AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಕಪುರ ಚಲೋ: ಯೇಸು ಪ್ರತಿಮೆ ನಿರ್ಮಾಣದ ವಿರುದ್ಧ ಸಿಡಿದೇಳಲು ಕೇಸರಿ ಸೈನ್ಯ ಸಜ್ಜು

ರಾಮನಗರ: ಕಪಾಲ ಬೆಟ್ಟದಲ್ಲಿ ತಲೆ ಎತ್ತೋಕೆ ಹೊರಟಿರೋ ಯೇಸು ಪ್ರತಿಮೆಗಾಗಿ ಕನಕಪುರದ ಬಂಡೆ ಡಿಕೆಶಿ ಹಾಗೂ ಬಿಜೆಪಿ ಸರ್ಕಾರ ನಡುವೆ ಸಮರವೇ ನಡೀತಿದೆ. ಇಷ್ಟುದಿನ ಮಾತಿನ ಮೂಲಕ ನಡೀತಿದ್ದ ಯುದ್ಧ ಇಂದು ಮತ್ತೊಂದು ರೂಪ ಪಡೆಯುತ್ತಿದೆ. ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ಕನಕಪುರ ಚಲೋ ಯೆಸ್, ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆಗೆ ಅವಕಾಶ ಇಲ್ಲ ಅಂತ ಕೇಸರಿ ನಾಯಕರು ಗುಡುಗ್ತಿದ್ದರೆ.. ಇತ್ತ ಬೆಟ್ಟದಲ್ಲಿ ಪುತ್ಥಳಿ ನಿರ್ಮಿಸಿಯೇ ಸಿದ್ಧ ಅಂತ ಕನಕಪುರದ ಬಂಡೆ ಶಪಥ ಮಾಡಿದ್ದಾರೆ. ಇದೇ ವಿಚಾರ ಇಟ್ಕೊಂಡು […]

ಕನಕಪುರ ಚಲೋ: ಯೇಸು ಪ್ರತಿಮೆ ನಿರ್ಮಾಣದ ವಿರುದ್ಧ ಸಿಡಿದೇಳಲು ಕೇಸರಿ ಸೈನ್ಯ ಸಜ್ಜು
ಸಾಧು ಶ್ರೀನಾಥ್​
|

Updated on:Jan 13, 2020 | 2:35 PM

Share

ರಾಮನಗರ: ಕಪಾಲ ಬೆಟ್ಟದಲ್ಲಿ ತಲೆ ಎತ್ತೋಕೆ ಹೊರಟಿರೋ ಯೇಸು ಪ್ರತಿಮೆಗಾಗಿ ಕನಕಪುರದ ಬಂಡೆ ಡಿಕೆಶಿ ಹಾಗೂ ಬಿಜೆಪಿ ಸರ್ಕಾರ ನಡುವೆ ಸಮರವೇ ನಡೀತಿದೆ. ಇಷ್ಟುದಿನ ಮಾತಿನ ಮೂಲಕ ನಡೀತಿದ್ದ ಯುದ್ಧ ಇಂದು ಮತ್ತೊಂದು ರೂಪ ಪಡೆಯುತ್ತಿದೆ.

ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ಕನಕಪುರ ಚಲೋ ಯೆಸ್, ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆಗೆ ಅವಕಾಶ ಇಲ್ಲ ಅಂತ ಕೇಸರಿ ನಾಯಕರು ಗುಡುಗ್ತಿದ್ದರೆ.. ಇತ್ತ ಬೆಟ್ಟದಲ್ಲಿ ಪುತ್ಥಳಿ ನಿರ್ಮಿಸಿಯೇ ಸಿದ್ಧ ಅಂತ ಕನಕಪುರದ ಬಂಡೆ ಶಪಥ ಮಾಡಿದ್ದಾರೆ. ಇದೇ ವಿಚಾರ ಇಟ್ಕೊಂಡು ಇಂದು ಕನಕಪುರ ಕೋಟೆಗೆ ಬಿಜೆಪಿ, ಆರ್​ಎಸ್​​ಎಸ್, ಹಿಂದೂ ಜಾಗರಣ ವೇದಿಕೆ ಹಾಗೂ ಸ್ವಾಮೀಜಿಗಳ ನಿಯೋಗ ಲಗ್ಗೆ ಇಡಲಿದೆ. ಯೇಸು ಪ್ರತಿಮೆ ವಿರುದ್ಧ ಕನಕಪುರ ಚಲೋ ಕರೆ ನೀಡಿರೋ ಕಮಲ ಪಡೆ, ಬಂಡೆ ವಿರುದ್ಧ ಬಂಡೇಳೋಕೆ ರಣತಂತ್ರ ರೂಪಿಸಿದೆ.

‘ಕೇಸರಿ’ ಕಲಿಗಳ ವಿರುದ್ಧ ರಣಬೇಟೆಗಾರ ಕೆಂಡಾಮಂಡಲ ತನ್ನ ಕೋಟೆಯಲ್ಲಿ ಇಂದು ಬಿಜೆಪಿ ನಿಯೋಗ ಘೀಳಿಡೋಕೆ ಸಜ್ಜಾಗ್ತಿದ್ದಂತೇ, ಟ್ರಬಲ್ ಶೂಟರ್ ಕೆರಳಿ ಕೆಂಡವಾಗಿದ್ದಾರೆ. ಕನಕಪುರದಲ್ಲಿ ಅಶಾಂತಿ ಸೃಷ್ಟಿಸೋಕೆ ಬಿಜೆಪಿ ಯತ್ನಿಸ್ತಿದೆ ಅಂತ ವಿಡಿಯೋ ಮೂಲಕ ಬೆಂಕಿಯುಂಡೆಗಳನ್ನೇ ಉಗುಳಿದ್ದಾರೆ. ಇಷ್ಟೇ ಅಲ್ಲ, ಬಿಜೆಪಿ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಿರೋ ರಣಬೇಟೆಗಾರ ಡಿಕೆಶಿ, ವಿವಾದ ಮಾಡೋ ಉದ್ದೇಶಕ್ಕೆ ಕನಕಪುರಕ್ಕೆ ಬರ್ತಿದ್ದಾರೆ. ಯಾರೂ ಪ್ರಚೋದನೆಗೆ ಒಳಗಾಗ್ಬೇಡಿ ಅಂತ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಕನಕಪುರ ಚಲೋಗೆ ಕರೆ ನೀಡಿರೋದು ಪೋಲಿಸರ ನಿದ್ದೆಗೆಸಿದೆ. ಹೆಜ್ಜೆ ಹೆಜ್ಜೆಗೂ ಹದ್ದಿನ ಕಣ್ಣಿಡೋಕೆ ರೆಡಿಯಾಗಿರೋ ಖಾಕಿ ಪಡೆ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಶಾಂತಿಯುತ ಧರಣಿಗೆ ಅವಕಾಶ ನೀಡಿದೆ. 1000ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಿದ್ದು, ಪ್ರತಿಭಟನೆ ವೇಳೆ ಯಾವುದೇ ಗಲಾಟೆ, ಗಲಭೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

Published On - 9:45 am, Mon, 13 January 20

Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್