ಅಮಿತ್ ಶಾ ಭಾಷಣ ನೋಡಿ ನಗು ಬಂತು! ಮೋದಿಯ ‘ಆತ್ಮನಿರ್ಭರ’ ನನ್ನ ಯೋಜನೆಯ ಕಾಪಿ -ಹೆಚ್​ ಡಿ ಕುಮಾರಸ್ವಾಮಿ

| Updated By: ಸಾಧು ಶ್ರೀನಾಥ್​

Updated on: Jan 18, 2021 | 5:08 PM

ಮೋದಿಯ ‘ಆತ್ಮನಿರ್ಭರ’ ನನ್ನ ಯೋಜನೆಯ ಕಾಪಿ ನನ್ನ ಯೋಜನೆಯನ್ನ ಕಾಪಿ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ತೆಲಂಗಾಣ ಮಾದರಿ ಅನುಕರಣೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಅಮಿತ್ ಶಾ ಭಾಷಣ ನೋಡಿ ನಗು ಬಂತು! ಮೋದಿಯ ‘ಆತ್ಮನಿರ್ಭರ’ ನನ್ನ ಯೋಜನೆಯ ಕಾಪಿ -ಹೆಚ್​ ಡಿ ಕುಮಾರಸ್ವಾಮಿ
H.D.ಕುಮಾರಸ್ವಾಮಿ (ಎಡ); ನರೇಂದ್ರ ಮೋದಿ (ಬಲ)
Follow us on

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ನೋಡಿದೆ. ಆ ಭಾಷಣವನ್ನು ನೋಡಿದಾಗ ನನಗೆ ನಗು ಬರುತ್ತಿತ್ತು ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

ಕೊಪ್ಪಳದಲ್ಲಿ ಟಾಯ್ ಕ್ಲಸ್ಟರ್ ಯೋಜನೆ ನಾನು ತಂದಿದ್ದು. ಮೋದಿಯ ‘ಆತ್ಮನಿರ್ಭರ’ ನನ್ನ ಯೋಜನೆಯ ಕಾಪಿ. ನನ್ನ ಯೋಜನೆಯನ್ನ ಕಾಪಿ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ತೆಲಂಗಾಣ ಮಾದರಿ ಅನುಕರಣೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

‘ಖಾಸಗಿ ಶಾಲೆ, ಪೋಷಕರ ನಡುವೆ ಜಟಾಪಟಿ ನಡೆದಿದೆ’
ಖಾಸಗಿ ಶಾಲೆ, ಪೋಷಕರ ನಡುವೆ ಜಟಾಪಟಿ ನಡೆದಿದೆ. ಆದರೂ ಇದನ್ನೆಲ್ಲ ನೋಡುತ್ತಾ ಸರ್ಕಾರ ಸುಮ್ಮನಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ H.D.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. LKGಯಿಂದ ಪಿಯುವರೆಗೆ ಉಚಿತ ಶಿಕ್ಷಣ ನೀಡಬೇಕು. ಉಚಿತ ಶಿಕ್ಷಣ ನೀಡಬೇಕೆಂಬ ಬಯಕೆ ನನಗೆ ಇತ್ತು. ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

‘ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷ ಪುನಶ್ಚೇತನಕ್ಕೆ ಸಿದ್ಧತೆ’
ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷ ಪುನಶ್ಚೇತನಕ್ಕೆ ಸಿದ್ಧತೆ ನಡೆಯಲಿದೆ. ಏಳು ವಿಭಾಗಗಳ ವೀಕ್ಷಕರ ಸಮಿತಿ ರಚನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂಡೆಪ್ಪ ಕಾಶಂಪುರ, ಮುಂಬೈ ಕರ್ನಾಟಕ ಭಾಗಕ್ಕೆ ಬಸವರಾಜ ಹೊರಟ್ಟಿ, ಮಧ್ಯ ಕರ್ನಾಟಕ ಭಾಗಕ್ಕೆ ಶಿವಶಂಕರ್‌ಗೆ ಜವಾಬ್ದಾರಿ ವಹಿಸಲಿದ್ದಾರೆ ಎಂದು ಹೇಳಿದರು.

ಪಕ್ಷ ಸಂಘಟನೆಗೆ ಜಿಲ್ಲಾ, ತಾಲೂಕು ಘಟಕಗಳ ರಚನೆಯಾಗಲಿದೆ. JDS ಪಕ್ಷಕ್ಕೆ ಬದ್ಧತೆಯಿಂದ ದುಡಿಯುವವರಿಗೆ ಅವಕಾಶ ಸಿಗುವುದು. JDSನ ಎಲ್ಲ ಸಭೆ, ಸಮಾರಂಭದಲ್ಲಿ ಭಾಗವಹಿಸಬೇಕು. ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶ ವಿಚಾರವಾಗಿ ಕೈ, ಬಿಜೆಪಿ ಬೆಂಬಲಿತರು ಹೆಚ್ಚಾಗಿ ಗೆದ್ದಿದ್ದಾರೆಂದು ಹೇಳ್ತಿದ್ದಾರೆ. ಆದರೆ ವಾಸ್ತವಾಂಶ‌ ಏನೆಂಬುದನ್ನು ನಾನು ಅರಿತಿದ್ದೇನೆ. ಅಮಿತ್ ಶಾ ಡಬಲ್‌ ಇಂಜಿನ್ ತರುತ್ತೇವೆ ಎಂದಿದ್ದಾರೆ. ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ವಿಕಾಸಕ್ಕೆ ಡಬಲ್ ಎಂಜಿನ್ ಸರ್ಕಾರ: ಬೆಳಗಾವಿಯಲ್ಲಿ ಗುಡುಗಿದ ಅಮಿತ್​ ಶಾ