ಅತಿ ವೇಗ ತಂದ ಆಪತ್ತು: ಕೆರೆಗೆ ಕಾರು ಬಿದ್ದು ಬೆಂಗಳೂರು ಮೂಲದ ನಾಲ್ವರ ದುರ್ಮರಣ

ಬೆಂಗಳೂರು ಗ್ರಾಮಾಂತರ: ಅತಿ ವೇಗವಾಗಿ ತೆರಳುತ್ತಿದ್ದ ಕಾರು ಕೆರೆಗೆ ಉರುಳಿ ಬಿದ್ದು ಬೆಂಗಳೂರು ಮೂಲದ ನಾಲ್ವರು ಮೃತಪಟ್ಟಿರುವ ಘಟನೆ ದೇವಮಾಚೋಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಸುನಿಲ್, ಸಂತೋಷ್, ಮಂಜು, ರಘು ಮೃತ ದುರ್ದೈವಿಗಳು. ಚಾಲಕನ ಅತಿ ವೇಗದಿಂದಲೇ ಕಾರು ಕೆರೆಗೆ ಬಿದ್ದು ಅವಘಡ ಜರುಗಿದೆ ಎನ್ನಲಾಗಿದೆ. ಬೆಂಗಳೂರಿನಿಂದ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತಿ ವೇಗ ತಂದ ಆಪತ್ತು: ಕೆರೆಗೆ ಕಾರು ಬಿದ್ದು ಬೆಂಗಳೂರು ಮೂಲದ ನಾಲ್ವರ ದುರ್ಮರಣ

Updated on: Jan 12, 2020 | 7:57 PM

ಬೆಂಗಳೂರು ಗ್ರಾಮಾಂತರ: ಅತಿ ವೇಗವಾಗಿ ತೆರಳುತ್ತಿದ್ದ ಕಾರು ಕೆರೆಗೆ ಉರುಳಿ ಬಿದ್ದು ಬೆಂಗಳೂರು ಮೂಲದ ನಾಲ್ವರು ಮೃತಪಟ್ಟಿರುವ ಘಟನೆ ದೇವಮಾಚೋಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಸುನಿಲ್, ಸಂತೋಷ್, ಮಂಜು, ರಘು ಮೃತ ದುರ್ದೈವಿಗಳು.

ಚಾಲಕನ ಅತಿ ವೇಗದಿಂದಲೇ ಕಾರು ಕೆರೆಗೆ ಬಿದ್ದು ಅವಘಡ ಜರುಗಿದೆ ಎನ್ನಲಾಗಿದೆ. ಬೆಂಗಳೂರಿನಿಂದ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.