ರೋಹಿತ್ ಮತ್ತು ಇಶಾಂತ್ ಶರ್ಮ ಆಸ್ಟ್ರೇಲಿಯ ಪ್ರವಾಸಕ್ಕೆ ಲಭ್ಯರಿಲ್ಲ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸ್ಟ್ರೇಲಿಯ ಪ್ರವಾಸಕ್ಕೆ ಟೆಸ್ಟ್, ಒಡಿಐ ಮತ್ತು ಟಿ20ಐ ಕ್ರಿಕೆಟ್–ಮೂರು ಫಾರ್ಮಾಟ್ಗಳಲ್ಲಾಡುವ ತಂಡದ ಸದಸ್ಯರ ಹೆಸರುಗಳನ್ನು ಇಂದು ಪ್ರಕಟಿಸಿತು. ಮೂರು ಟೀಮುಗಳಿಗೂ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ಘೋಷಿಸಲಾಗಿದೆ. ಟೆಸ್ಟ್ ತಂಡದಲ್ಲಿ ಕರ್ನಾಟಕದ ಇಬ್ಬರನ್ನು–ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಆಯ್ಕೆ ಮಾಡಲಾಗಿದೆ. ಗಾಯಗೊಂಡಿರುವ ಆರಂಭ ಆಟಗಾರ ರೋಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ, ಆವರ ಚೇತರಿಕೆಯ ಮೇಲೆ ನಿಗಾ ಇಡಲಾಗುವುದೆಂದು ಬಿಸಿಸಿಐ ತಿಳಿಸಿದೆ. ಟೆಸ್ಟ್ಗಳಲ್ಲಾಡುವ ಟೀಮು ಇಂತಿದೆ: ವಿರಾಟ್ […]
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸ್ಟ್ರೇಲಿಯ ಪ್ರವಾಸಕ್ಕೆ ಟೆಸ್ಟ್, ಒಡಿಐ ಮತ್ತು ಟಿ20ಐ ಕ್ರಿಕೆಟ್–ಮೂರು ಫಾರ್ಮಾಟ್ಗಳಲ್ಲಾಡುವ ತಂಡದ ಸದಸ್ಯರ ಹೆಸರುಗಳನ್ನು ಇಂದು ಪ್ರಕಟಿಸಿತು. ಮೂರು ಟೀಮುಗಳಿಗೂ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ಘೋಷಿಸಲಾಗಿದೆ. ಟೆಸ್ಟ್ ತಂಡದಲ್ಲಿ ಕರ್ನಾಟಕದ ಇಬ್ಬರನ್ನು–ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಆಯ್ಕೆ ಮಾಡಲಾಗಿದೆ. ಗಾಯಗೊಂಡಿರುವ ಆರಂಭ ಆಟಗಾರ ರೋಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ, ಆವರ ಚೇತರಿಕೆಯ ಮೇಲೆ ನಿಗಾ ಇಡಲಾಗುವುದೆಂದು ಬಿಸಿಸಿಐ ತಿಳಿಸಿದೆ.
ಟೆಸ್ಟ್ಗಳಲ್ಲಾಡುವ ಟೀಮು ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ (ಉಪ-ನಾಯಕ), ಹನುಮ ವಿಹಾರಿ, ಶುಬ್ಮನ್ ಗಿಲ್, ವೃದ್ಧಿಮನ್ ಸಹಾ (ವಿಕೆಟ್ಕೀಪರ್), ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್.
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಟೀಮು ಇಂತಿದೆ: ವಿರಾಟ್ ಕೊಹ್ಲಿ, ಶಿಖರ್ ಧವನ್, ಶುಬ್ಮನ್ ಗಿಲ್, ಕೆಎಲ್ ರಾಹುಲ್ (ಉಪ-ನಾಯಕ ಮತ್ತು ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕುರ್.
ಟಿ20ಐ ಪಂದ್ಯಗಳಿಗೆ ಭಾರತದ ತಂಡ: ವಿರಾಟ್ ಕೊಹ್ಲಿ, ಶಿಖರ್ ಧವನ್, ಮಾಯಾಂಕ್ ಅಗರರವಾಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್ ಮತ್ತು ವರುಣ್ ಚಕ್ರವರ್ತಿ