AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ವೇಳೆ ಎಣ್ಣೆ ಮಹಾತ್ಮೆ ಭಾರತದಲ್ಲಷ್ಟೇ ಅಲ್ಲ.. US ಚುನಾವಣೆ ವೇಳೆ ಏನಾಗಿದೆ ನೋಡಿ!!!

ಈ ವರ್ಷ ಯುಎಸ್ ಚುನಾವಣೆ ಎಲ್ಲ ಪಕ್ಷದವರಿಗೂ ಕಠಿಣವಾಗಿದೆ. ಅಲ್ಲದೆ 2020 ವರ್ಷವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಪ್ರಾರಂಭವಾಗುವುದರ ಜೊತೆಗೆ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಪೊಲೀಸ್ ದೌರ್ಜನ್ಯ, ನಾಗರಿಕ ಅಶಾಂತಿ ಹೀಗೆ ಹಲವಾರು ನ್ಯೂನತೆಗಳೊಂದಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಜನರು ಚುನಾವಣೆ ಎದುರಿಸಿದ್ದಾರೆ. ಆದರೂ ಜನಾನೂ ಅಂದ್ರೆ ಯು.ಎಸ್. ಮತದಾರ ಪ್ರಭುಗಳು ಶತಮಾನದಲ್ಲೆ ಅತ್ಯಧಿಕ ಗರಿಷ್ಠ ಸಂಖ್ಯೆಯಲ್ಲಿ​ ಮತದಾನ ಮಾಡಿದ್ದಾರೆ. ಈ ವಿಷಯದಲ್ಲಂತೂ ಯು.ಎಸ್. ಮತದಾರ ಪ್ರಭುಗಳು ಭಾರತದ ಮತದಾರರಿಗೆ ಮಾದರಿಯಾಗಿದ್ದಾರೆ. ಬರೋಬ್ಬರಿ 10 ಕೋಟಿ […]

ಚುನಾವಣೆ ವೇಳೆ ಎಣ್ಣೆ ಮಹಾತ್ಮೆ ಭಾರತದಲ್ಲಷ್ಟೇ ಅಲ್ಲ.. US ಚುನಾವಣೆ ವೇಳೆ ಏನಾಗಿದೆ ನೋಡಿ!!!
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on:Nov 04, 2020 | 12:28 PM

Share

ಈ ವರ್ಷ ಯುಎಸ್ ಚುನಾವಣೆ ಎಲ್ಲ ಪಕ್ಷದವರಿಗೂ ಕಠಿಣವಾಗಿದೆ. ಅಲ್ಲದೆ 2020 ವರ್ಷವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಪ್ರಾರಂಭವಾಗುವುದರ ಜೊತೆಗೆ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಪೊಲೀಸ್ ದೌರ್ಜನ್ಯ, ನಾಗರಿಕ ಅಶಾಂತಿ ಹೀಗೆ ಹಲವಾರು ನ್ಯೂನತೆಗಳೊಂದಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಜನರು ಚುನಾವಣೆ ಎದುರಿಸಿದ್ದಾರೆ.

ಆದರೂ ಜನಾನೂ ಅಂದ್ರೆ ಯು.ಎಸ್. ಮತದಾರ ಪ್ರಭುಗಳು ಶತಮಾನದಲ್ಲೆ ಅತ್ಯಧಿಕ ಗರಿಷ್ಠ ಸಂಖ್ಯೆಯಲ್ಲಿ​ ಮತದಾನ ಮಾಡಿದ್ದಾರೆ. ಈ ವಿಷಯದಲ್ಲಂತೂ ಯು.ಎಸ್. ಮತದಾರ ಪ್ರಭುಗಳು ಭಾರತದ ಮತದಾರರಿಗೆ ಮಾದರಿಯಾಗಿದ್ದಾರೆ. ಬರೋಬ್ಬರಿ 10 ಕೋಟಿ 20 ಲಕ್ಷ ಮಂದಿ ವೋಟ್ ಮಾಡಿದ್ದಾರೆ! ಈ ಪ್ರಮಾಣದಲ್ಲಿ ಜನ ವೋಟ್​ ಮಾಡಕ್ಕೆ ಮುಂದೆ ಬಂದಿದ್ದಾರೆ ಅಂದ ಮೇಲೆ ಅವರು ದಣಿವಾರಿಸಿಕೊಳ್ಳುವುದೂ ಅನಿವಾರ್ಯವಲ್ಲವೇ? ಅದಕ್ಕಾಗಿ ಎಲ್ಲಾ ಎಣ್ಣೆಗೆ ಜೋತುಬಿದ್ದಿದ್ದಾರೆ. ಕೋಟ್ಯಂತರ ಮಂದಿ ಮದ್ಯದಂಗಡಿ ಬಾಗಿಲು ಬಡಿಯುತ್ತಿದ್ದಾರೆ!

USA ಮುಂದಿನ ಅಧ್ಯಕ್ಷರು ಯಾರು ಎಂಬುದನ್ನು ಘೋಷಿಸಲು ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಅಮೆರಿಕನ್ನರು ತಮ್ಮ ನೆಚ್ಚಿನ ಅಭ್ಯರ್ಥಿಯ ವಿಜಯವನ್ನು ಭಾರಿ ಸಡಗರದಿಂದ ಸಂಭ್ರಮಿಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಸದ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಲಾಗಿದೆ..

2020 US election results: ರೋಚಕ ಘಟ್ಟದಲ್ಲಿ ಫಲಿತಾಂಶ; ಟ್ರಂಪ್-ಬಿಡೆನ್ Neck and Neck

ಹೀಗಾಗಿ ಅಮೇರಿಕನ್ನರು ಚುನಾವಣೆಯ ದಿನದಂದು, ಗೂಗಲ್ ಸಾಮಾಜಿಕ ತಾಣದಲ್ಲಿ “ನನ್ನ ಹತ್ತಿರವಿರುವ ಮದ್ಯದಂಗಡಿ” ಮತ್ತು “ಇದೀಗ ನನ್ನ ಹತ್ತಿರ ತೆರೆದಿರುವ ಮದ್ಯದಂಗಡಿ” ಗಾಗಿ ಕಳೆದ 24 ಗಂಟೆಗಳಲ್ಲಿ liquor store near me ಅಂತಾ ಸಿಕ್ಕಾಪಟ್ಟೆ ಸರ್ಚ್​ ಮಾಡಿದ್ದಾರೆ (About 21,20,00,000 results 0.76 seconds). ಪ್ರತಿ ವರ್ಷಕ್ಕಿಂತ ಈ ವರ್ಷ ಗೂಗಲ್​ನಲ್ಲಿ ಈ ರೀತಿಯ ಹುಡುಕಾಟ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯಾಗಿದೆ.

Published On - 12:00 pm, Wed, 4 November 20