ಜಿಮ್ಸ್​ನಲ್ಲಿ ಮರುಕಳಿಸಿದ ಅಮಾನವೀಯ ಘಟನೆ: ಬೆಡ್​ನಿಂದ ರೋಗಿ ಕೆಳಗೆ ಬಿದ್ದರೂ ಡೋಂಟ್​ಕೇರ್

ಜಿಮ್ಸ್​ನಲ್ಲಿ ಮರುಕಳಿಸಿದ ಅಮಾನವೀಯ ಘಟನೆ: ಬೆಡ್​ನಿಂದ ರೋಗಿ ಕೆಳಗೆ ಬಿದ್ದರೂ ಡೋಂಟ್​ಕೇರ್

ಗದಗ: ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬೆಡ್​ನಿಂದ ರೋಗಿಯೊಬ್ಬ ಕೆಳಗೆ ಬಿದ್ದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿರುವುದು ಕಂಡು ಬಂದಿದೆ. ತುರ್ತು ಚಿಕಿತ್ಸಾ ಘಟಕದ ವಾರ್ಡ್​ನಲ್ಲೇ ರೋಗಿ ನರಳಾಡ್ತಿದ್ದಾರೆ. ಆದರೆ ವೈದ್ಯರು, ಸಿಬ್ಬಂದಿ ಅಲ್ಲೇ ಓಡಾಡುತ್ತಿದ್ರೂ ಕ್ಯಾರೆ ಎಂದಿಲ್ಲ. ಆಸ್ಪತ್ರೆ ಸಿಬ್ಬಂದಿ ಟಿವಿ9 ಕ್ಯಾಮರಾ ಕಂಡು ಓಡೋಡಿ ಬಂದು ರೋಗಿಯನ್ನ ಬೆಡ್ ಮೇಲೆ ಹಾಕಿದ್ದಾರೆ.

ವೈದ್ಯರ ಮೇಲೆ ನಂಬಿಕೆ ಇಟ್ಟು ರೋಗಿಗಳು ಆಸ್ಪತ್ರೆಗೆ ಹೋಗ್ತಾರೆ. ಆದರೆ ಅಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಆಗಬಾರದ ಅನಾಹುತ ಸಂಭವಿಸುತ್ತೆ. ನಿನ್ನೆ ಕೂಡ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ತಾಯಿ ಮಗುವಿಗೆ ಚಿಕಿತ್ಸೆ ನೀಡುವಲ್ಲಿ ಅಮಾನವೀಯವಾಗಿ ವರ್ತಿಸಿತ್ತು. ಇಂದೂ ಕೂಡ ಇಂತಹ ಘಟನೆ ಮರುಕಳಿಸಿದೆ.

ರೋಗಿಯನ್ನ ಬೆಡ್ ಮೇಲೆ ಮಲಗಿಸಿದಾಗ ಆತನ ಆರೋಗ್ಯ ನೋಡಿಕೊಳ್ಳಲು ಯಾವ ಸಿಬ್ಬಂದಿಯೂ ಇರುವುದಿಲ್ಲ. ಇದರಿಂದ ರೋಗಿಗಳು ಬಹಳಷ್ಟು ನೋವನ್ನು ಅನುಭವಿಸುತ್ತಿದ್ದಾರೆ. ಡ್ಯೂಟಿ ಡಾಕ್ಟರ್ ಇಲ್ಲದೇ ಇರೋದೇ ಘಟನೆಗೆ ಕಾರಣ ಎಂದು ಜಿಮ್ಸ್ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸುಟ್ಟ ಗಾಯದಿಂದ ತಾಯಿ, ಮಗು ಚೀರಾಟ: ತುರ್ತು ಚಿಕಿತ್ಸೆಗೆ ಸತಾಯಿಸಿದ ಜಿಮ್ಸ್ ವಿರುದ್ಧ ಸಂಬಂಧಿಕರ ಆಕ್ರೋಶ