Gold Rate: ಪ್ರೇಮಿಗಳ ದಿನಕ್ಕೆ ಇಳಿಕೆ ಕಂಡ ಚಿನ್ನದ ದರ; ಉಡುಗೊರೆ ನೀಡಲು ಹೊರಟ ಪ್ರೇಮಿಗಳಿಗೆ ಸಂತಸದ ವಿಚಾರ

| Updated By: Digi Tech Desk

Updated on: Feb 17, 2021 | 8:56 AM

Gold Silver Price: ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡುತ್ತಿದ್ದೆ. ಅದರಲ್ಲೂ ಪ್ರೇಮಿಗಳ ದಿನವಾದ ಇಂದು ದರ ಇಳಿಕೆ ಕಂಡಿರುವುದು ಉಡುಗೊರೆಯಾಗಿ ಚಿನ್ನ ನೀಡಲು ಹೊರಟಿರುವ ಜೋಡಿಗಳಿಗೆ ಖುಷಿಯುಂಟು ಮಾಡಿದೆ.

Gold Rate: ಪ್ರೇಮಿಗಳ ದಿನಕ್ಕೆ ಇಳಿಕೆ ಕಂಡ ಚಿನ್ನದ ದರ; ಉಡುಗೊರೆ ನೀಡಲು ಹೊರಟ ಪ್ರೇಮಿಗಳಿಗೆ ಸಂತಸದ ವಿಚಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಚಿನ್ನದ ಬೆಲೆಯಲ್ಲಿ 2 ದಿನಗಳಿಂದ ಗಮನಿಸಿದರೆ ದರದಲ್ಲಿ ವ್ಯತ್ಯಾಸ ಕಂಡಿದೆ. ದರ ಇಳಿಕೆಯತ್ತ ಮುಖ ಮಾಡಿದೆ. ನಗರದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದ್ದು, 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ ₹44,250 , ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ₹48,290 ಆಗಿದೆ. 2 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ ಚಿನ್ನದಲ್ಲಿ ಇಂದೂ ಕೂಡಾ ಇಳಿಕೆ ಕಂಡಿದ್ದು, ಪ್ರೇಮಿಗಳಿಗೆ ಲಾಟರಿ ಸಿಕ್ಕಂತಾಗಿದೆ. ಪ್ರೇಮಿಗಳ ದಿನವಾದ ಇಂದು ಚಿನ್ನವನ್ನು ಉಡುಗೊರೆಯಾಗಿ ನೀಡಲು ಪ್ಲಾನ್​ ಮಾಡಿದ್ದ ಜೋಡಿಗಳಿಗೆ ಇದು ಖುಷಿಯ ವಿಚಾರ.

ನಿನ್ನೆಗಿಂತ ಇಂದು ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದರೆ, ಬೆಳ್ಳಿದರದಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಚಿನ್ನವನ್ನು ಯಾವಾಗ ಕೊಂಡುಕೊಳ್ಳುವುದು ಎಂಬ ಸಂದೇಹ ಮೂಡುವುದು ಸಹಜ. ಚಿನ್ನ ಬಹಳ ಜನಪ್ರಿಯ ಸರಕು. ಹಣ ದುಬ್ಬರ, ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆ, ಜ್ಯುವೆಲರಿ ಮಾರುಕಟ್ಟೆ, ಬಡ್ಡಿ ದರ ಹೀಗೆ ಅನೇಕ ವಿಷಯಗಳು ಚಿನ್ನದ ಬೆಲೆಯ ಏರಿಳಿತಕ್ಕೆ ನೇರವಾಗಿ ಕಾರಣವಾಗಿರುತ್ತದೆ. 2ದಿನಗಳಿಂದ ಚಿನ್ನದ ದರ ಸ್ವಲ್ಪ ಇಳಿಕೆಯತ್ತ ಸಾಗುತ್ತಿರುವುದರಿಂದ ಪ್ರೇಮಿಗಳ ದಿನವಾದ ಇಂದು ದರ ಕಡಿಮೆ ಆಗಿದ್ದು, ಅದೆಷ್ಟೋ ಜೋಡಿಗಳು ಚಿನ್ನವನ್ನು ಸರ್ಪ್ರೈಸ್​ ಉಡುಗೊರೆಯಾಗಿ ನೀಡಬೇಕೆಂದು ಪ್ಲಾನ್​ ಮಾಡಿಕೊಂಡಿರುತ್ತಾರೆ. ಹಾಗಾಗಿ ಚಿನ್ನದ ದರ ಇಳಿಕೆಯಾಗಿರುವುದು ಪ್ರೇಮಿಗಳಿಗೆ ಖುಷಿ ತಂದಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್:
ಗ್ರಾಂ       22 ಕ್ರಾರೆಟ್ ಚಿನ್ನ (ಇಂದು)

1 ಗ್ರಾಂ            ₹4,425
8ಗ್ರಾಂ            ₹35,400
10 ಗ್ರಾಂ         ₹44,250
100ಗ್ರಾಂ        ₹4,42,500

24 ಕ್ಯಾರೆಟ್ ಚಿನ್ನದ ಬೆಲೆ:
ಗ್ರಾಂ         ಇಂದು

1ಗ್ರಾಂ         ₹4,829
8ಗ್ರಾಂ        ₹38,632
10ಗ್ರಾಂ      ₹48,290
100ಗ್ರಾಂ    ₹4,82,900

ಇದನ್ನೂ ಓದಿ: Gold Rate Today: ಗ್ರಾಹಕರಿಗೆ ಸಿಹಿ ಸುದ್ಧಿ; ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಸ್ಪಲ್ಪ ಇಳಿಕೆ!

ಬೆಳ್ಳಿ ದರ:
ಬೆಳ್ಳಿಯ ದರದಲ್ಲೂ ಕೂಡಾ ನಿನ್ನೆಗಿಂತ ಸ್ವಲ್ಪ ಮಟ್ಟಿಗಿನ ಏರಿಕೆ ಕಂಡಿದೆ. ಮನೆಯಲ್ಲಿನ ವಿಶೇಷ ಪೂಜೆಗೆ, ಅಲಂಕಾರಗಳಿಗೆ ಬೆಳ್ಳಿಯನ್ನು ಖರೀದಿಸಲು ಇಂದಿನ ಬೆಳ್ಳಿಯ ದರದ ಮಾಹಿತಿ ಈ ಕೆಳಗಿನಂತಿದೆ. ಒಂದು 1ಕೆಜಿ ಬೆಳ್ಳಿ ₹69,500 ದರವಿದೆ.

ಗ್ರಾಂ      ಬೆಳ್ಳಿ ದರ (ಇಂದು)
1ಗ್ರಾಂ        ₹69.50
8ಗ್ರಾಂ        ₹556
10ಗ್ರಾಂ      ₹695
100 ಗ್ರಾಂ   ₹6,950
1 ಕೆ.ಜಿ         ₹68,500

Published On - 8:43 am, Sun, 14 February 21