ಯೇಸು ಪ್ರತಿಮೆ ಬೇಡ, ಕೊನೆವರೆಗೂ ಹೋರಾಟ ಮಾಡುತ್ತೇವೆ -ಕಲ್ಲಡ್ಕ ಪ್ರಭಾಕರ್
ರಾಮನಗರ: ಕನಕಪುರದ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಯೇಸು ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇಂದು ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿ, ಆರ್ಎಸ್ಎಸ್ನವರು ಕನಕಪುರ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಡಿಕೆ ಸಹೋದರರ ವಿರುದ್ಧ ಕಿಡಿಕಾರಿದರು. ಈಗ ನೀವು ಮಂತ್ರಿಯಾಗಿಲ್ಲ: ಈಗ ನಿಮ್ಮ ಸರ್ಕಾರ ಇಲ್ಲ, ನೀವು ಮಂತ್ರಿಯಾಗಿಲ್ಲ. ಈಗ ನೀವು ಕೇವಲ ಕಂತ್ರಿಯಾಗಿ ಉಳಿದಿದ್ದೀರಿ. ನೀವು ಈಗ ಹೆಲಿಕಾಪ್ಟರ್‌ಗಳಲ್ಲಿ ಹಾರಾಡಬಹುದು. ಕೊನೆಗೆ ನೆಲವೇ ಉಳಿಯುವುದಿಲ್ಲ. ಕೆಟ್ಟ ರಾಜಕಾರಣದ […]
ರಾಮನಗರ: ಕನಕಪುರದ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಯೇಸು ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇಂದು ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿ, ಆರ್ಎಸ್ಎಸ್ನವರು ಕನಕಪುರ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಡಿಕೆ ಸಹೋದರರ ವಿರುದ್ಧ ಕಿಡಿಕಾರಿದರು.
ಈಗ ನೀವು ಮಂತ್ರಿಯಾಗಿಲ್ಲ: ಈಗ ನಿಮ್ಮ ಸರ್ಕಾರ ಇಲ್ಲ, ನೀವು ಮಂತ್ರಿಯಾಗಿಲ್ಲ. ಈಗ ನೀವು ಕೇವಲ ಕಂತ್ರಿಯಾಗಿ ಉಳಿದಿದ್ದೀರಿ. ನೀವು ಈಗ ಹೆಲಿಕಾಪ್ಟರ್‌ಗಳಲ್ಲಿ ಹಾರಾಡಬಹುದು. ಕೊನೆಗೆ ನೆಲವೇ ಉಳಿಯುವುದಿಲ್ಲ. ಕೆಟ್ಟ ರಾಜಕಾರಣದ ವಿರುದ್ಧ ನಮ್ಮ ಹೋರಾಟ. ಪಕ್ಕದಲ್ಲಿ ಕೆರೆ ಇದೆ, ಪಾದ್ರಿ ಕೆರೆ ಎಂದು ಹೆಸರಿಡಿ, ಮದರ್ ತೆರೇಸಾ ಏನು ಎಂದು ನಿಮಗೆ ಗೊತ್ತಾ? ಮದರ್ ತೆರೇಸಾರನ್ನ ದೇವರು ಮಾಡಲು ಹೊರಟಿದ್ದಾರೆ. ಅಲ್ಪಸಂಖ್ಯಾತರ ಹೆಸರಲ್ಲಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ.
