AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2023ಕ್ಕೆ .. JDS ಪಕ್ಷವನ್ನು ಅಧಿಕಾರಕ್ಕೆ ತರದಿದ್ರೆ ನಾನು ಅಧಿಕಾರದಲ್ಲಿರಲ್ಲ -H.D.ರೇವಣ್ಣ

ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ ಎಂದು ಗೊತ್ತಿದೆ. 2023ಕ್ಕೆ JDS​​ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಒಂದು ವೇಳೆ, JDSನ​ ಅಧಿಕಾರಕ್ಕೆ ತರದಿದ್ರೆ ನಾನು ಅಧಿಕಾರದಲ್ಲಿರಲ್ಲ ಎಂದು ನಗರದಲ್ಲಿ ಮಾಜಿ ಸಚಿವ H.D.ರೇವಣ್ಣ ಹೇಳಿದ್ದಾರೆ.

2023ಕ್ಕೆ .. JDS ಪಕ್ಷವನ್ನು ಅಧಿಕಾರಕ್ಕೆ ತರದಿದ್ರೆ ನಾನು ಅಧಿಕಾರದಲ್ಲಿರಲ್ಲ -H.D.ರೇವಣ್ಣ
ಎಚ್ ಡಿ ರೇವಣ್ಣ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jan 02, 2021 | 4:56 PM

ಹಾಸನ: ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ ಎಂದು ಗೊತ್ತಿದೆ. 2023ಕ್ಕೆ JDS​​ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಒಂದು ವೇಳೆ, JDSನ​ ಅಧಿಕಾರಕ್ಕೆ ತರದಿದ್ರೆ ನಾನು ಅಧಿಕಾರದಲ್ಲಿರಲ್ಲ ಎಂದು ನಗರದಲ್ಲಿ ಮಾಜಿ ಸಚಿವ H.D.ರೇವಣ್ಣ ಹೇಳಿದ್ದಾರೆ. H.D.ದೇವೇಗೌಡರ ಸಮ್ಮುಖದಲ್ಲೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸಹ ಹೇಳಿದರು.

ಈ ನಡುವೆ, BJP ಶಾಸಕ ಪ್ರೀತಂ ಗೌಡ ವಿರುದ್ಧ ಕಿಡಿಕಾರಿದ ರೇವಣ್ಣ ಎಲ್ಲೋ ಆಕಸ್ಮಿಕವಾಗಿ ಶಾಸಕ ಆದವನು ಈತ. ನಮ್ಮವರು ಮಾಡಿರೋ ತಪ್ಪಿನಿಂದ ಅವರು ಶಾಸಕರಾಗಿದ್ದಾರೆ. ಈಗ ಜನರೇ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಖಾರವಾಗಿ ಮಾತನಾಡಿದರು.

ಜಿಲ್ಲೆಗೆ ಜಾರಿಯಾದ ಯೋಜನೆಗಳನ್ನು ಪ್ರೀತಂ ಗೌಡ ತಡೆದಿದ್ದಾರೆ ಎಂದು ಮಾಜಿ ಸಚಿವ ಆಕ್ರೋಶ ಹೊರಹಾಕಿದರು. ನಾವು ಮಾಡಿರೋ ಯೋಜನೆಯಲ್ಲಿ ಏನಾದ್ರು ಲೋಪ ಇದ್ದರೆ ಹೇಳಲಿ. ಸಿಎಂ ಜೊತೆಗೆ ಸಭೆ ಕರೆದು ಹೇಳಲಿ. ನನ್ನ ಉದ್ದೇಶ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕು ಎಂಬುವುದು ಅಷ್ಟೇ ಎಂದು ಸಹ ಹೇಳಿದರು.

ದೇವೇಗೌಡರಿಗೆ ರಾಜಕೀಯ ಬದುಕು ಕೊಟ್ಟ ಜನರಿಗೆ ಸೇವೆ ಮಾಡೋದು ನಮ್ಮ ಧರ್ಮ. ತಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕೆಲ‌ ಯೋಜನೆಗಳನ್ನ ರದ್ದುಪಡಿಸಲಾಗಿದೆ ಎಂದು‌ ಕಿಡಿಕಾರಿದ ರೇವಣ್ಣ ಜಿಲ್ಲೆಯಲ್ಲಿ ಶೇಕಡಾ 75 ರಷ್ಟು ಸ್ಥಾನಗಳನ್ನ ನಾವು ಗೆದ್ದಿದ್ದೇವೆ. ಆದರೆ, ನನ್ನ ಕ್ಷೇತ್ರದಲ್ಲಿ ಶೆಕಡಾ 90 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ರೇವಣ್ಣ ಹೇಳಿದರು.

BJP ಸರ್ಕಾರ ವಿತರಿಸುವ ಕೊರೊನಾ ಲಸಿಕೆಯನ್ನು ನಾನಂತೂ ಪಡೆಯುವುದಿಲ್ಲ: ಅಖಿಲೇಶ್ ಯಾದವ್

Published On - 4:45 pm, Sat, 2 January 21