ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್!!
ಮೊಹಮ್ಮದ್ ನಲಪಾಡ್ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ (ಬಿ ಬಿ ಎಮ್ ಪಿ) ಅಧಿಕಾರಿಗಳು ಮತ್ತು ಒಬ್ಬ ಸಾಮಾಜಿಕ ಕಾರ್ಯಕರ್ತ ದೂರುಗಳನ್ನು ದಾಖಲಿಸಿದ್ದಾರೆ. ದೂರು ಮತ್ತು ಎಫ್ ಐ ಅರ್ ಪ್ರತಿಗಳನ್ನು ನೀವು ವಿಡಿಯೋನಲ್ಲಿ ನೋಡಬಹುದು.
ಕರ್ನಾಟಕ ಕಾಂಗ್ರೆಸ್ ಯುವ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammad Nalpad) ಹುದ್ದೆಯನ್ನು ಅಲಂಕರಿಸಿ ಒಂದು ವಾರ ಆಗಿರಬಹುದು ಆಗಲೇ ಅವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರುಗಳ ಆಧಾರದಲ್ಲಿ ಎಫ್ ಐ ಆರ್ (FIR) ದಾಖಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) (KPCC) ಇದಕ್ಕೆಲ್ಲ ತಯಾರಾಗಿರುವುದು ಒಳಿತು. ಮುಂಬರುವ ದಿನಗಳಲ್ಲಿ ಇಂಥ ಸಂದರ್ಭಗಳು ಪಕ್ಷಕ್ಕೆ ಪದೇಪದೆ ಎದುರಾಗಬಹುದು. ಮೊಹಮ್ಮದ್ ನಲಪಾಡ್ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ (ಬಿ ಬಿ ಎಮ್ ಪಿ) ಅಧಿಕಾರಿಗಳು ಮತ್ತು ಒಬ್ಬ ಸಾಮಾಜಿಕ ಕಾರ್ಯಕರ್ತ ದೂರುಗಳನ್ನು ದಾಖಲಿಸಿದ್ದಾರೆ. ದೂರು ಮತ್ತು ಎಫ್ ಐ ಅರ್ ಪ್ರತಿಗಳನ್ನು ನೀವು ವಿಡಿಯೋನಲ್ಲಿ ನೋಡಬಹುದು.
ಪಕ್ಷದ ಹಿರಿಯ ನಾಯಕಲ್ಲಿ ಒಬ್ಬರಾಗಿರುವ ಬಿ ಕೆ ಹರಿಪ್ರಸಾದ್ ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಸಮಾರಂಭವನ್ನು ಕಾಂಗ್ರೆಸ್ ಇತ್ತೀಚಿಗೆ ಏರ್ಪಡಿಸಿತ್ತು. ಅಭಿನಂದನಾ ಸಮಾರಂಭದಲ್ಲಿ ತಾನೂ ಒಂದಷ್ಟು ಮೈಲೇಜ್ ಗಿಟ್ಟಿಸಿಕೊಳ್ಳೋಣ ಅಂತ ಮೊಹಮ್ಮದ್ ಕಾರ್ಪೋರೇಷನ್ ಸರ್ಕಲ್ ನಿಂದ ಟೌನ್ ಹಾಲ್ ಸುತ್ತಮುತ್ತ ಹರಿಪ್ರಸಾದ್ ಮತ್ತು ಪಕ್ಷದ ಬೇರೆ ಹಿರಿಯ ನಾಯಕರ ಜೊತೆಗೆ ತನ್ನ ಇಮೇಜ್ ಸಹ ಇರುವ ಪ್ಲೆಕ್ಸ್, ಬ್ಯಾನರ್ಗಳನ್ನು ಕಟ್ಟಿದ್ದಾರೆ. ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.
ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟುವುದನ್ನು ಬಿ ಬಿ ಎಮ್ ಪಿ ನಿಷೇಧಿಸಿ ಬಹಳ ಸಮಯವಾಗಿದೆ. ಆದರೆ ಕಾಂಗ್ರೆಸ್ ಯುವನಾಯಕನಿಗೆ ನಿಯಮಗಳನ್ನು ಉಲ್ಲಂಘಿಸುವುದರಲ್ಲೇ ಖುಷಿ ಸಿಗುತ್ತೆ ಅನಿಸುತ್ತದೆ. ಅವರ ತಂದೆ ಎನ್ ಎ ಹ್ಯಾರಿಸ್ ಬಹಳ ವರ್ಷಗಳಿಂದ ರಾಜಕಾರಣದಲ್ಲಿದ್ದಾರೂ ವಿವಾದಗಳಿಂದ ಬಹಳ ದೂರ ಇರುತ್ತಾರೆ.
ಅಪ್ಪನನ್ನು ನೋಡಿ ಕಲಿಯುವ ಅನುಸರಿಸುವ ಅವಶ್ಯಕತೆಯಂತೂ ಮೊಹಮ್ಮದ್ ನಲಪಾಡ್ ಗಿದೆ.
ಇದನ್ನೂ ಓದಿ: ಅಪ್ಪನ ಕಾರೊಂದಿಗೆ ರೋಡಲ್ಲಿ ಕಂಡ ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕಾರು ಉಪಯೋಗಿಸಿದರೆ ತಪ್ಪೇನಿದೆ ಎಂದರು!