ಬೆಂಗಳೂರು: ಕಳೆದ ಏಳು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಾಣುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ಇಂಧನ ದರ ನೂರರ ಗಡಿ ದಾಟಿದರೂ ಸಂಶಯವಿಲ್ಲ. ಈಗ ಇದೇ ಬೆನ್ನಲ್ಲೆ ಜೀವನಾವಶ್ಯಕ ವಸ್ತುಗಳ ಬೆಲೆಯ ದರವೂ ದಿಢೀರ್ ಏರಿಕೆಯಾಗುತ್ತಿದೆ. ಆಹಾರ ಧಾನ್ಯ, ಬೇಳೆಕಾಳು, ಹಣ್ಣು, ತರಕಾರಿಗಳ ಬೆಲೆ ಗಗನಮುಖಿಯಾಗಿದೆ. ಬೆಂಗಳೂರಿನ ಬಿಗ್ ಮಾರುಕಟ್ಟೆಯ ದರ ಮಾಹಿತಿ ಇಲ್ಲಿದೆ.
ಕೆ.ಆರ್ ಮಾರುಕಟ್ಟೆಯ ಮಾಹಿತಿ
ಕಳೆದ ವಾರ 35 ರೂ ಇದ್ದ 1 ಕೆಜಿ ಈರುಳ್ಳಿ ಬೆಲೆ ಈ ವಾರ 40 ರಿಂದ 50 ಗೆ ಏರಿಕೆಯಾಗಿದೆ. ಹಾಗೂ ನಾಳೆ 60 ರೂ ಹೆಚ್ಚಳವಾಗುವ ಸಾಧ್ಯತೆ ಇದೆ. 16 ರಿಂದ 20 ರೂ ಇದ್ದ ಆಲೂಗಡ್ಡೆ ಬೆಲೆ ಈ ವಾರ 20 ರಿಂದ 25 ರೂಗೆ ಏರಿಕೆಯಾಗಿದೆ. 15 ರೂ ಇದ್ದ ಕ್ಯಾರೆಟ್ ಬೆಲೆ. ಈಗ 20 ರೂ ಆಗಿದೆ. 15 ರೂ ಇದ್ದ ಟೊಮ್ಯಾಟೋ 30 ರೂ ಆಗಿದೆ. ಇದೇ ರೀತಿ ತರಕಾರಿ, ಹಣ್ಣು ಎಲ್ಲದರ ಬೆಲೆಯೂ ಏರಿಕೆ ಕಂಡಿದೆ.
20 ರಿಂದ 30 ಇದ್ದ ಹೂ ಕೋಸ್ ಈವಾರ 50 ರಿಂದ 60ರೂ ಆಗಿದೆ. ಬೆಂಡೆಕಾಯಿ 40 ರೂ ಯಿಂದ 50 ರಿಂದ 60 ರೂಗೆ ಜಿಗಿದಿದೆ. 40 ರೂ ಇದ್ದ ಹೀರೇಕಾಯಿ 60 ರೂ ಆಗಿದೆ. ದೊಣ್ಣೆ ಮೆಣಸಿನಕಾಯಿ 40 ರೂ ಯಿಂದ 60 ರೂಗೆ ಏರಿದೆ. ಬೀಟ್ರೂಟ್ ಕಳೆದ ವಾರ 20 ರೂ ಇತ್ತು. ಈಗ 30 ರೂ ಆಗಿದೆ. 100 ರೂ ಇದ್ದ ಸೇಬು ಈ ವಾರ 120 ಕ್ಕೆ ಏರಿಕೆಯಾಗಿದೆ. ದಾಳಿಂಬೆ 150ರಿಂದ180ರೂಗೆ ಏರಿಕೆಯಾಗಿದೆ. ಕಳೆದ ವಾರ 30 ರೂ ಇದ್ದ ಬಾಳೆಹಣ್ಣಿನ ಬೆಲೆ ಈವಾರ 40 ರೂ ಆಗಿದೆ. ಸಪೋಟ 70 ರೂ ಯಿಂದ 80 ರೂ ಆಗಿದೆ.
ಕಾಳುಬೇಳೆಗಳ ಬದಲಾದ ದರದ ಮಾಹಿತಿ
ಕಳೆದ ವಾರ 30 ರೂ ಇದ್ದ ಗೋಧಿ ಬೆಲೆ ಈಗ 35ರೂಗೆ ಏರಿಕೆ
ಕಳೆದ ವಾರ 30ರೂ ಇದ್ದ ಜೋಳ ಈವಾರ 35ರೂ
ಕಳೆದ ವಾರ 80 ರೂ ಇದ್ದ ತೋಗರಿ ಬೇಳೆ ಬೆಲೆ ಈವಾರ 110ಕ್ಕೆ ಏರಿಕೆ
ಕಳೆದವಾರ 100 ರೂ ಇದದ್ದ ಉದ್ದಿನ ಬೆಳೆ ಈವಾರ 115ರೂಗೆ ಏರಿಕೆ
ಕಳೆದವಾರ 80 ರೂ ಹೆಸರಬೆಳೆ ಬೆಲೆ ಈವಾರ 95ರೂಗೆ ಏರಿಕೆ
ಕಳೆದವಾರ 95 ರೂ ಇದ್ದ ಬಟಾಣಿ ಬೆಲೆ ಈವಾರ 120ಕ್ಕೆ ಏರಿಕೆ
ಕಳೆದವಾರ 108 ರೂ ಇದ್ದ ಶೇಂಗಾ ಬೆಲೆ ಈವಾರ 116ರೂಗೆ ಏರಿಕೆ
ಅಡುಗೆ ಎಣ್ಣೆ 120 ರಿಂದ 150ರೂಗೆ ಏರಿಕೆ
ಅಕ್ಕಿ ಪ್ರತಿ 25 ಕೆ.ಜಿಗೆ 100 ರೂಪಾಯಿ ಹೆಚ್ಚಳ
ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ-91.97 ಪೈಸ್ ಇದೆ. ಡಿಸೇಲ್ ಇಂದಿನ ದರ- 84.12 ಪೈಸ್ ಇದೆ. ಅಡುಗೆ ಅನಿಲ ಇಂದಿನ ಬೆಲೆ- 772 ರುಪಾಯಿ ಇದೆ. ಕಮರ್ಷಿಯಲ್ ಸಿಲಿಂಡರ್ ಇಂದಿನ ಬೆಲೆ-ಒಂದಕ್ಕೆ- 1575 ರುಪಾಯಿ ಶನಿವಾರ-1584.50 ಇತ್ತು. (9 ರೂಪಾಯಿ 50 ಪೈಸ್ ಕಡಿಮೆ ಆಗಿದೆ)
ಇದನ್ನೂ ಓದಿ: Petrol Price Today: ಶತಕದ ಹಾದಿಯತ್ತ ಪೆಟ್ರೋಲ್ ದರ.. 26 ಪೈಸೆ ಹೆಚ್ಚಳ
Published On - 1:04 pm, Mon, 15 February 21