶ್ವೇತಾ ಅನ್ನೋರಿಂದ ನಿನ್ನೆ ಸಂಜೆ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ತಿಂಗಳು 15 ರಂದು ಎಐಎಂಎಂ ಪಕ್ಷದ ವತಿಯಿಂದ ಕಲಬುರಗಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಸಭೆಯಲ್ಲಿ ವಾರಿಷ್ ಪಠಾಣ್ ಭಾಷಣ ಮಾಡಿದ್ದರು. ಈ ವೇಳೆ 15 ಕೋಟಿ ಮುಸ್ಲಿಮರು 100 ಕೋಟಿ ಹಿಂದೂಗಳಲ್ಲಿ ಪ್ರಾಬಲ್ಯ ಸಾಧಿಸಬಹುದು. ಬರೀ ಮಹಿಳೆಯರು ಮುಂದೆ ಬಂದಿದ್ದಕ್ಕೆ ನಿಮ್ಮ […]
ಕಲಬುರಗಿ: ಮಹಾರಾಷ್ಟ್ರದ ಮಾಜಿ ಶಾಸಕ ವಾರಿಷ್ ಪಠಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ವಕೀಲೆ ಶ್ವೇತಾ ಅನ್ನೋರಿಂದ ನಿನ್ನೆ ಸಂಜೆ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ತಿಂಗಳು 15 ರಂದು ಎಐಎಂಎಂ ಪಕ್ಷದ ವತಿಯಿಂದ ಕಲಬುರಗಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಸಭೆಯಲ್ಲಿ ವಾರಿಷ್ ಪಠಾಣ್ ಭಾಷಣ ಮಾಡಿದ್ದರು. ಈ ವೇಳೆ 15 ಕೋಟಿ ಮುಸ್ಲಿಮರು 100 ಕೋಟಿ ಹಿಂದೂಗಳಲ್ಲಿ ಪ್ರಾಬಲ್ಯ ಸಾಧಿಸಬಹುದು. ಬರೀ ಮಹಿಳೆಯರು ಮುಂದೆ ಬಂದಿದ್ದಕ್ಕೆ ನಿಮ್ಮ ಬೆವರು ಹರಿಯುತ್ತಿದೆ, ಇನ್ನು ಅವರ ಜೊತೆ ನಾವು ಬಂದ್ರು ಏನಾಗುತ್ತೆ ನೋಡಿ ಅಂತ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದರಿಂದ ಇದನ್ನು ಖಂಡಿಸಿ ವಕೀಲೆ ಶ್ವೇತಾ ವಾರಿಷ್ ಪಠಾಣ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಪೊಲೀಸ್ ಆಯುಕ್ತರಿಗೆ ಗೃಹಸಚಿವರಿಂದ ತರಾಟೆ: ವಾರಿಸ್ ಪಠಾಣ್ ವಿರುದ್ಧ ಯಾವುದೇ ಕ್ರಮ ಜರುಗಿಸದ ಹಿನ್ನೆಲೆ ದೂರವಾಣಿ ಮೂಲಕ ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತರಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೆಬ್ರವರಿ 15ರಂದು ಕಲ್ಬುರ್ಗಿ ನಗರದಲ್ಲಿ ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಆದ್ರೆ ನೀವು ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ನಾನು ರಜೆಯಲ್ಲಿದ್ದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಗೃಹಸಚಿವರಿಗೆ ಉತ್ತರಿಸಿದ್ದಾರೆ. ನೀವು ರಜೆಯಲ್ಲಿದ್ದರೆ ಇಲಾಖೆ ನಿದ್ದೆ ಮಾಡುತ್ತಿದ್ಯಾ? ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಿ ವರದಿ ನೀಡಿ ಎಂದು ಬೊಮ್ಮಾಯಿ ಆದೇಶ ನೀಡಿದ್ದಾರೆ. ಮಹಾರಾಷ್ಟ್ರದ ಎಐಎಐಎಂ ಪಕ್ಷದ ಮಾಜಿ ಶಾಸಕ ವಾರಿಸ್ ಪಠಾಣ್ ಪ್ರಚೋದನಾಕಾರಿ ಭಾಷಣ ನಡೆದು ಐದು ದಿನಗಳಾದರೂ ಪೊಲೀಸರ ನಿರ್ಲಕ್ಷ್ಯಕ್ಕೆ ಗೃಹಸಚಿವರು ಗರಂ ಆಗಿದ್ರು.
Published On - 7:28 am, Sat, 22 February 20