Google Search ಸ್ಥಳೀಯ ಭಾಷೆಯಲ್ಲಿ ಹುಡುಕಾಟಕ್ಕೆ ಹೊಸ ಅನ್ವೇಷಣೆ ಮಾಡಿದ ಗೂಗಲ್.. ಆದ್ರೆ ಕನ್ನಡಕ್ಕಿಲ್ಲ ಆದ್ಯತೆ!

| Updated By: ಸಾಧು ಶ್ರೀನಾಥ್​

Updated on: Dec 17, 2020 | 6:06 PM

ಮುಂದಿನ ದಿನಗಳಲ್ಲಿ ನೀವು ಯಾವುದಾದರೂ ವಿಚಾರವನ್ನು ಇಂಗ್ಲಿಷ್​ನಲ್ಲಿ ಸರ್ಚ್​ ಮಾಡಿದಿರಿ ಎಂದಿಟ್ಟುಕೊಳ್ಳಿ. ಅಗ ಅದಕ್ಕೆ ಸಂಬಂಧಿಸಿದ ಸ್ಥಳೀಯ ಭಾಷೆಯ ವಿಚಾರಗಳನ್ನೂ ಗೂಗಲ್ ತೋರಿಸಲಿದೆ.

Google Search ಸ್ಥಳೀಯ ಭಾಷೆಯಲ್ಲಿ ಹುಡುಕಾಟಕ್ಕೆ ಹೊಸ ಅನ್ವೇಷಣೆ ಮಾಡಿದ ಗೂಗಲ್.. ಆದ್ರೆ ಕನ್ನಡಕ್ಕಿಲ್ಲ ಆದ್ಯತೆ!
ಪ್ರಾತಿನಿಧಿಕ ಚಿತ್ರ
Follow us on

ಬಳಕೆದಾರರಿಗೆ ಅನುಕೂಲ ಮಾಡಿಕೊಡಲು ಸದಾ ಹೊಸ ಹೊಸ ಅನ್ವೇಷಣೆಗಳನ್ನು ಗೂಗಲ್​ ಪರಿಚಯಿಸುತ್ತಲೇ ಇದೆ. ಈಗ ಗೂಗಲ್ ಸ್ಥಳೀಯ ಭಾಷೆಗೆ ಒತ್ತು ನೀಡಲು ಮುಂದಾಗಿದೆ. ಗೂಗಲ್​​ ಸರ್ಚ್​, ಗೂಗಲ್​ ಅಸಿಸ್ಟಂಟ್​, ಗೂಗಲ್ ಮ್ಯಾಪ್​, ಗೂಗಲ್​ ಲೆನ್ಸ್​​ನಲ್ಲಿ ನೀವು ಭಾರತದ ಸ್ಥಳೀಯ ಭಾಷೆಯನ್ನು ಬಳಕೆ ಮಾಡಿ ಹುಡುಕುವ ಅವಕಾಶವನ್ನು ಕಲ್ಪಿಸಿದೆ.

ನೀವು ಗೂಗಲ್​ನಲ್ಲಿ ಟೈಪ್ ಮಾಡಿದ ಯಾವುದೇ ಇಂಗ್ಲಿಷ್​ ಪ್ರಶ್ನೆಯನ್ನು ಹಿಂದಿಗೆ ಬದಲಾಯಿಸಲು ಗೂಗಲ್ ಬಳಕೆದಾರರಿಗೆ ಸಹಾಯ ಮಾಡುತ್ತಿದೆ. ಈಗ ಅದೇ ಸೇವೆ ಭಾರತದ ನಾಲ್ಕು ಸ್ಥಳೀಯ ಭಾಷೆಗಳಿಗೆ ವಿಸ್ತರಣೆ ಆಗಿದೆ. ತಮಿಳು, ತೆಲುಗು, ಬೆಂಗಾಲಿ ಹಾಗೂ ಮರಾಠಿ ಭಾಷೆಗಳನ್ನು ಗೂಗಲ್​ ಸೇರ್ಪಡೆ ಮಾಡುತ್ತಿದೆ. ಹೀಗಾಗಿ, ಈ ನಾಲ್ಕು ಭಾಷೆಯವರಿಗೆ ಸ್ಥಳೀಯ ಭಾಷೆಯಲ್ಲಿ ಗೂಗಲ್​ ಸರ್ಚ್​ ಮಾಡಲು ಸಹಕಾರಿ ಆಗಲಿದೆ.

