ಕತ್ತಿಗೆ ಕೈ ಹಾಕಿ ಸರಗಳ್ಳತನ, ವೃದ್ಧೆ ಆಸ್ಪತ್ರೆಗೆ ದಾಖಲು
ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ. ಪೂಜಾ ಸಾಮಗ್ರಿ ಖರೀದಿಸಲು ಹೋಗುತ್ತಿದ್ದ ವೃದ್ಧೆಯ ಸರ ಎಗರಿಸಿ ಕಳ್ಳ ಎಸ್ಕೇಪ್ ಆಗಿರುವ ಘಟನೆ ಕೆಂಗೇರಿ ಬಳಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಹಿಂಬದಿಯಿಂದ ಬೈಕ್ನಲ್ಲಿ ಬಂದ ಸರಗಳ್ಳ ಒಂದು ಕೈಯಲ್ಲಿ ಬೈಕ್ ಓಡಿಸುತ್ತ ಮತ್ತೊಂದು ಕೈಯಿಂದ ವೃದ್ಧೆಯ ಕತ್ತಿಗೆ ಕೈ ಹಾಕಿ ಸರ ಕದ್ದಿದ್ದಾನೆ. ಕಳೆದ ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ಸರೋಜಮ್ಮ ಎಂಬುವವರು ಪೂಜಾ ಸಾಮಗ್ರಿ ತರಲು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಹಿಂಬದಿಯಿಂದ ಬಂದು ಕ್ಷಣಾರ್ಧದಲ್ಲಿ ಕುತ್ತಿಗೆಯಲ್ಲಿದ್ದ ಸರ […]
ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ. ಪೂಜಾ ಸಾಮಗ್ರಿ ಖರೀದಿಸಲು ಹೋಗುತ್ತಿದ್ದ ವೃದ್ಧೆಯ ಸರ ಎಗರಿಸಿ ಕಳ್ಳ ಎಸ್ಕೇಪ್ ಆಗಿರುವ ಘಟನೆ ಕೆಂಗೇರಿ ಬಳಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಹಿಂಬದಿಯಿಂದ ಬೈಕ್ನಲ್ಲಿ ಬಂದ ಸರಗಳ್ಳ ಒಂದು ಕೈಯಲ್ಲಿ ಬೈಕ್ ಓಡಿಸುತ್ತ ಮತ್ತೊಂದು ಕೈಯಿಂದ ವೃದ್ಧೆಯ ಕತ್ತಿಗೆ ಕೈ ಹಾಕಿ ಸರ ಕದ್ದಿದ್ದಾನೆ.
ಕಳೆದ ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ಸರೋಜಮ್ಮ ಎಂಬುವವರು ಪೂಜಾ ಸಾಮಗ್ರಿ ತರಲು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಹಿಂಬದಿಯಿಂದ ಬಂದು ಕ್ಷಣಾರ್ಧದಲ್ಲಿ ಕುತ್ತಿಗೆಯಲ್ಲಿದ್ದ ಸರ ಕಸಿದು ಕಳ್ಳ ಪರಾರಿಯಾಗಿದ್ದಾನೆ. ಆರೋಪಿ ಚಿನ್ನದ ಸರ ಕಸಿದ ರಭಸಕ್ಕೆ ವೃದ್ಧೆ ರಸ್ತೆ ಮೇಲೆ ಬಿದ್ದಿದ್ದಾರೆ.
ಈ ಪರಿಣಾಮ ವೃದ್ಧೆಯ ಮೊಣಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಗಾಯಾಳು ವೃದ್ಧೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ದುಷ್ಕೃತ್ಯ ಏರಿಯಾದ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.