ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ದೇಶದಾದ್ಯಂತ ಹೊಸ ವರ್ಷಾಚರಣೆ ಭರ್ಜರಿಯಾಗಿಯೇ ನಡೆದಿದೆ. ಕರ್ನಾಟಕದಲ್ಲಿಯೂ ಸಂಭ್ರಮ ಮುಗಿಲುಮುಟ್ಟಿತ್ತು. ಹೊಸ ವರ್ಷ 2026ರ ಸಂಭ್ರಮದಲ್ಲಿ ಮಂತ್ರಾಲಯದ ರಾಯರ ಸನ್ನಿಧಿಗೆ ಭಕ್ತರ ದಂಡೇ ಹರಿದುಬಂದಿದೆ. ಇದರೊಂದಿಗೆ, ಭಾಷಾ ವಿವಾದ ಕೂಡ ಮತ್ತೆ ಮುನ್ನೆಲೆಗೆ ಬಂದಿದೆ. ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ.
ರಾಯಚೂರು, ಜನವರಿ 1: ಹೊಸ ವರ್ಷ 2026ಕ್ಕೆ ಜಗತ್ತು ಕಾಲಿಟ್ಟಾಗಿದೆ. ‘ರಾಯರೇ, ಎಲ್ಲಾ ಒಳಿತು ಮಾಡಪ್ಪ’ ಎಂದು ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದು ಬಂದಿದೆ. 2025ರ ವರ್ಷಾಂತ್ಯ, 2026 ರ ಆರಂಭದ ಹಿನ್ನೆಲೆ ರಾಯಚೂರಿನ ಮಂತ್ರಾಲಯದ ರಾಯರ ಮಠಕ್ಕೆ ಸಾಗರೋಪಾದಿಯಲ್ಲಿ ಬಂದ ಜನರು ತುಂಗಾಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು. ಕ್ರಿಸ್ಮಸ್, ಈಯರ್ ಎಂಡ್, ನ್ಯೂ ಇಯರ್ ಅಂತ ವೆಕೇಷನ್ ಮೂಡ್ನಲ್ಲಿರುವ ಜನರು ಮಂತ್ರಾಲಯದತ್ತ ಮುಖ ಮಾಡಿದ್ದಾರೆ.
