ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧೆಡೆ ಬೆಳಗಿನ ಜಾವದಿಂದಲೇ ವರುಣ ಅಬ್ಬರಿಸಿದ್ದಾನೆ. ಮುಂಜಾನೆ 4 ಗಂಟೆ ಸುಮಾರಿಗೆ ಗುಡುಗು ಸಹಿತ ಶುರುವಾದ ಮಳೆ ಬೆಳಗ್ಗೆ 7 ಗಂಟೆಯ ನಂತರ ಕೊಂಚ ರಿಲೀಫ್ ಕೊಟ್ಟಿದೆ. ಕೆಲವು ಕಡೆಯಂತು ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು.
ಹೆಚ್ಎಎಲ್ ಕ್ಯಾಂಪಸ್ನ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಸಾಯನಿಕ ತ್ಯಾಜ್ಯಗಳ ಮೇಲೆ ಮಳೆ ಬಿದ್ದಿದ್ದರಿಂದ ರಿಯಾಕ್ಷನ್ ಆಗಿ ಬೆಂಕಿ ಹೊತ್ತಿ ಉರಿದಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಎಎಲ್ ಸ್ವಯಂ ನಿರ್ವಹಣಾ ತಂಡ ಬೆಂಕಿ ನಂದಿಸಿದೆ.
Published On - 1:45 pm, Wed, 29 April 20