ಟಿವಿ9 ಇಂಪ್ಯಾಕ್ಟ್: ಕಸ ನಿರ್ವಹಣೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಿಲ್ಲ ಎಂದ ಬಿಬಿಎಂಪಿ
ಕಸ ಸಂಗ್ರಹಕ್ಕೆ 200 ರೂ. ಶುಲ್ಕ ವಿಧಿಸಲು ಬಿಬಿಎಂಪಿ ಪ್ರಸ್ತಾವನೆ ಮಾಡಿದ ಕುರಿತು ಟಿವಿ9 ನವೆಂಬರ್ 18ರಂದು ವರದಿ ಮಾಡಿತ್ತು. ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ಹೊರೆ ಮಾಡುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.
ಬೆಂಗಳೂರು: ಕಸ ನಿರ್ವಹಣೆಗಾಗಿ ಬಿಬಿಎಂಪಿಗೆ ಜಾಸ್ತಿ ಹಣ ಪಾವತಿಸಬೇಕು ಎಂಬ ಜನರ ಚಿಂತೆಗೆ ತೆರೆಬಿದ್ದಿದೆ. ಕಸ ಸಂಗ್ರಹಕ್ಕಾಗಿ ಬೆಂಗಳೂರು ನಿವಾಸಿಗಳಿಂದ ಪ್ರತ್ಯೇಕ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸ್ಪಷ್ಟನೆ ನೀಡಿದ್ದಾರೆ.
ಕಸ ಸಂಗ್ರಹಕ್ಕೆ 200 ರೂ. ಶುಲ್ಕ ವಿಧಿಸಲು ಬಿಬಿಎಂಪಿ ಪ್ರಸ್ತಾವನೆ ಮಾಡಿದ ಕುರಿತು ಟಿವಿ9 ನವೆಂಬರ್ 18ರಂದು ವರದಿ ಮಾಡಿತ್ತು. ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ಹೊರೆ ಮಾಡುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಇದೀಗ ಟಿವಿ9 ವರದಿಗೆ ಪ್ರತಿಫಲ ಸಿಕ್ಕಿದೆ.
ಬೆಂಗಳೂರು ನಿವಾಸಿಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುವ ಕುರಿತು ಈಗ ಬಿಬಿಎಂಪಿ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಲಿದ್ದಾರೆ. ಅದಕ್ಕಾಗಿ ಜಾಸ್ತಿ ಹಣ ನೀಡಬೇಕು ಎಂಬ ಕುರಿತು ಜನರು ಚಿಂತಿಸಬೇಕಿಲ್ಲ. ಕಸ ಸಂಗ್ರಹಕ್ಕಾಗಿ ಪ್ರತ್ಯೇಕ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.
ಬೆಂಗಳೂರಿನಲ್ಲಿ ಕಸ ಸಂಗ್ರಹ ಶುಲ್ಕ ಮತ್ತಷ್ಟು ದುಬಾರಿ: ಒಪ್ಪುವರೇ ಜನ BBMP ನಿರ್ಣಯವಾ?
Published On - 5:34 pm, Thu, 17 December 20