ಸೇನಾ ಅಧಿಕಾರಿಗಳ ಹೆಸರು ಹೇಳಿ OLX‌ನಲ್ಲಿ ವಂಚನೆ ಮಾಡುತ್ತಿದ್ದ ಖದೀಮರು ಅರೆಸ್ಟ್

ಬೆಂಗಳೂರು: ಸೇನಾ ಅಧಿಕಾರಿಗಳ ಹೆಸರಿನಲ್ಲಿ ವಂಚಿಸ್ತಿದ್ದ ಆರೋಪಿಗಳನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಉಮರ್ ಖಾನ್, ಸೈದ್, ವಜೀಬ್, ಸಹಿಲ್‌ ಬಂಧಿಸಿತ ಆರೋಪಿಗಳು. ಬಂಧಿತ ಖದೀಮರು OLX‌ನಲ್ಲಿ ಕಡಿಮೆ ಬೆಲೆಗೆ ವಾಹನಗಳ ಫೋಟೋ ಹಾಕುತ್ತಿದ್ದರು. ಅದನ್ನು ನೋಡಿ ವಾಹನ ಖರೀದಿಗೆ ಕರೆ ಮಾಡುತ್ತಿದ್ದ ಜನರಿಗೆ ತಾವು ಸೇನೆಯಲ್ಲಿದ್ದೇವೆ ಎಂದು ಸುಳ್ಳು ಹೇಳಿ ನಂಬಿಸಿ ಮೋಸ ಮಾಡುತ್ತಿದ್ದರು. ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ತಮ್ಮ ಖಾತೆಗೆ ಹಣ ಹಾಕಿಸಿಕೊಂಡು ಫೋನ್ […]

ಸೇನಾ ಅಧಿಕಾರಿಗಳ ಹೆಸರು ಹೇಳಿ OLX‌ನಲ್ಲಿ ವಂಚನೆ ಮಾಡುತ್ತಿದ್ದ ಖದೀಮರು ಅರೆಸ್ಟ್
Updated By: ಸಾಧು ಶ್ರೀನಾಥ್​

Updated on: Nov 04, 2020 | 11:36 AM

ಬೆಂಗಳೂರು: ಸೇನಾ ಅಧಿಕಾರಿಗಳ ಹೆಸರಿನಲ್ಲಿ ವಂಚಿಸ್ತಿದ್ದ ಆರೋಪಿಗಳನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಉಮರ್ ಖಾನ್, ಸೈದ್, ವಜೀಬ್, ಸಹಿಲ್‌ ಬಂಧಿಸಿತ ಆರೋಪಿಗಳು.

ಬಂಧಿತ ಖದೀಮರು OLX‌ನಲ್ಲಿ ಕಡಿಮೆ ಬೆಲೆಗೆ ವಾಹನಗಳ ಫೋಟೋ ಹಾಕುತ್ತಿದ್ದರು. ಅದನ್ನು ನೋಡಿ ವಾಹನ ಖರೀದಿಗೆ ಕರೆ ಮಾಡುತ್ತಿದ್ದ ಜನರಿಗೆ ತಾವು ಸೇನೆಯಲ್ಲಿದ್ದೇವೆ ಎಂದು ಸುಳ್ಳು ಹೇಳಿ ನಂಬಿಸಿ ಮೋಸ ಮಾಡುತ್ತಿದ್ದರು.

ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ತಮ್ಮ ಖಾತೆಗೆ ಹಣ ಹಾಕಿಸಿಕೊಂಡು ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ದಕ್ಷಿಣ ಭಾರತದ ಹಲವು ರಾಜ್ಯದಲ್ಲಿ ಇದೇ ರೀತಿ ವಂಚನೆ ಮಾಡಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.