AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs GT: 6,6,6,6,6,6.. 20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್

RCB vs GT: 6,6,6,6,6,6.. 20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್

ಪೃಥ್ವಿಶಂಕರ
|

Updated on: Apr 24, 2026 | 10:30 PM

Share

Devdutt Padikkal's Explosive Fifty: ಐಪಿಎಲ್ 2026 ರ RCB Vs GT ಪಂದ್ಯದಲ್ಲಿ ಗುಜರಾತ್ ನೀಡಿದ 206 ರನ್‌ಗಳ ಭಾರಿ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ ಅಬ್ಬರದ ಅರ್ಧಶತಕ ಗಳಿಸಿ ತಂಡಕ್ಕೆ ಆಧಾರವಾದರು. ವಿರಾಟ್ ಕೊಹ್ಲಿ ಜೊತೆ ಶತಕದ ಜೊತೆಯಾಟ ನಿರ್ಮಿಸಿದ ಪಡಿಕ್ಕಲ್, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು.

ಐಪಿಎಲ್ 2026 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿರುವ 207 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಅಬ್ಬರದ ಅರ್ಧಶತಕ ಬಾರಿಸಿದರು. ಎಂದಿನಂತೆ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪಡಿಕ್ಕಲ್ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್​ಗಟ್ಟಿದರು. ಆ ನಂತರವೂ ಒಂದೇ ಗೇರ್​ನಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡಿರಲಿಲ್ಲ. ಹೀಗಾಗಿ ಅವರ ಬದಲಿಗೆ ಜೆಕೋಬ್ ಬೆಥೆಲ್​ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ ಬೆಥೆಲ್ 14 ರನ್ ಬಾರಿಸಿ ಔಟಾದರು. ಆ ನಂತರ ಬಂದ ಪಡಿಕ್ಕಲ್ ಕೊಹ್ಲಿ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು. ಮಾತ್ರವಲ್ಲದೆ 20 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದರು. ಅಂದರೆ ಪಡಿಕ್ಕಲ್ ಕೇವಲ ಬೌಂಡರಿ ಸಿಕ್ಸರ್​ಗಳಿಂದಲೇ 44 ರನ್ ಕಲೆಹಾಕಿದರು. ಈ ಅರ್ಧಶತಕದೊಂದಿಗೆ ಪಡಿಕ್ಕಲ್ ಐಪಿಎಲ್‌ನಲ್ಲಿ 2000 ರನ್​ಗಳನ್ನು ಸಹ ಪೂರೈಸಿದರು.

Follow Us