Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ಶ್ರೀಮಂತರನ್ನೂ ಮೀರಿಸಿದ ಗೌತಮ್ ಅದಾನಿ; ಇವರ ಮುಂದೆ ಬೆಜೋಸ್, ಮಸ್ಕ್ ಕೂಡ ಮಸುಕು

ಭಾರತದ ಉದ್ಯಮಿ ಗೌತಮ್ ಅದಾನಿ ಹೊಸ ದಾಖಲೆ ಬರೆದಿದ್ದಾರೆ. ಈ ವರ್ಷ ಅತಿ ಹೆಚ್ಚು ಸಂಪತ್ತು ಗಳಿಸಿದವರ ಪಟ್ಟಿಯಲ್ಲಿ ಜೆಫ್ ಬೆಜೋಸ್, ಎಲಾನ್ ಮಸ್ಕ್​ರನ್ನೂ ಅವರು ಮೀರಿಸಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತರನ್ನೂ ಮೀರಿಸಿದ ಗೌತಮ್ ಅದಾನಿ; ಇವರ ಮುಂದೆ ಬೆಜೋಸ್, ಮಸ್ಕ್ ಕೂಡ ಮಸುಕು
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
Srinivas Mata
|

Updated on:Mar 12, 2021 | 6:58 PM

ವಿಶ್ವದ ಅತ್ಯಂತ ಸಿರಿವಂತರು ಎನಿಸಿಕೊಂಡ ಜೆಫ್ ಬೆಜೋಸ್, ಎಲಾನ್ ಮಸ್ಕ್​ರನ್ನೂ ಮೀರಿಸುವಂಥ ದಾಖಲೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಈ ವರ್ಷ ಮಾಡಿದ್ದಾರೆ. ಅದೇನು ಅಂತೀರಾ? ಬಂದರು ಉದ್ಯಮದಿಂದ ಪವರ್ ಪ್ಲಾಂಟ್​​ಗಳ ತನಕ ವ್ಯವಹಾರ ಹೊಂದಿರುವ ಗೌತಮ್ ಅದಾನಿ ಅವರ ಆಸ್ತಿಯು ಈ ವರ್ಷ 2021ರಲ್ಲಿ ಬೆಜೋಸ್, ಮಸ್ಕ್​​ಗಿಂತ ಹೆಚ್ಚು ಸಂಪತ್ತನ್ನು ಸೇರ್ಪಡೆ ಆಗುವಂತೆ ಮಾಡಿದೆ.

ಅಂದ ಹಾಗೆ ಗೌತಮ್ ಅದಾನಿ ಸಾರ್ವಜನಿಕವಾಗಿ ಮಾತನಾಡುವುದು ಅಪರೂಪ. ಅವರ ಆಸ್ತಿ ಮೌಲ್ಯವು 2021ರ ಆರಂಭದಲ್ಲಿ 1620 ಕೋಟಿ ಅಮೆರಿಕನ್ ಡಾಲರ್ ಇದ್ದದ್ದು 5000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಇದು ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದಿಂದ ತಿಳಿದುಬಂದಿರುವ ಮಾಹಿತಿ. ಆ ಮೂಲಕ 2021ರಲ್ಲಿ ಅತಿ ಹೆಚ್ಚು ಸಂಪತ್ತು ಗಳಿಸಿದ ವ್ಯಕ್ತಿ ಎಂಬ ಕಿರೀಟ ಹೊತ್ತು, ಬೆಜೋಸ್ ಹಾಗೂ ಮಸ್ಕ್ ದಾಖಲೆ ಗಳಿಕೆಯನ್ನೂ ಅದಾನಿ ಮಂಕಾಗಿಸಿದ್ದಾರೆ.

