Kurnool Road Accident |ಕರ್ನೂಲ್ ಬಳಿ ಲಾರಿ, ಮಿನಿ ಬಸ್ ಮಧ್ಯೆ ಡಿಕ್ಕಿ: 14 ಜನ ದುರ್ಮರಣ

ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ 14 ಜನ ಮೃತಪಟ್ಟಿರುವ ಭೀಕರ ಅಪಘಾತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ತಿ ಬಳಿಯ ಮಾದಾಪುರಂ ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ಮದನಪಲ್ಲಿ ನಿವಾಸಿಗಳು. ಅಪಘಾತದಲ್ಲಿ ಒಂದು ಮಗು, 8 ಮಹಿಳೆಯರು ಸೇರಿ 14 ಜನ ಪ್ರಾಣ ಕಳೆದುಕೊಂಡಿದ್ದಾರೆ.

  • TV9 Web Team
  • Published On - 6:54 AM, 14 Feb 2021
Kurnool Road Accident |ಕರ್ನೂಲ್ ಬಳಿ ಲಾರಿ, ಮಿನಿ ಬಸ್ ಮಧ್ಯೆ ಡಿಕ್ಕಿ: 14 ಜನ ದುರ್ಮರಣ
ಸಾಂದರ್ಭಿಕ ಚಿತ್ರ

ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ 14 ಜನ ಮೃತಪಟ್ಟಿರುವ ಭೀಕರ ಅಪಘಾತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ತಿ ಬಳಿಯ ಮಾದಾಪುರಂ ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ಮದನಪಲ್ಲಿ ನಿವಾಸಿಗಳು. ಅಪಘಾತದಲ್ಲಿ ಒಂದು ಮಗು, 8 ಮಹಿಳೆಯರು ಸೇರಿ 14 ಜನ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ವಲಯದ ಮದಪುರಂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಲಾರಿ ಡಿಕ್ಕಿ ಹೊಡೆದಿದೆ. ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ಅಜ್ಮೀರ್ ದರ್ಗಾಕ್ಕೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಮಿನಿ ಬಸ್‌ನಲ್ಲಿ ಒಟ್ಟು 18 ಪ್ರಯಾಣಿಕರಿದ್ದರು. ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಆಂಧ್ರದ ಕರ್ನೂಲ್‌ ಜಿಲ್ಲೆಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ 14ಜನರ ಸಾವಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರ ಸಂತಾಪ‌‌ ವ್ಯಕ್ತಪಡಿಸಿದ್ದಾರೆ. ಸೂಕ್ತ ಚಿಕಿತ್ಸೆ ಹಾಗೂ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಜಗನ್ ಮೋಹನ್ ರೆಡ್ಡಿ ಸೂಚಿಸಿದ್ದಾರೆ.

ಇದನ್ನೂ ಓದಿ: Raj Kundra Audi Car: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಹಿಟ್ ಅಂಡ್​ ರನ್ ಅಪಘಾತಕ್ಕೆ ತುತ್ತು