ಬೈಕ್ ಸಮೇತ 200 ಮೀಟರ್ ಕೊಚ್ಚಿ ಹೋದ ಸವಾರನ ಯಶಸ್ವಿ ರಕ್ಷಣೆ..
ವಿಜಯಪುರ: ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ಜನರು ಹಳ್ಳದಾಟುವಾಗ ಕೊಚ್ಚಿ ಹೋಗುತ್ತಿರುವ ಅನೇಕ ಪ್ರಸಂಗಗಳು ನಡೆಯುತ್ತಿವೆ. ಅದೇ ರೀತಿ, ನಿನ್ನೆ ತಡರಾತ್ರಿ ಸಂಗಾಪುರ ನಿವಾಸಿ ಬಂದೇನವಾಜ್ ಮೊಕಾಶಿ ಸಾರವಾಡ ಗ್ರಾಮದಿಂದ ಅತಾಲಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಹೋದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬಳಿಕ ರಸ್ತೆಯಿಂದ ಸುಮಾರು 200 […]

ವಿಜಯಪುರ: ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ಜನರು ಹಳ್ಳದಾಟುವಾಗ ಕೊಚ್ಚಿ ಹೋಗುತ್ತಿರುವ ಅನೇಕ ಪ್ರಸಂಗಗಳು ನಡೆಯುತ್ತಿವೆ.
ಅದೇ ರೀತಿ, ನಿನ್ನೆ ತಡರಾತ್ರಿ ಸಂಗಾಪುರ ನಿವಾಸಿ ಬಂದೇನವಾಜ್ ಮೊಕಾಶಿ ಸಾರವಾಡ ಗ್ರಾಮದಿಂದ ಅತಾಲಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಹೋದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬಳಿಕ ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಮುಳ್ಳಿನ ಕಟ್ಟಿಗೆಗೆ ಸಿಲುಕಿಕೊಂಡಿದ್ದ.
ನಂತರ ಬಂದೇನವಾಜ್ ತನ್ನ ಮೊಬೈಲ್ನಿಂದ ಮನೆಯವರಿಗೆ ವಿಷಯ ಮುಟ್ಟಿಸಿದ್ದಾನೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸಿಲುಕಿದ್ದ ಬಂದೇನವಾಜ್ನನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ. ಬಂದೇನವಾಜ್ನನ್ನು ಕಂಡು ಆತನ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