ಅದಾನಿ ಸಮೂಹದ ಷೇರುಗಳಲ್ಲಿ ಒಂದನ್ನು ಹೊರತುಪಡಿಸಿ, ಉಳಿದವು ಈ ವರ್ಷ ಕನಿಷ್ಠ ಶೇಕಡಾ 50ರಷ್ಟು ಏರಿಕೆ ದಾಖಲಿಸಿವೆ. ಏಷ್ಯಾದ ಅತಿ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಆಸ್ತಿಯಲ್ಲಿ 810 ಕೋಟಿ ಅಮೆರಿಕನ್ ದಾಲರ್ ಹೆಚ್ಚಾಗಿದೆ. ಅದಾನಿ ಸಮೂಹದ ಕಂಪೆನಿಗಳು ಬಹಳ ವೇಗವಾಗಿ ಉದ್ಯಮದ ವಿಸ್ತರಣೆ ಮಾಡುತ್ತಿವೆ. ಬಂದರು, ವಿಮಾನ ನಿಲ್ದಾಣಗಳು, ಡೇಟಾ ಸೆಂಟರ್​ಗಳು ಮತ್ತು ಕಲ್ಲಿದ್ದಲು ನಿಕ್ಷೇಪಗಳು ಹೀಗೆ ಸೇರ್ಪಡೆ ಮಾಡುತ್ತಲೇ ಸಾಗುತ್ತಿದೆ. ಇನ್ನು ಆಸ್ಟ್ರೇಲಿಯಾದ ವಿವಾದಾತ್ಮಕ ಕಾರ್​ಮೈಕೆಲ್ ಕಲ್ಲಿದ್ದಲು ಯೋಜನೆಯನ್ನೂ ಅವರು ಮುಂದುವರಿಸಿದ್ದಾರೆ.

ಮಾರ್ಕೆಟ್ ಸೈಕಲ್​ನಲ್ಲಿ ಯಾವುದು ಪ್ರಮುಖವಾಗಿರುತ್ತದೋ ಅದನ್ನು ಅದಾನಿ ವಿಸ್ತರಿಕೊಳ್ಳುತ್ತಲೇ ಬರುತ್ತಿದೆ. ಈಗ ಡೇಟಾ ಸೆಂಟರ್​ಗಳ ವ್ಯವಹಾರಕ್ಕೆ ಪದಾರ್ಪಣೆ ಮಾಡುವ ಮೂಲಕ ಈ ಗುಂಪು ತಂತ್ರಜ್ಞಾನ ವ್ಯವಹಾರದಲ್ಲಿ ಮುಂದಡಿ ಇಡುತ್ತಿದೆ ಎಂದು ನೈಕಾ ಅಡ್ವೈಸರಿ ಸರ್ವೀಸಸ್ ಸಿಇಒ ಸುನೀಲ್ ಚಂದ್ರಮಣಿ ಹೇಳಿದ್ದಾರೆ. 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಕೇಂದ್ರವನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಅದಾನಿ ಎಂಟರ್​ಪ್ರೈಸ್ ಒಪ್ಪಂದಕ್ಕೆ ಸಹಿ ಹಾಕಿದೆ.

ಅದಾನಿ ಟೋಟಲ್ ಗ್ಯಾಸ ಲಿ. ಈ ವರ್ಷ ಶೇಕಡಾ 96ರಷ್ಟು ಏರಿಕೆಯಾಗಿದೆ. ಇನ್ನು ಅದಾನಿ ಎಂಟರ್​​ಪ್ರೈಸಸ್ ಶೇ 90, ಅದಾನಿ ಟ್ರಾನ್ಸ್​ಮಿಷನ್ ಶೇ 79, ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ಸ್ ಶೇ 52ಕ್ಕೂ ಹೆಚ್ಚು ಗಳಿಕೆ ಕಂಡಿದೆ. ಇನ್ನು ಅದಾನಿ ಗ್ರೀನ್ ಎನರ್ಜಿ ಕಳೆದ ವರ್ಷ ಶೇಕಡಾ 500ಕ್ಕೂ ಹೆಚ್ಚಯ ಏರಿಕೆ ಕಂಡ ಮೇಲೆ ಈ ವರ್ಷ ಇಲ್ಲಿಯ ತನಕ ಶೇ 12ರಷ್ಟು ಮೇಲೇರಿದೆ.

Hurun Global Rich List: Hurunನಿಂದ ಭಾರತದ ಅತ್ಯಂತ ಸಿರಿವಂತರ ಟಾಪ್ 10 ಪಟ್ಟಿ ಬಿಡುಗಡೆ: ಮುಕೇಶ್ ಅಂಬಾನಿ ನಂಬರ್ ಒನ್

Published On - 6:49 pm, Fri, 12 March 21

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