ಮುಂದಿನ ದಿನಗಳಲ್ಲಿ ನೀವು ಯಾವುದಾದರೂ ವಿಚಾರವನ್ನು ಇಂಗ್ಲಿಷ್​ನಲ್ಲಿ ಸರ್ಚ್​ ಮಾಡಿದಿರಿ ಎಂದಿಟ್ಟುಕೊಳ್ಳಿ. ಆಗ ಅದಕ್ಕೆ ಸಂಬಂಧಿಸಿದ ಸ್ಥಳೀಯ ಭಾಷೆಯ ವಿಚಾರಗಳನ್ನೂ ಗೂಗಲ್ ತೋರಿಸಲಿದೆ. ಸ್ಥಳೀಯ ಭಾಷೆಯಲ್ಲಿ ಸರ್ಚ್​ ಮಾಡಿದರೆ ನಿಮಗೆ ಇಂಗ್ಲಿಷ್​ನಲ್ಲೂ ಫಲಿತಾಂಶ ದೊರೆಯಲಿದೆ.

ನೀವು ಗೂಗಲ್​ನಲ್ಲಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಬಾರಿ ಸ್ಥಳೀಯ ಭಾಷೆಯನ್ನು ಬಳಕೆ ಮಾಡಿ ಸರ್ಚ್​ ಮಾಡಿದರೆ, ಗೂಗಲ್​ ಅದನ್ನು ಪಟ್ಟಿ ಮಾಡಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಗೂಗಲ್ ಅದೇ ಭಾಷೆಯಲ್ಲಿ ಹೆಚ್ಚು ಸರ್ಚ್​ ರಿಸಲ್ಟ್​ ತೋರಿಸಲಿದೆ.

ಗೂಗಲ್​ ಮ್ಯಾಪ್​ನಲ್ಲಿ ಸ್ಥಳೀಯ ಭಾಷೆ
ಗೂಗಲ್​ ಮ್ಯಾಪ್​ನಲ್ಲೂ ಸ್ಥಳೀಯ ಭಾಷೆ ಬಳಕೆ ಮಾಡೋಕೆ ಗೂಗಲ್​ ಹೆಚ್ಚು ಆದ್ಯತೆ ನೀಡುತ್ತಿದೆ. ಸದ್ಯ, 9 ಭಾರತೀಯ ಭಾಷೆಗಳಲ್ಲಿ ಗೂಗಲ್​ ಮ್ಯಾಪ್​ ಸೇವೆ ಒದಗಿಸುತ್ತಿದೆ. ಗೂಗಲ್​ ಮ್ಯಾಪ್​ ಸೆಟ್ಟಿಂಗ್​ಗೆ ತೆರಳಿ ಅಲ್ಲಿ, ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮೂಲಕ ನೀವು ಆಯ್ಕೆ ಮಾಡಿಕೊಂಡ ಭಾಷೆಯಲ್ಲೇ ಸಹಾಯ ಪಡೆಯಬಹುದು.

ಕನ್ನಡಕ್ಕಿಲ್ಲ ಆದ್ಯತೆ
ಈ ಬಾರಿ ಕನ್ನಡಕ್ಕೆ ಗೂಗಲ್​ ಹೆಚ್ಚು ಆದ್ಯತೆ ನೀಡಿಲ್ಲ. ಈ ಕಾರಣಕ್ಕೆ ಹೊಸ ಆವಿಷ್ಕಾರದಲ್ಲಿ ಕನ್ನಡ ಸೇರ್ಪಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಕನ್ನಡವನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ.

ಗೂಗಲ್​ ಉದ್ಯೋಗಿಗಳಿಗೆ ಪತ್ರ​ ಬರೆದ ಸುಂದರ್​ ಪಿಚೈ; ಆ ಇ-ಮೇಲ್​ನಲ್ಲೇನಿದೆ?