ಭೂಮಿ ಆಸೆ ತೋರಿಸಿ ಮತಾಂತರ ನಡೆದಿದೆ: ದೇಶದಲ್ಲಿರೋ ಚರ್ಚ್, ಮಸೀದಿಗಳ ಜಾಗ ಹಿಂದೂಗಳದ್ದು. ನಮ್ಮ ಉದಾರತೆ ನಮ್ಮ ದೌರ್ಬಲ್ಯ ಅಂದುಕೊಂಡಿದ್ದೀರಾ? ಈಗ ಯೇಸು ಕ್ರಿಸ್ತನ ಹೆಸರಿನಲ್ಲಿ ಮೋಸ ಮಾಡುತ್ತಿದ್ದೀರಾ? ಭೂಮಿಯ ಆಸೆ ತೋರಿಸಿ ಮತಾಂತರ ನಡೆದಿದೆ. ಮುಸ್ಲಿಂ, ಕ್ರೈಸ್ತರು, ಎಡಪಕ್ಷದವರು ಸ್ನೇಹಿತರಾಗಿದ್ದಾರೆ. ಮತಾಂತರ ನಮ್ಮೊಳಗೆ ಆದರೆ ಏನೂ ತೊಂದರೆ ಇಲ್ಲ. ಈ ದೇಶ ಕ್ರಿಸ್ತನ ನಾಡಲ್ಲ, ಇದು ಕೃಷ್ಣನ ನಾಡಾಗಿದೆ. ಮತಾಂತರಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತೆ. ಮುನೇಶ್ವರ ಬೆಟ್ಟದಲ್ಲಿ ದೇಗುಲ ಕಟ್ಟುತ್ತೇವೆ. ಅಲ್ಲಿ ನಿಮ್ಮ ತಲೆಯನ್ನು ಇಡುವ ಕೆಲಸವನ್ನ ಮಾಡ್ತೇವೆ. ನೀವು ಮುಂದೆ ಶಾಸಕರು, ಸಂಸದರು ಆಗುವುದಿಲ್ಲ. ಡಿಕೆಶಿ ಸೋದರರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಯವರೆಗೂ ಹೋರಾಟ ಮಾಡ್ತೇವೆ: ಯೇಸುವನ್ನು ಪೂಜೆ ಮಾಡುವವರು ಕೋಮುವಾದಿಗಳು, ಆದರೆ ನಾವು ಕೋಮುವಾದಿಗಳಲ್ಲ. ಎಲ್ಲರನ್ನು ಅಪ್ಪಿಕೊಳ್ಳುವವರು ಒಪ್ಪಿಕೊಳ್ಳುವವರು ಹಿಂದೂಗಳು. ಹಿಂದೂ ಸಮಾಜಕ್ಕೆ ಇರುವ ಒಂದೇ ಒಂದು ದೇಶ ಭಾರತ. ಕನಕಪುರದಲ್ಲಿನ ಮುನೇಶ್ವರ ಬೆಟ್ಟಕ್ಕಾಗಿ ಕೊನೆಯವರೆಗೂ ಹೋರಾಟ ಮಾಡುತ್ತೇವೆಂದು ಕಲ್ಲಡ್ಕ ಪ್ರಭಾಕರ್ ಬಟ್ ಹೇಳಿದರು.
ಬುದ್ಧ, ಪೇಜಾವರ ಶ್ರೀಗಳ ಪ್ರತಿಮೆ ಮಾಡಬಹುದಿತ್ತು: ನಾವು ಶಾಂತಿ ಕದಡಲು ಇಲ್ಲಿಗೆ ಬಂದಿಲ್ಲ. ಸೋನಿಯಾ ಗಾಂಧಿ ಪ್ರತಿಮೆ ಮಾಡಲು ನಮ್ಮ ಅಡ್ಡಿ ಇದೆ. ಆದ್ರೆ, ಮಹಾತ್ಮ ಗಾಂಧಿ ಪ್ರತಿಮೆಗೆ ನಮ್ಮ ಅಡ್ಡಿಯಿಲ್ಲ. ನೀವು ಬುದ್ಧ, ಪೇಜಾವರ ಶ್ರೀಗಳ ಪ್ರತಿಮೆ ಮಾಡಬಹುದಿತ್ತು. ಆದ್ರೆ ನೀವು ಹಿಂದೂ ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದೀರ. ಕಪಾಲ ಬೆಟ್ಟದಲ್ಲಿ ಪವಾಡ ನಡೆದಿದೆ. ಹಿಂದೂ ಸಮಾಜವನ್ನ ಒಡೆಯುವ ಕೆಲಸ ನಡೆಯುತ್ತಿದೆ ಎಂದು ಹರಿಹಾಯ್ದರು.
ಬೆಳಗ್ಗೆಯಷ್ಟೇ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ತಿಳಿದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಕಲ್ಲಡ್ಕ ಪ್ರಭಾಕರ್ ಭಟ್, ಡಿ.ಕೆ.ಶಿವಕುಮಾರ್ಗೆ ನನ್ನ ಪರಿಚಯ ಇಲ್ಲ, ಪರವಾಗಿಲ್ಲ ಎಂದರು.
Published On - 2:32 pm, Mon, 13 January 20