ಆ್ಯಂಬುಲೆನ್ಸ್​ನಲ್ಲೇ ಮಗು ಜನನ, ವಿಮ್ಸ್ ಸಿಬ್ಬಂದಿಯಿಂದ ತಾಯಿ-ಮಗು ಸೇಫ್

ಆ್ಯಂಬುಲೆನ್ಸ್​ನಲ್ಲೇ ಮಗು ಜನನ, ವಿಮ್ಸ್ ಸಿಬ್ಬಂದಿಯಿಂದ ತಾಯಿ-ಮಗು ಸೇಫ್

ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಹೋಗುವಾಗ ಮಾರ್ಗ ಮಧ್ಯೆಯೇ ಗರ್ಭಿಣಿಗೆ ಹೆರಿಗೆಯಾಗಿರುವ ಘಟನೆಯಾಗಿದೆ. ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಲಕ್ಷ್ಮೀ ಎಂಬುವರು ಮಗುವಿಗೆ ಜನ್ಮ ನೀಡಿದ್ದಾರೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಲಕ್ಷ್ಮೀ ದಾಖಲಾಗಿದ್ದರು. ವಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ತೆರಳಲು ವೈದ್ಯರು ಸೂಚಿಸಿದ್ದರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ತೆರಳುತ್ತಿದ್ದಾಗ ಆ್ಯಂಬುಲೆನ್ಸ್‌ನಲ್ಲೇ ವಿಮ್ಸ್​ನ ನರ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿ ತಾಯಿ-ಮಗುವಿನ ಜೀವವನ್ನು ಉಳಿಸಿದ್ದಾರೆ.

ಖಾಸಗಿ ಆ್ಯಂಬುಲೆನ್ಸ್​ಗೆ ಚಾಲಕರಿಲ್ಲದ ಕಾರಣ ವಿಮ್ಸ್ ಸಿಬ್ಬಂದಿ ಸಂತೋಷ್ ಕುಮಾರ್ ಅವರೇ ಆ್ಯಂಬುಲೆನ್ಸ್ ಚಾಲನೆ ಮಾಡುತ್ತಿದ್ದರು. ಹೆರಿಗೆ ನೋವು ಹೆಚ್ಚಾದ ಕಾರಣ ಆ್ಯಂಬುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸಿ ತಕ್ಷಣ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಮ್ಸ್​ನ ಸ್ಟಾಫ್ ನರ್ಸ್ ಸಂತೋಷ್ ಕುಮಾರ್ ಅವರ ಸಮಯ ಪ್ರಜ್ಞೆಯಿಂದ ತಾಯಿ-ಮಗು ಸೇಫ್ ಆಗಿದ್ದಾರೆ.

Published On - 2:50 pm, Wed, 29 April 20

Click on your DTH Provider to Add TV9 Kannada