ಕುಮಾರಸ್ವಾಮಿ CM ಆಗಲು ಗುಲಾಂ ನಬಿ ಆಜಾದ್ ಕಾರಣರಾಗಿದ್ರು, ಮುಂದೆ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್ ಡಿ ದೇವೇಗೌಡ
HD Devegowda prises Ghulam Nabi Azad ಗುಲಾಂ ನಬೀ ಆಜಾದ್ ತಮ್ಮ ವಿದಾಯ ಭಾಷಣದ ವೇಳೆ ಕಣ್ಣೀರು ಹಾಕಿದ್ದರು. ಈ ಸಂದರ್ಭವನ್ನು ಇಂದು ಮೆಲುಕು ಹಾಕಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಗುಲಾಂ ನಬಿ ಆಜಾದ್ ಭಾವುಕರಾಗಿ ಮಾತನಾಡಿದ್ದಾರೆ. ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲು ಗುಲಾಂ ನಬಿ ಆಜಾದ್ ಅವರು ಕಾರಣರಾಗಿದ್ದರು. ಕೆಲ ಕಾಂಗ್ರೆಸ್ಸಿಗರು ಬಿಜೆಪಿ ಜತೆ ಹೋಗಲು ಸಿದ್ಧರಿದ್ದರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಾಯಚೂರು: ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬೀ ಆಜಾದ್ರ(Ghulam Nabi Azad) ರಾಜ್ಯಸಭಾ ಅವಧಿ ಮುಕ್ತಾಯವಾಗಲಿದ್ದು, ವಿದಾಯದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದರು. ಅದಾದ ಬಳಿಕ ಗುಲಾಂ ನಬೀ ಆಜಾದ್ ಅವರೂ ತಮ್ಮ ವಿದಾಯ ಭಾಷಣದ ವೇಳೆ ಕಣ್ಣೀರು ಹಾಕಿದ್ದರು. ಈ ಸಂದರ್ಭವನ್ನು ಇಂದು ಮೆಲುಕು ಹಾಕಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಅವರು ಗುಲಾಂ ನಬಿ ಆಜಾದ್ ಭಾವುಕರಾಗಿ ಮಾತನಾಡಿದ್ದಾರೆ. ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲು ಗುಲಾಂ ನಬಿ ಆಜಾದ್ ಅವರು ಕಾರಣರಾಗಿದ್ದರು. ಕೆಲ ಕಾಂಗ್ರೆಸ್ಸಿಗರು ಬಿಜೆಪಿ ಜತೆ ಹೋಗಲು ಸಿದ್ಧರಿದ್ದರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗಕ್ಕೆ ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡರು ಇಂದು ಗಾಣದಾಳದ ರೈತ, ತಮ್ಮ ಅಭಿಮಾನಿ ಪ್ರಭುಗೌಡ ಮನೆಗೆ ಭೇಟಿ ನೀಡಿಲಿದ್ದಾರೆ. ನೀರಾವರಿ ಯೋಜನೆ ಕೊಟ್ಟ ಹಿನ್ನೆಲೆಯಲ್ಲಿ ಪ್ರಭುಗೌಡ ಅವರು ಹೆಚ್.ಡಿ.ದೇವೇಗೌಡ ಮೂರ್ತಿ ನಿರ್ಮಿಸಿದ್ದಾರೆ. ಬಳಿಕ ದೇವದುರ್ಗ ಪಟ್ಟಣದಲ್ಲಿ JDS ಸಮಾವೇಶ ನಡೆಯಲಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ HDD ಚಾಲನೆ ನೀಡಲಿದ್ದಾರೆ.
ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ತಮ್ಮ ಭೇಟಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ದೇವೇಗೌಡ ಅವರು ನಾಲ್ಕು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ತಮಿಳುನಾಡಿನಲ್ಲಿ ಈಗ ಸ್ಟಾಲಿನ್ ಅವರಿಗೆ ಹೆಚ್ಚು ಶಕ್ತಿ ಇದೆ ಎಂಬ ಅಭಿಪ್ರಾಯವಿದೆ. ಇನ್ನು ಕೇರಳದಲ್ಲಿ ಎಲ್ಡಿಎಫ್ಗೆ ಶಕ್ತಿ ಇದೆ ಎಂಬ ಅಭಿಪ್ರಾಯವಿದೆ. ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಹೋರಾಟ ನಡೀತಿದೆ. ಮಮತಾ ಬ್ಯಾನರ್ಜಿಗೆ ಬಹಳ ಕಷ್ಟ ಇದೆ. ಬಿಜೆಪಿಯೂ ಹೆಚ್ಚು ಗಮನ ಹರಿಸ್ತಾ ಇದೆ. ಅಲ್ಲಿ ಅಧಿಕಾರಿಗಳ ಬದಲಾವಣೆ ಶುರುವಾಗಿದೆ. ಮಮತಾ ಬ್ಯಾನರ್ಜಿ ಹೋರಾಟ ಮೆಚ್ಚುವಂತದ್ದು. ಮೂರನೇ ಬಾರಿಯೂ ಮಮತಾ ಬ್ಯಾನರ್ಜಿ ಸಿಎಂ ಆಗಲಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.
ಕೃಷಿ ಮಸೂದೆ ಬಿಲ್ ಅಂಗೀಕಾರ ಬಿಜೆಪಿ ಮಾಡಿದ್ದು ತಪ್ಪು.. ಇನ್ನು, ಕೇಂದ್ರದ 3 ಕೃಷಿ ತಿದ್ದುಪಡಿ ಕಾಯ್ದೆಗಳ ಜಾರಿ ವಿಚಾರವಾಗಿ ಮಾತಾಡಿರುವ ಹೆಚ್.ಡಿ.ದೇವೇಗೌಡ ಅವರು ಈ ಸಂದರ್ಭದಲ್ಲಿ ಕಾಯ್ದೆ ಜಾರಿ ಮಾಡಿರುವುದು ತಪ್ಪು. ಎರಡು ತಿಂಗಳ ಕಾಲ ಮುಂದಕ್ಕೆ ಹಾಕುವಂತೆ ಹೇಳಿದ್ದೆ. ರೈತರಿಗೆ ಅನಗತ್ಯ ಹಿಂಸೆ ಕೊಡದಂತೆ ನಾನು ಹೇಳಿದ್ದೆ. ಇದು ಪ್ರತಿಷ್ಠೆಯಾಗಬಾರದೆಂದೂ ಸಹ ನಾನು ಹೇಳಿದ್ದೆ. ರೈತರಿಗೆ ತಮ್ಮ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಮೂರು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಕೊರೆಯುವ ಚಳಿ ಮಧ್ಯೆ ಕಷ್ಟದಲ್ಲಿ ಹೋರಾಟ ಮಾಡ್ತಿದ್ದಾರೆ. ಇಂತಹ ರೈತರು ಗಣರಾಜ್ಯೊತ್ಸವದ ದಿನ ಗಲಾಟೆ ಮಾಡ್ತಾರೆ ಅಂದ್ರೆ ಹೇಗೆ ನಂಬಬೇಕು. ಖಲಿಸ್ತಾನ ಕೈವಾಡ ವಿಚಾರ ಇದೆಲ್ಲ ಉಯಾಪೋಹ. ಇದಕ್ಕೆಲ್ಲ ಸಂಸತ್ತಿನಲ್ಲಿ ಕೇಳ್ತೇನೆ. ರೌಡಿ ಎಲಿಮೆಂಟ್ಸ್ ಮಾಡಿದಾರೆಂಬ ಉಹಾಪೋಹ ಎಬ್ಬಿಸಿದ್ದಾರೆ. ಗೃಹಮಂತ್ರಿ ಅಮಿತ್ ಶಾ ಅವರು ಈ ವಿಚಾರವನ್ನು ಆಧಾರ ಇಟ್ಕೊಂಡು ಮಾತಾಡ ಬೇಕಾಗುತ್ತದೆ. ಅದರಲ್ಲಿ ರೌಡಿ ಎಲಿಮೆಂಟ್ಸ್ ಇರುವುದು ಊಹಾಪೋಹವಷ್ಟೇ ಎಂದು ಹೇಳಿದ್ದಾರೆ.
Narendra Modi: ವಿಪಕ್ಷ ನಾಯಕ ಗುಲಾಂ ನಬೀ ಆಜಾದ್ಗೆ ವಿದಾಯ: ಭಾಷಣದ ವೇಳೆ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ
Published On - 11:34 am, Wed, 10 February 21