ಕೊರೊನಾ ವೈರಸ್ ಬಂದ ನಂತರ ಅನೇಕರು ಸ್ವಂತ ವಾಹನದ ಮೇಲೆ ಓಡಾಡೋಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ಸ್ವಂತ ವಾಹನ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ, ಕೊರೊನಾ ನಂತರ ಕಾರು ಹಾಗೂ ಬೈಕ್ಗಳ ಖರೀದಿ ನಿಧಾನವಾಗಿ ಹೆಚ್ಚುತ್ತಿದೆ. ಕೆಲವರು ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸಿದರೆ ಇನ್ನೂ ಕೆಲವರು ಹೊಸ ವಾಹನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ಕಾರು ಖರೀದಿ ಮಾಡುತ್ತಿದ್ದಾರೆ. ಹಾಗಾದರೆ ಐದು ಲಕ್ಷ ರೂಪಾಯಿ ಒಳಗೆ ಸಿಗುತ್ತಿರುವ ಟಾಪ್ 5 ಕಾರುಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.
ಡಸ್ಟನ್ ರೆಡಿ-ಗೋ, ಬೆಲೆ- ₹ 2.83 ಲಕ್ಷ (ಎಕ್ಸ್ ಶೋರೂಂ ಬೆಲೆ)
ನಿಸ್ಸಾನ್ ಒಡೆತನದ ಡಸ್ಟನ್ ಇತ್ತೀಚೆಗೆ ಭಾರತದಲ್ಲಿ ರೆಡಿ-ಗೋ ಮಾಡೆಲ್ ಕಾರನ್ನು ಪರಿಚಯಿಸಿದೆ. ಇದರ ಎಕ್ಸ್ ಶೋರೂಂ ಬೆಲೆ ಕೇವಲ 2.83 ಲಕ್ಷ ರೂಪಾಯಿ. ಹೊಸ ರೆಡಿ-ಗೋ ಸಾಕಷ್ಟು ಹೊಸ ಫೀಚರ್ಗಳೊಂದಿಗೆ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಎಲ್-ಆಕಾರದ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್ಲ್), ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಡ್ಯುಯಲ್ ಟೋನ್ ವೀಲ್ ಕವರ್ ಹೊಂದಿರುವ 14 ಇಂಚಿನ ಚಕ್ರಗಳನ್ನು ಇದು ಹೊಂದಿದೆ.
ರೆನಾಲ್ಟ್ ಕ್ವಿಡ್, ಬೆಲೆ ₹ 2.92 ಲಕ್ಷ (ಎಕ್ಸ್ ಶೋರೂಂ ಬೆಲೆ)
ರೆನಾಲ್ಟ್ ಕ್ವಿಡ್ ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ಹೊಸ ಮಾಡೆಲ್ನಲ್ಲಿ 8.0 ಗಾತ್ರದ ಟಚ್ಸ್ಕ್ರೀನ್ ಇದೆ. ಈ ಕಾರು 800 ಸಿಸಿ ಇಂಜಿಂನ್ ಹೊಂದಿದೆ. ಹೀಗಾಗಿ, ಕಾರಿನ ಪಿಕಪ್ ಕಡಿಮೆ. ಅಲ್ಲದೆ, ಹೆದ್ದಾರಿಗಳಲ್ಲಿ ತುಂಬಾನೇ ವೇಗವಾಗಿ ಹೋಗಲು ಸಾಧ್ಯವಿಲ್ಲ. ಆದರೆ, ಕಚೇರಿ ಬಳಕೆಗೆ ಈ ಕಾರು ಉತ್ತಮವಾಗಿದೆ. ಮೈಲೇಜ್ 21-22 ಕಿ.ಮೀ ಇದೆ.
ಮಾರುತಿ ಸುಜುಕಿ ಆಲ್ಟೋ, ಬೆಲೆ ₹ 2.95 ಲಕ್ಷ (ಎಕ್ಸ್ ಶೋರೂಂ ಬೆಲೆ)
800 ಸಿಸಿ ಮಾರುತಿ ಸುಜಕಿ ಆಲ್ಟೋ ಈ ಮೊದಲಿನಿಂದಲೂ ಮಧ್ಯಮವರ್ಗದವರ ಜನಪ್ರಿಯ ಕಾರು ಎಂದೇ ಖ್ಯಾತಿ ಪಡೆದಿದೆ. ಕಡಿಮೆ ಬೆಲೆಯಲ್ಲಿ ಜನರಿಗೆ ಲಭ್ಯವಾಗುತ್ತಿದೆ ಎನ್ನುವ ಕಾರಣಕ್ಕೆ ಈ ಕಾರನ್ನು ಜನರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 2.95 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತದೆ.
ಮಾರುತಿ ಸುಜುಕಿ ಎಸ್ ಪ್ರೆಸ್ಸೊ, ಬೆಲೆ ₹ 3.71 ಲಕ್ಷ (ಎಕ್ಸ್ ಶೋರೂಂ ಬೆಲೆ)
ಎಸ್ಯುವಿ ಮಾದರಿಯ ಮಾರುತಿ ಸುಜಕಿ ಎಸ್ ಪ್ರೆಸ್ಸೊ ಎಕ್ಸ್ ಶೋ ರೂಂ ಬೆಲೆ 3.71 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಈ ಕಾರಿನ ಮೈಲೇಜ್ 21-31 ಕಿ.ಮೀ ಇದೆ ಅನ್ನೋದು ವಿಶೇಷ. ಕೆ-10 ಇಂಜಿನ್ ಫೀಚರ್ಗಳನ್ನು ಇದು ಹೊಂದಿದೆ.
ಹ್ಯುಂಡೈ ಸ್ಯಾಂಟ್ರೊ, ಬೆಲೆ ₹ 4.57 ಲಕ್ಷ (ಎಕ್ಸ್ ಶೋರೂಂ ಬೆಲೆ)
ಹೊಸ ಹ್ಯುಂಡೈ ಸ್ಯಾಂಟ್ರೊ ಕಾರಿನ ಎಕ್ಸ್ ಶೋರೂಂ ಬೆಲೆ 4.57 ಲಕ್ಷ ರೂಪಾಯಿ ಇದೆ. ಈ ಕಾರಿನಲ್ಲಿ ಆಡಿಯೋ-ವೀಡಿಯೋ ಸಿಸ್ಟಮ್ ಕೂಡ ಇದೆ. ಪಾರ್ಕಿಂಗ್ ಕ್ಯಾಮೆರಾ ಡಿಸ್ಪ್ಲೇ ಆಯ್ಕೆ ಕೂಡ ಇದಕ್ಕೆ ಸಿಗಲಿದೆ. ಟಾಟಾ ಟಿಯಾಗೋ, ಮಾರುತಿ ಸುಜಕಿ ವೇಗನ್ ಕಾರುಗಳು ಹ್ಯುಂಡೈ ಸ್ಯಾಂಟ್ರೋ ಫೀಚರ್ಗಳನ್ನೇ ಹೊಂದಿವೆ.
ಇದನ್ನೂ ಓದಿ: Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?